Chikkamagaluru: ಜಿಲ್ಲೆಗೆ ವಲಸೆ ಬರುವ ಕಾರ್ಮಿಕರ ಮೇಲೆ ಹದ್ದಿನಕಣ್ಣು

Published : Oct 15, 2022, 08:26 AM IST
Chikkamagaluru: ಜಿಲ್ಲೆಗೆ ವಲಸೆ ಬರುವ ಕಾರ್ಮಿಕರ ಮೇಲೆ ಹದ್ದಿನಕಣ್ಣು

ಸಾರಾಂಶ

ಜಿಲ್ಲೆಗೆ ವಲಸೆ ಬರುವ ಕಾರ್ಮಿಕರ ಮೇಲೆ ಹದ್ದಿನಕಣ್ಣು ಕ್ರಿಮಿನಲ್‌ ಚಟುವಟಿಕೆಗೆ ಬ್ರೇಕ್‌ ಕಾರ್ಮಿಕರ ನೋಂದಣಿಗೆ ‘ಕಾರ್ಮಿಕ ಪೋರ್ಟಲ್‌’ ಹೊಸ ಸಾಫ್‌್ಟವೇರ್‌ ಅಳವಡಿಕೆ ಜಿಲ್ಲಾಡಳಿತ ಕ್ರಮಕ್ಕೆ ಸ್ವಾಗತ ಡಿಸಿ ಕೆ.ಎನ್‌.ರಮೇಶ್‌, ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ್‌ ಸಮ್ಮುಖ ಕಾಫಿ ಬೆಳೆಗಾರರ ಸಭೆ

ಚಿಕ್ಕಮಗಳೂರು (ಅ.15) : ಬಾಂಗ್ಲಾ ಸೇರಿದಂತೆ ವಿವಿಧ ರಾಷ್ಟ್ರಗಳಿಂದ ವಲಸಿಗರು ಕಾಫಿನಾಡಿಗೆ ಆಗಮಿಸುತ್ತಿರುವ ಬಗ್ಗೆ ಕೆಲವು ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ, ಕ್ರಿಮಿನಲ್‌ ಚಟುವಟಿಕೆಗಳಿಗೆ ಬ್ರೇಕ್‌ ಹಾಕಲು ಜಿಲ್ಲಾಡಳಿತ ‘ಕಾರ್ಮಿಕ ಪೋರ್ಟಲ್‌’ ಹೊಸ ಸಾಫ್‌್ಟವೇರ್‌ ಪರಿಚಯಿಸಿ ಕಾಫಿತೋಟಕ್ಕೆ ಕೆಲಸ ಅರಸಿ ಬರುವ ಕಾರ್ಮಿಕರ ಮೇಲೆ ಹದ್ದಿನಕಣ್ಣಿಡಲು ಸಜ್ಜಾಗಿದೆ.

 

Chikkamagaluru: ದಂಡ ಹಾಕಿದ್ದಕ್ಕೆ ಜಡ್ಜ್ ಮೇಲೆ ಚಪ್ಪಲಿ ತೂರಿದ ಆರೋಪಿಯ ಬಂಧನ

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕೆ.ಎನ್‌.ರಮೇಶ್‌ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಉಮಾ ಪ್ರಶಾಂತ್‌ ಸಮ್ಮುಖದಲ್ಲಿ ನಡೆದ ಕಾಫಿ ಬೆಳೆಗಾರರ ಸಭೆಯಲ್ಲಿ ಕಾಫಿ ಪ್ಲಾಂಟರ್‌ ‘ಕಾರ್ಮಿಕ ಪೋರ್ಟಲ್‌’ ಹೊಸ ಸಾಫ್‌್ಟವೇರ್‌ ಪರಿಚಯಿಸಿದ್ದು ಜಿಲ್ಲಾಡಳಿತದ ಕ್ರಮವನ್ನು ಕಾಫಿ ಬೆಳಗಾರರು ಸ್ವಾಗತಿಸಿದರು.

