ದಾವಣಗೆರೆ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಭ್ರಷ್ಟಾಚಾರ ಆರೋಪ

By Kannadaprabha News  |  First Published Oct 15, 2022, 9:04 AM IST

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನಡೆಯುವ ಭ್ರಷ್ಟಾಚಾರ ಖಂಡಿಸಿ ಅ.17ರಂದು ಎಐಟಿಯುಸಿ ನೇತೃತ್ವದಲ್ಲಿ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಎಐಟಿಯುಸಿ ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಕರೆ ನೀಡಿದರು.


ದಾವಣಗೆರೆ (ಅ.15) : ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನಡೆಯುವ ಭ್ರಷ್ಟಾಚಾರ ಖಂಡಿಸಿ ಅ.17ರಂದು ಎಐಟಿಯುಸಿ ನೇತೃತ್ವದಲ್ಲಿ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಎಐಟಿಯುಸಿ ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಕರೆ ನೀಡಿದರು.

ದಾವಣಗೆರೆ ವಿವಿಯ ಆರು ವಿಜ್ಞಾನಿಗಳಿಗೆ ಜಾಗತಿಕ ಮಟ್ಟದಲ್ಲಿ ಸ್ಥಾನ!

Latest Videos

undefined

ನಗರದ ಡಿಸಿಎಂ ಟೌನ್‌ ಶಿಪ್‌ನಲ್ಲಿ ಶುಕ್ರವಾರ ಕಟ್ಟಡ ಕಾರ್ಮಿಕರಿಗೆ ಪ್ರತಿಭಟನೆಯ ಕರಪತ್ರಗಳನ್ನು ಹಂಚಿ ಮಾತನಾಡಿದ ಅವರು, ಕಟ್ಟಡ ಕಾರ್ಮಿಕರಿಗೆ ಮಂಡಳಿಯಿಂದ ಆಗುತ್ತಿರುವ ಅನ್ಯಾಯ, ಅವ್ಯವಸ್ಥೆಯ ವಿರುದ್ಧ ಶೀಘ್ರವೇ ರಾಜ್ಯವ್ಯಾಪಿ ಹೋರಾಟವನ್ನು ಅಂದು ಸಂಘಟನೆ ಹಮ್ಮಿಕೊಂಡಿದ್ದು, ಸಮಸ್ತ ಕಾರ್ಮಿಕರು ಹೋರಾಟಕ್ಕೆ ಧುಮುಕಬೇಕು ಎಂದರು.

ಎಐಟಿಯುಸಿ ಹೋರಾಟದ ಫಲವಾಗಿ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಅಸ್ತಿತ್ವಕ್ಕೆ ಬಂದಿದೆ. ಮಂಡಳಿಯ ಒಂದೊಂದು ರುಪಾಯಿ ಸಹ ಕಾರ್ಮಿಕರ ಬೆವರಿನ ಪ್ರತಿರೂಪ. ಆ ಹಣವನ್ನು ಕಟ್ಟಡ ಕಾರ್ಮಿಕರ ಸೌಲಭ್ಯ, ಕಲ್ಯಾಣಕ್ಕೆ ಬಳಸಬೇಕೆ ಹೊರತು, ರಾಜಕಾರಣಿಗಳು, ಅಧಿಕಾರಿಗಳು ಲೂಟಿ ಮಾಡುವುದಕ್ಕಲ್ಲ. ಅಂತಹ ಕಾರ್ಮಿಕರ ಬೆವರಿನ ಹಣದಲ್ಲಿ ಭ್ರಷ್ಟಾಚಾರ ಮಾಡಲು ಅಲ್ಲ. ಲೂಟಿ ಹೊಡೆಯುವುದಕ್ಕೆ, ದುಂದು ವೆಚ್ಚ ಮಾಡಲು, ಅನ್ಯ ಕಾರ್ಯಕ್ಕೆ ಬಳಸುವುದಕ್ಕೂ ಅವಕಾಶ ನೀಡೆವು ಎಂದು ಅವರು ಸ್ಪಷ್ಟಪಡಿಸಿದರು.

ಕಟ್ಟಡ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಆವರಗೆರೆ ಎಚ್‌.ಜಿ.ಉಮೇಶ ಮಾತನಾಡಿ, ಕಲ್ಯಾಣ ಮಂಡಳಿಯಲ್ಲಿರುವ ಕಟ್ಟಡ ಕಾರ್ಮಿಕರ ಸಬಲೀಕರಣಕ್ಕಾಗಿ ಮೀಸಲಾದ ಹಣವನ್ನು ಆಹಾರ ಕಿಟ್‌, ಟೂಲ್‌ ಕಿಟ್‌, ಬಸ್‌ಪಾಸ್‌ ಮತ್ತಿತರೆ ಅನಗತ್ಯ ಉದ್ದೇಶಗಳಿಗೆ ಬಳಕೆ ಮಾಡಿ, ಅದರಲ್ಲೂ ಭ್ರಷ್ಟಾಚಾರ ಮಾಡಿ, ಲೂಟಿ ಮಾಡುವ ಹುನ್ನಾರ ವ್ಯವಸ್ಥಿತವಾಗಿ ನಡೆಯುತ್ತಿದೆ. ಇದರ ವಿರುದ್ಧ ಅ.17ರಂದು ರಾಜ್ಯವ್ಯಾಪಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕಾರ್ಮಿಕ ವರ್ಗ ಅಂದು ಬೆಳಿಗ್ಗೆ ಇಲ್ಲಿನ ಗಾಂಧಿ ವೃತ್ತಕ್ಕೆ ಬಂದು, ಸರ್ಕಾರದ ಭ್ರಷ್ಟಾಚಾರ ನಡೆಯನ್ನು ಹಿಮ್ಮೆಟ್ಟಿಸಬೇಕು ಎಂದು ಕರೆ ನೀಡಿದರು.

ದಾವಣಗೆರೆಯಿಂದ ‘ಮೀಸಲಾತಿ ಸುಂಟರಗಾಳಿ’ ಶುರು

ಸಂಘಟನೆ ಜಿಲ್ಲಾ ಕಾರ್ಯಾಧ್ಯಕ್ಷ ಪಿ.ಕೆ.ಲಿಂಗರಾಜ, ಉಪಾಧ್ಯಕ್ಷ ಭೀಮಾರೆಡ್ಡಿ, ಸಂಘಟನಾ ಕಾರ್ಯದರ್ಶಿ ಸುರೇಶ, ಮುರುಗೇಶ, ಅಲ್ಲಾಬಕ್ಷಿ ಸಾಬ್‌, ಆವರಗೆರೆ ಸಿದ್ದಲಿಂಗಪ್ಪ, ತಿಪ್ಪೇಶ ಆವರಗೆರೆ, ಜಿ.ಆರ್‌.ನಾಗರಾಜ, ಮೆಹಬೂಬ್‌ ಸಾಬ್‌, ಮೇಸ್ತ್ರಿ ನಾಗರಾಜಪ್ಪ ಸೇರಿದಂತೆ ಕಟ್ಟಡ ಕಾರ್ಮಿಕರು ಇದ್ದರು.

click me!