ದಕ್ಷಿಣ ಕನ್ನಡದಲ್ಲಿ ಕೊರೋನಾ ಸೋಂಕಿತರೆಲ್ಲ ಗುಣಮುಖ: 1 ಹೊಸ ಕೇಸ್

By Kannadaprabha NewsFirst Published Apr 18, 2020, 8:26 AM IST
Highlights

ಕಳೆದ 12 ದಿನಗಳಿಂದ ಸತತವಾಗಿ ಕೊರೋನಾ ಸೋಂಕು ನೆಗೆಟಿವ್‌ ಆಗಿದ್ದ ದ.ಕ. ಜಿಲ್ಲೆಯಲ್ಲಿ ಶುಕ್ರವಾರ ಮೂರು ಮಂದಿ ಸೋಂಕಿತರು ಡಿಸ್ಚಾರ್ಜ್ ಆಗುವುದರೊಂದಿಗೆ ಇನ್ನು ಒಬ್ಬರೇ ಆಸ್ಪ​ತ್ರೆ​ಯಲ್ಲಿ ಸೋಂಕಿ​ತ​ರಾಗಿ ಉಳಿದಿದ್ದಾರೆ.

ಮಂಗಳೂರು(ಏ.18): ಕಳೆದ 12 ದಿನಗಳಿಂದ ಸತತವಾಗಿ ಕೊರೋನಾ ಸೋಂಕು ನೆಗೆಟಿವ್‌ ಆಗಿದ್ದ ದ.ಕ. ಜಿಲ್ಲೆಯಲ್ಲಿ ಶುಕ್ರವಾರ ಮೂರು ಮಂದಿ ಸೋಂಕಿತರು ಡಿಸ್ಚಾರ್ಜ್ ಆಗುವುದರೊಂದಿಗೆ ಇನ್ನು ಒಬ್ಬರೇ ಆಸ್ಪ​ತ್ರೆ​ಯಲ್ಲಿ ಸೋಂಕಿ​ತ​ರಾಗಿ ಉಳಿದಿದ್ದಾರೆ. ಶುಕ್ರವಾರ ಹೊಸದಾಗಿ ಒಂದು ಪಾಸಿಟಿವ್‌ ಪ್ರಕರಣ ಪತ್ತೆಯಾಗದಿದ್ದರೆ, ದ.ಕ. ಜಿಲ್ಲೆಯಲ್ಲಿ ಕೊರೋನಾ ಸೋಂಕಿತರು 13ನೇ ದಿನ ಶುಕ್ರವಾರದಂದು ಶೂನ್ಯ ಹೆಗ್ಗಳಿಕೆಗೆ ಪಾತ್ರವಾಗುತ್ತಿತ್ತು.

ಇದುವರೆಗೆ 12 ಮಂದಿ ಕೊರೋನಾ ಸೋಂಕಿತರು ಪತ್ತೆಯಾದ ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಯಲ್ಲಿ ಗುರುವಾರ ವರೆಗೆ 9 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದರು. ಶುಕ್ರವಾರ ಬಾಕಿಯುಳಿದ ಮೂವರು ಕೂಡ ಬಿಡುಗಡೆಗೊಂಡರು. ಇದರೊಂದಿಗೆ ಕೊರೋನಾ ಸೋಂಕು ಇಲ್ಲ ಎಂದು ಸಮಾಧಾನಪಟ್ಟುಕೊಳ್ಳುವ ಮೊದಲೇ ಅಪ​ರಾ​ಹ್ನದ ವೇಳೆಗೆ ಒಂದು ಪಾಸಿಟಿವ್‌ ಪ್ರಕರಣ ಪತ್ತೆಯಾಗಿತ್ತು.

Latest Videos

ಕೊರೋನಾಗೆ ಚೀನಾದಲ್ಲಿ 2 ಕೋಟಿ ಜನ ಸಾವು?: ಸುಳಿವು ಕೊಟ್ಟ ಸಿಮ್!

