ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ರಸಗೊಬ್ಬರಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ನಡೆಸುತ್ತಿದ್ದ ಆರೋಪ ಹೊಂದ್ದಿದ ಮಳಿಗೆಗಳ ಮೇಲೆ ಕೃಷಿ ಇಲಾಖೆಯ ಅಧಿಕಾರಿಗಳು ದಿಢೀರನೆ ದಾಳಿ ನಡೆಸಿ ಮಾಲೀಕರಿಗೆ ನೋಟಿಸ್ ನೀಡಿದ್ದಾರೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಸೆ. 20): ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ರಸಗೊಬ್ಬರಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ನಡೆಸುತ್ತಿದ್ದ ಆರೋಪ ಹೊಂದ್ದಿದ ಮಳಿಗೆಗಳ ಮೇಲೆ ಕೃಷಿ ಇಲಾಖೆಯ ಅಧಿಕಾರಿಗಳು ದಿಢೀರನೆ ದಾಳಿ ನಡೆಸಿದ್ದಾರೆ. ದಾಳಿ ವೇಳೆಯಲ್ಲಿ ಆರೋಪ ಸಾಬೀತಾಗಿದ್ದು ಅಂಗಡಿ ಮಾಲೀಕರಿಗೆ ಮಾರಾಟ ತಡೆ ನೊಟೀಸ್ ನೀಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಆಲ್ದೂರಿನ ನೂತನ್ ಟ್ರೇಡರ್ಸ್ ಚಿಲ್ಲರೆ ರಸಗೊಬ್ಬರ ಮಾರಾಟ ಮಳಿಗೆಯಲ್ಲಿ ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ ಮಾಡುತ್ತಿದ್ದ ಮತ್ತು ರಸಗೊಬ್ಬರ ಕೊಂಡುಕೊಂಡ ರೈತರಿಗೆ ಸರಿಯಾದ ಬಿಲ್ಲನ್ನು ನೀಡದೆ ವಂಚನೆ ಮಾಡುತ್ತಿದ್ದಾರೆ ಎಂಬುದಾಗಿ ರೈತರಿಂದ ದೂರು ಕೇಳಿ ಬಂದ ಹಿನ್ನೆಲೆ ತೋರಣಮಾವಿನಲ್ಲಿರುವ ರಸಗೊಬ್ಬರದ ದಾಸ್ತಾನು ಗೋದಾಮಿಗೆ ಕೃಷಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ರಸಗೊಬ್ಬರ ಮಾರಾಟದ ಬಿಲ್ಲುಗಳು ಇನ್ವಾಯ್ಸ್ ಗಳು ಹಾಗೂ ದಾಸ್ತಾನು ಪರಿಶೀಲನೆಯನ್ನು ಕೈಗೊಳ್ಳಲು ಜಿಲ್ಲಾ ಜಾಗೃತದಳದ ಸಹಾಯಕ ಕೃಷಿ ನಿರ್ದೇಶಕರು ವೆಂಕಟೇಶ ಎಸ್ ಚವ್ಹಾಣ್ ನೇತೃತ್ವದ ತಂಡ ಇಂದು ಮುಂಜಾನೆ ದಾಳಿ ನಡೆಸಿತು. ದಾಳಿಯ ವೇಳೆಯಲ್ಲಿ ನೂತನ್ ಟ್ರೇಡರ್ಸ್, ಆಲ್ದೂರು ಮಾಲೀಕರು ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ ಮಾಡುತ್ತಿದ್ದದ್ದನ್ನು ಪರಿಶೀಲಿಸಲಾಗಿ, ರಸಗೊಬ್ಬರ ಮಾರಾಟಗಾರರಿಗೆ ಕಾರಣ ಕೇಳಿದ ಅಧಿಕಾರಿಗಳು ನೋಟಿಸ್ ನೀಡಿ, ದಾಸ್ತಾನು ಮಾಡಲಾಗಿದ್ದ ರಸಗೊಬ್ಬರಗಳಿಗೆ 21 ದಿನಗಳವರೆಗೆ ಮಾರಾಟ ತಡೆ ನೋಟಿಸನ್ನು ಜಾರಿಗೊಳಿಸಲಾಗಿದೆ.