ಜಿಲ್ಲಾಧಿಕಾರಿ ಕೆ.ಎನ್‌.ರಮೇಶ್‌ ಮಾತನಾಡಿ, ಬಾಂಗ್ಲಾ ಸೇರಿದಂತೆ ಬೇರೆ ಬೇರೆ ರಾಷ್ಟ್ರಗಳಿಂದ ವಲಸಿಗರು ಬಂದು ತಪ್ಪು ಆಧಾರ್‌ ಸಂಖ್ಯೆ ನೀಡಿ ಕಾಫಿ ತೋಟಗಳಿಗೆ ಕೆಲಸಕ್ಕೆ ಸೇರಿಕೊಳ್ಳುತ್ತಿದ್ದಾರೆ, ಈ ಸಂಬಂಧ ಕೆಲವರ ಮೇಲೆ ಕ್ರಿಮಿನಲ್‌ ಮೊಕದ್ದಮೆಗಳು ದಾಖಲಾಗಿದೆ. ಜಿಲ್ಲೆಗೆ ಬರುವ ಎಲ್ಲ ಕಾರ್ಮಿಕರ ವಿವರ ಕಲೆ ಹಾಕಲು ಪ್ರಥಮದಲ್ಲಿ ಕಾರ್ಮಿಕರ ನೋಂದಣಿ ವ್ಯವಸ್ಥೆ ಮಾಡಲಾಗಿದೆ. ಸದ್ಯಕ್ಕೆ ಕಾಫಿ ತೋಟಗಳಿಗೆ ಮಾತ್ರ ಈ ಸಾಫ್‌್ಟವೇರ್‌ ಅನ್ವಯವಾಗಲಿದ್ದು, ಮುಂದಿನ ದಿನಗಳಲ್ಲಿ ಇತರೆ ಕಾರ್ಮಿಕರಿಗೂ ಅಳವಡಿಸಲು ಅವಕಾಶವಿದೆ ಎಂದರು.

ಕಾಫಿತೋಟಗಳಿಗೆ ಬರುವ ಕಾರ್ಮಿಕರ ಸಂಪೂರ್ಣ ಮಾಹಿತಿ ಕಲೆ ಹಾಕಬೇಕು. ಇದರಿಂದಾಗಿ ಬೆಳೆಗಾರರು, ಕಾರ್ಮಿಕರು, ಸಾರ್ವಜನಿಕರು ಹಾಗೂ ಪೊಲೀಸ್‌ ಇಲಾಖೆಗೂ ಅನುಕೂಲವಾಗುತ್ತದೆ ಎಂದ ಅವರು, ನಕಲಿ ಆಧಾರ್‌ ಸಂಖ್ಯೆ ಬಳಸಿ ಬಾಂಗ್ಲಾ, ಪಾಕಿಸ್ಥಾನದಿಂದ ಕಾರ್ಮಿಕರು ಭಾರತಕ್ಕೆ ಆಗಮಿಸುತ್ತಿದ್ದು ಇದರಿಂದ ಕಾಫಿ ಬೆಳೆಗಾರರು ಸೇರಿದಂತೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಅವರ ರಕ್ಷಣೆ ಹಿತದೃಷ್ಟಿಯಿಂದ ಇತ್ತೀಚೆಗೆ ಸಭೆ ನಡೆಸಲಾಗಿತ್ತು ಎಂದರು.

ಕಾಫಿ ತೋಟಗಳಿಗೆ ಕೆಲಸ ಅರಸಿ ಬರುವ ಕಾರ್ಮಿಕರ ವಿವರಗಳನ್ನು ಮಾಲೀಕರು ನೋಂದಣಿ ಮಾಡಿಸಿದರೆ, ಅವರ ಚಲನಾವಲನಗಳನ್ನು ತಿಳಿಯಲು ಅನುಕೂಲವಾಗುತ್ತದೆ. ಜೊತೆಗೆ ತೋಟಗಳಲ್ಲಿ ಅಕ್ರಮ, ಅನೈತಿಕ ಚಟುವಟಿಕೆ ಹಾಗೂ ಕ್ರಿಮಿನಲ್‌ ಪ್ರಕರಣಗಳನ್ನು ತಡೆಗಟ್ಟಿಅಂತಹ ವ್ಯಕ್ತಿಗಳನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಅಕ್ರಮ, ಕ್ರಿಮಿನಲ್‌ ಚಟುವಟಿಗೆ ಮೇಲೆ ನಿಗಾ ಇಡುವ ಜೊತೆಗೆ ಬಹಳಷ್ಟುಕಾರ್ಮಿಕರಿಗೆ ಓಟರ್‌ ಐಡಿ, ಆಧಾರ್‌ ಸಂಖ್ಯೆ ಇಲ್ಲಾ ಅಂತಹವರಿಗೆ ಸಹಕರಿಸಿ ಆರೋಗ್ಯ ಸೇವೆ ಜೊತೆ ಸರ್ಕಾರಿ ಯೋಜನೆಯನ್ನು ನೀಡಲು ಅವಕಾಶ ನೀಡುವ ಉದ್ದೇಶದಿಂದ ನೂತನ ಸಾಫ್‌್ಟವೇರ್‌ ಪ್ರಾರಂಭಿಸಲಾಗುತ್ತಿದೆ ಎಂದರು.