ಶುಕ್ರವಾರ ಇಬ್ಬರು ಪುರುಷ ಹಾಗೂ ಓರ್ವ ಮಹಿಳೆ ಡಿಸ್ಚಾಜ್‌ರ್‍ ಆಗಿದ್ದಾರೆ. ಇಬ್ಬರು ಪುರುಷರು ದೆಹಲಿಯ ನಿಜಾಮುದ್ದೀನ್‌ನಿಂದ ಇಲ್ಲಿಗೆ ಬಂದವರು. 63 ವರ್ಷದ ಮಹಿಳೆ ಮಾ.21ರಂದು ದುಬೈನಿಂದ ಮಂಗಳೂರಿಗೆ ವಿಮಾನದಲ್ಲಿ ಆಗಮಿಸಿದ್ದು, ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದುದರಿಂದ ಇಎಸ್‌ಐ ಆಸ್ಪತ್ರೆಯಲ್ಲಿ ವೈದ್ಯಕೀಯ ನಿಗಾದಲ್ಲಿ ಇದ್ದರು. ಅವರಿಗೆ ಏ.4ರಂದು ಸೋಂಕು ದೃಢಪಟ್ಟಿತ್ತು. ಬಳಿಕ ಅವರಿಗೆ ವೆನ್ಲಾಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಏ.15 ಮತ್ತು 16ರಂದು ಸ್ಯಾಂಪಲ್‌ ಪರೀಕ್ಷೆ ನಡೆಸಿದಾಗ ನೆಗೆಟಿವ್‌ ಬಂದಿತ್ತು.

ಕೋರೋನ ಚೀನಾ ಲ್ಯಾಬ್ ಶಿಶು ಅಲ್ಲ ಅಂತ ಎಷ್ಟು ಸಲ ಹೇಳಬೇಕು

ಮಾ.22ರಂದು ದೆಹಲಿ ನಿಜಾಮುದ್ದೀನ್‌ನಿಂದ ಆಗಮಿಸಿದ 43 ವರ್ಷದ ಒಬ್ಬರು ಹಾಗೂ ಇನ್ನೊಬ್ಬರು 52 ವರ್ಷದವರನ್ನು ಏ.1ರ ವರೆಗೆ ದೇರಳಕಟ್ಟೆಯಲ್ಲಿ ನಿಗಾದಲ್ಲಿ ಇರಿಸಲಾಗಿತ್ತು. ಏ.2ರಂದು ಸ್ಯಾಂಪಲ್‌ ಪರೀಕ್ಷೆಗೆ ಒಳಪಡಿಸಿದ್ದು, ಏ.4ರ ವರದಿಯಲ್ಲಿ ಪಾಸಿಟಿವ್‌ ಬಂದಿತ್ತು. ಬಳಿಕ ಅವರಿಗೆ ಚಿಕಿತ್ಸೆ ಮುಂದುವರಿಸಲಾಗಿತ್ತು. ಏ.15 ಮತ್ತು 16ರಂದು ನಡೆಸಿದ ಸ್ಯಾಂಪಲ್‌ ಪರೀಕ್ಷೆಯಲ್ಲಿ ನೆಗೆಟಿವ್‌ ಬಂದ ಕಾರಣ ಅವರನ್ನು ಕೂಡ ಡಿಸ್ಚಾಜ್‌ರ್‍ ಮಾಡಲಾಗಿತ್ತು. ಇವರು ತೊಕ್ಕೊಟ್ಟು ಹಾಗೂ ಬಂಟ್ವಾಳದ ನಿವಾಸಿಗಳು.

ನವೆಂಬರಲ್ಲಿ ಚೀನಾಕ್ಕೆ ಮತ್ತೆ ಕೊರೋನಾ ದಾಳಿ! ತಜ್ಞರಿಂದ ಎಚ್ಚರಿಕೆ

ಪ್ರಸಕ್ತ ದ.ಕ ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಒಟ್ಟು 13 ಪ್ರಕರಣ ವರದಿಯಾದಂತಾಗಿದೆ. ಇಲ್ಲಿವರೆಗೆ 12 ಮಂದಿ ಡಿಸ್ಚಾಜ್‌ರ್‍ ಆಗಿದ್ದು, ಈಗ ಶುಕ್ರವಾರ ದಾಖಲಾದ ಏಕೈಕ ಕೊರೋನಾ ಪಾಸಿಟಿವ್‌ ರೋಗಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಡಳಿತದ ಬುಲೆಟಿನ್‌ ತಿಳಿಸಿದೆ.

click me!