undefined
ಮಾರಾಟ ಮಳಿಗೆ ಮತ್ತು ರಸಗೊಬ್ಬರದ ದಾಸ್ತಾನು ಗೋದಾಮನ್ನು ಬಂದ್ ಮಾಡಿಸಲಾಗಿದೆ. ರಸಗೊಬ್ಬರ ಮಾರಾಟಗಾರರು ಹೆಚ್ಚಿನ ಬೆಲೆಗೆ ರಸಗೊಬ್ಬರಗಳನ್ನು ಮಾರಾಟ ಮಾಡಿ ರೈತರಿಂದ ಪಡೆದಿರುವ ಹೆಚ್ಚಿನ ಹಣವನ್ನು ಹಿಂತಿರುಗಿಸಿ ಸೂಕ್ತ ದಾಖಲೆಗಳನ್ನು ನೀಡದೇ ಇದ್ದಲ್ಲಿ, ರಸಗೊಬ್ಬರ ಮಾರಾಟ ಪರವಾನಗಿಯನ್ನು ರದ್ದುಪಡಿಸಲು ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ರೈತರೇ ರಸಗೊಬ್ಬರ ಖರೀದಿಸುವ ಮುನ್ನ ಎಚ್ಚರ, ಬೆಳಗಾವಿಯಲ್ಲಿ ಸಿಕ್ತು ಮಣ್ಣು!
ಇಂತಹ ಯಾವುದೇ ಪ್ರಕರಣಗಳು, ಯಾವ ರೀತಿಯಲ್ಲಾದರೂ ರೈತರ ಮೇಲೆ ಧೋರಣೆ ಅಥವಾ ಅತಿಯಾದ ಬೆಲೆಯನ್ನು ತೆಗೆದುಕೊಳ್ಳುವುದು, ಮುಂತಾದವು ನಡೆದಲ್ಲಿ ಯಾವುದೇ ಮುಲಾಜಿಲ್ಲದೇ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಜಾಗೃತದಳದ ಅಧಿಕಾರಿಗಳು ತಿಳಿಸಿದರು.
ಎಲ್ಲಾ ರಸಗೊಬ್ಬರಕ್ಕೂ ಒಂದೇ ಬ್ರ್ಯಾಂಡ್: ನೀತಿ ಅ.2ರಿಂದ ಜಾರಿ: ಕಾಂಗ್ರೆಸ್ ಟೀಕೆ
ಮಾರಾಟಗಾರರು ಹೆಚ್ಚಿನ ಬೆಲೆಗೆ ರಸಗೊಬ್ಬರಗಳನ್ನು ಮಾರಾಟ ಮಾಡಿರುವ ರೈತರಿಗೆ ಹೆಚ್ಚಿನ ಬೆಲೆಯನ್ನು ಪಡೆದ ಅಷ್ಟುರೈತರಿಗೆ ಹೆಚ್ಚುವರಿಯಾಗಿ ಪಡೆದಿರುವ ಮೊತ್ತವನ್ನು ಹಿಂತಿರುಗಿಸಿ, ವರದಿ ಮಾಡದೇ ಇದ್ದ ಪಕ್ಷದಲ್ಲಿ ರಸಗೊಬ್ಬರ ಮಾರಾಟ ಪರವಾನಗಿಯನ್ನು ರದ್ದುಪಡಿಸಲು ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು. ದಾಳಿಯ ವೇಳೆ ಜಾಗೃತದಳದ ತಂಡದಲ್ಲಿ ವೆಂಕಟೇಶ ಎಸ್ ಚವ್ಹಾಣ್, ಸಹಾಯಕ ಕೃಷಿ ನಿರ್ದೇಶಕರು (ಜಾರಿದಳ) ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.