ಜಿಲ್ಲಾಡಳಿತ, ಪೊಲೀಸ್‌, ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಪ್ರಾಯೋಗಿಕವಾಗಿ ನೂತನ ಸಾಫ್‌್ಟವೇರ್‌ ಪ್ರಾರಂಭಿಸಿದ್ದು 7 ದಿನ ಪ್ರಾಯೋಗಿಕ ವ್ಯವಸ್ಥೆಗೆ ಅವಕಾಶ ನೀಡಲಾಗಿದೆ. ಬೆಳೆಗಾರರು ಸಾಫ್‌್ಟವೇರ್‌ ಬಗ್ಗೆ ತಿಳಿದುಕೊಳ್ಳಬಹುದು. ಕಾಫಿ ಮಂಡಳಿಯ ಉಪ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಗಿದ್ದು ಬೆಳೆಗಾರರು ಸ್ವಯಂಪ್ರೇರಿತವಾಗಿ ಮುಂದೆ ಬಂದು ನೀಡಿದ ಸಲಹೆ ಸೂಚನೆಗಳನ್ನು ಅಳವಡಿಸಿ ಮುಂದಿನ 15 ದಿನದಲ್ಲಿ ಜಿಲ್ಲೆಯಲ್ಲಿ ಅಧಿಕೃತವಾಗಿ ಸಾಫ್‌್ಟವೇರ್‌ ಪ್ರಾರಂಭಿಸಲು ಯೋಜನೆ ರೂಪಿಸಲಾಗಿದೆ, ಮುಂದೆ ಈ ವ್ಯವಸ್ಥೆ ರಾಜ್ಯ ಹಾಗೂ ದೇಶವ್ಯಾಪಿ ವಿಸ್ತರಿಸಬಹುದು ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಉಮಾ ಪ್ರಶಾಂತ್‌ ಮಾತನಾಡಿ, ಕಾಫಿ ತೋಟಗಳಿಗೆ ಬರುವ ತೋಟ ಕಾರ್ಮಿಕರ ನೋಂದಣಿಗೆ ಹೊಸ ಸಾಫ್‌್ಟವೇರ್‌ ರೂಪಿಸಲಾಗಿದೆ. ಬೆಳೆಗಾರರಿಗೆ ಮಾಹಿತಿ ಕೊರತೆ ಅಥವಾ ನೆಟ್‌ವರ್ಕ್ ಸಮಸ್ಯೆಯಿಂದ ಆರಂಭದಲ್ಲಿ ಕೊಂಚ ಗೊಂದಲ, ಅಡಚಣೆ ಆಗಬಹುದು, ಆದರೆ ರಾಜ್ಯ ಹಾಗೂ ದೇಶದ ಭದ್ರತೆಯ ಜವಾಬ್ದಾರಿ ಹಿತದೃಷ್ಟಿಯಿಂದ ಮತ್ತು ಬೆಳೆಗಾರರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಮುಂಜಾಗ್ರತೆ ಕ್ರಮವಾಗಿ ಈ ಕಾರ್ಮಿಕ ಪೋರ್ಟಲ್‌ ಪ್ರಾರಂಭಿಸುತ್ತಿದ್ದು ಬೆಳೆಗಾರರ ಸಲಹೆಗಳನ್ನು ನೀಡಿದರೆ ಅದನ್ನು ಸಾಫ್‌್ಟವೇರ್‌ನಲ್ಲಿ ಜೋಡಿಸಲಾಗುತ್ತದೆ ಎಂದು ತಿಳಿಸಿದರು.

ಭ್ರಷ್ಟಮುಕ್ತ ಸಮಾಜ ನಿರ್ಮಾಣ ಆಗಬೇಕು: ನಿವೃತ್ತ ನ್ಯಾ.ಸಂತೋಷ್‌ ಹೆಗ್ಡೆ ಸಲಹೆ

ಸಭೆಯಲ್ಲಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಕೃಷ್ಣಮೂರ್ತಿ, ಎನ್‌ಐಸಿ ಜಿಲ್ಲಾ ಸೂಚನಾ ವಿಜ್ಞಾನಾಧಿಕಾರಿ ಕೃಷ್ಣಕಿರಣ್‌, ಕಾಫಿ ಮಂಡಳಿಯ ಶ್ರೀನಿವಾಸ್‌, ವಿವಿಧ ಕಾಫಿ ಬೆಳೆಗಾರ ಸಂಘಟನೆ ಪದಾಧಿಕಾರಿಗಳು ಇದ್ದರು.

PREV
Read more Articles on
click me!

Recommended Stories

ಸಿಎಂ ಗೊಂದಲಕ್ಕೆ ಮತ್ತೆ ಬೆಂಕಿ: ಸಿದ್ದರಾಮಯ್ಯ 5 ವರ್ಷ ಸಿಎಂ, ಬದಲಾದರೆ ಡಿಕೆಶಿ ಒಬ್ರೇ ರೇಸ್‌ನಲ್ಲಿಲ್ಲ..; - ಕೆಎನ್ ರಾಜಣ್ಣ
ಬೆಂಗಳೂರು ಜನರಿಗೆ ಹೊಟ್ಟೆತುಂಬಾ ಬಿರಿಯಾನಿ ಬಾಡೂಟ ಕೊಟ್ಟ ಕುಟುಂಬ ಸಾಲದ ಸುಳಿಗೆ ಸಿಲುಕಿ ಆತ್ಮ*ಹತ್ಯೆ!