
ಕುಷ್ಟಗಿ(ಏ.18): ಪಟ್ಟಣದ ದುರ್ಗಾ ಕಾಲೋನಿಯ ನಿವಾಸಿ ಜಂಬಣ್ಣ ನಿಂಗಪ್ಪ ಗಾಂಜಿ (18) ಎನ್ನುವ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ.
ಯುವಕನಿಗೆ ಮನೆಯಲ್ಲಿ ಪಾಲಕರು ಬುದ್ಧಿವಾದ ಹೇಳಿದ ಪ್ರಸಂಗಕ್ಕೆ ಸಂಬಂಧಿಸಿದಂತೆ ಮನನೊಂದು ಪಟ್ಟಣದ ಹೊರವಲಯದ ಗಿಡವೊಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಲಾಕ್ ಡೌನ್ ವಿಸ್ತರಣೆಗೆ ಬೇಸತ್ತು ನೇಣು ಬಿಗಿದು ಅರ್ಚಕ ಆತ್ಮಹತ್ಯೆ..!
ಇನ್ನು ಯುವಕ ಮನೆಯಲ್ಲಿರುವ ಕುರಿಗಳನ್ನು ಕಾಯುವ ವಿಷಯಕ್ಕೆ ಸಂಬಂಧಿಸಿದಂತೆ ಪಾಲಕರು ಗುರುವಾರ ರಾತ್ರಿ ಯುವಕನಿಗೆ ಬುದ್ಧಿವಾದ ಹೇಳಿದ್ದಕ್ಕಾಗಿ ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಯುವಕನ ತಂದೆ ನಿಂಗಪ್ಪ ಗಾಜಿ ನೀಡಿದ ದೂರಿನ ಮೇರೆಗೆ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.