ಬರೋಬ್ಬರಿ 3.69 ಕೆಜಿ ಮುದ್ದೆ ನುಂಗಿದ 'ಬಕಾ'ಸುರೇಶ್‌!

By Kannadaprabha NewsFirst Published Sep 20, 2022, 2:04 PM IST
Highlights
  • 3.69 ಕೆಜಿ ಮುದ್ದೆ ನುಂಗಿದ ಸುರೇಶ್‌
  • ರಾಜ್ಯ ಮಟ್ಟದ ನಾಟಿಕೋಳಿ ಸಾರು, ಮುದ್ದೆ ನುಂಗುವ ಸ್ಪರ್ಧೆ
  • ಟಗರು, ಹೋತ, ಐದು ಹಾಗೂ ಎರಡು ನಾಟಿಕೋಳಿ ಬಹುಮಾನ

ಪಾಂಡವಪುರ (ಸೆ.20) : ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆಯಿಂದ ಪಟ್ಟಮದಲ್ಲಿ ನಡೆದ ರಾಜ್ಯ ಮಟ್ಟದ ನಾಟಿಕೋಳಿ ಸಾರು, ಮುದ್ದೆ ನುಂಗುವ ಸ್ಪರ್ಧೆಯಲ್ಲಿ ಕೆ.ಎಂ.ದೊಡ್ಡಿಯ ಕೆ.ಎಂ.ಸುರೇಶ್‌ ಬರೋಬರಿ 3.069 ಕೆಜಿ ಮುದ್ದೆ ನುಂಗಿ ಟಗರನ್ನು ಪ್ರಥಮ ಬಹುಮಾನವಾಗಿ ಪಡೆದರು. ಹಾಸನ ಜಿಲ್ಲೆಯ ಅಗ್ರಹಾರದ ಧರ್ಮಣ್ಣ 2.675 ಕೆಜಿ ಮುದ್ದೆ ಉಂಡು ಹೋತವನ್ನು ದ್ವಿತೀಯ ಬಹುಮಾನ ಗಳಿಸಿದರು. ಬೆಂಗಳೂರಿನ ಯುವರಾಜು 2.271 ಕೆ.ಜಿ ಮುದ್ದೆ ನುಂಗಿ ತೃತೀಯ ಬಹುಮಾನವಾಗಿ ಐದು ನಾಟಿ ಕೋಳಿಗಳನ್ನು ಪಡೆದುಕೊಂಡರು.

Mandya: ಗಮನ ಸೆಳೆದ ನಾಟಿಕೋಳಿ ಸಾರಿನೊಂದಿಗೆ ಮುದ್ದೆ ತಿನ್ನುವ ಸ್ಪರ್ಧೆ

ಶ್ರೀರಂಗಪಟ್ಟಣದ ಕೂಡಲಕುಪ್ಪೆ ಗ್ರಾಮದ ಸ್ವಾಮಿ 2.228 ಕೆ.ಜಿ ಮುದ್ದೆ ನುಂಗಿ ಸಮಾಧಾನಕರ ಬಹುಮಾನ ಪಡೆದು ಎರಡು ನಾಟಿ ಕೋಳಿಗಳನ್ನು ಬಹುಮಾನವಾಗಿ ಪಡೆದರು. ಎಲ್ಲ ವಿಜೇತರನ್ನು ಕಾವಲು ಪಡೆಯಿಂದ ಗೌರವಿಸಲಾಯಿತು. ತಾಲೂಕಿನ ರೈಲ್ವೆ ನಿಲ್ದಾಣ ಸಮೀಪದ ಪಿಎಸ್‌ಎಸ್‌ಕೆ ¶ೌ್ರಢಶಾಲೆ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆಯಿಂದ ಆಯೋಜಿಸಿದ್ದ ಪರಿಸರ ಸಂರಕ್ಷಣಾ ಕಾರ್ಯಕ್ರಮ ಮತ್ತು ನಾಟಿ ಕೋಳಿ ಸಾರು ಮುದ್ದೆ ಉಣ್ಣುವ ಸ್ಪರ್ಧೆಯನ್ನು ಶಾಸಕ ಸಿ.ಎಸ್‌.ಪುಟ್ಟರಾಜು ಉದ್ಘಾಟಿಸಿದರು.

ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳು 20 ಸ್ಪರ್ಧಾಳುಗಳು ಭಾಗಿಯಾಗಿ ಪ್ರತಿಯೊಬ್ಬರು ಪೈಪೋಟಿಗಿಳಿದು ಮುದ್ದೆ ನುಂಗಿದರು. ಸ್ಪರ್ಧಾಳುಗಳಿಗೆ 20 ನಿಮಿಷ ಕಾಲಾವಕಾಶ ನಿಗಧಿ ಮಾಡಲಾಗಿತ್ತು. ಪ್ರಾಥಮಿಕವಾಗಿ ಅರ್ಧ ಕೆಜಿ ಮುದ್ದೆಯ ಜತೆಗೆ ಜತೆಗೆ ನಾಟಿ ಕೋಳಿ ಮಾಂಸ ಬಡಿಸಲಾಯಿತು. ನಂತರ ಕಾಲು ಕೆಜಿ ಮೇಲೆ ತೂಗುವ ಮುದ್ದೆಗಳನ್ನು ಸ್ಪರ್ಧಾಳುಗಳ ಅನುಮತಿ ಮೇಲೆ ಹಂತ ಹಂತವಾಗಿ ಬಡಿಸಲಾಯಿತು.

ಕೆಲವರು ಅರ್ಧಕ್ಕೆ ಸುಸ್ತಾಗಿ ಸ್ಪರ್ಧೆಯಿಂದ ಹೊರಬಿದ್ದರು. ಉಳಿದಂತೆ ಪೈಪೋಟಿಗಿಳಿದ ಬಹುತೇಕರು ಟಗರು ಮತ್ತು ಹೋತ ಹಾಗೂ ಕೋಳಿಗಳನ್ನು ಬಹುಮಾನವಾಗಿ ಪಡೆಯಲು ಸುಮಾರು 2 ಕೆ.ಜಿ.ವರೆಗೂ ಮುದ್ದೆ ನುಂಗಿದರು. ಅಂತಿಮವಾಗಿ ಕೆ.ಎಂ.ದೊಡ್ಡಿಯ ಕೆ.ಎಂ.ಸುರೇಶ್‌ ಪ್ರಥಮ, ಹಾಸನ ಜಿಲ್ಲೆಯ ಅಗ್ರಹಾರದ ಧರ್ಮಣ್ಣ ದ್ವಿತೀಯ, ಬೆಂಗಳೂರಿನ ಯುವರಾಜು 2.271 ತೃತೀಯ ಹಾಗೂ ಶ್ರೀರಂಗಪಟ್ಟಣದ ಕೂಡಲಕುಪ್ಪೆ ಗ್ರಾಮದ ಸ್ವಾಮಿ ಸಮಾಧಾನಕರ ಬಹುಮಾನ ಪಡೆದುಕೊಂಡರು.

ಇನ್ಮುಂದೆ ಬಿಸಿಯೂಟದಲ್ಲಿ ಮುದ್ದೆ, ಜೋಳದ ರೊಟ್ಟಿ..?

ಸ್ಪರ್ಧೆಯನ್ನು ವಿಜಯಕಾಲೇಜಿನ ದೈಹಿಕ ಶಿಕ್ಷಕ ಮಂಜು ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜಿ ದೈಹಿಕ ಶಿಕ್ಷಕ ಬಸವರಾಜು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆ ರಾಜ್ಯಾಧ್ಯಕ್ಷ ಎಚ್‌.ಸುರೇಶ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಣ್ಣೆಹೊಳೆಕೊಪ್ಪಲು ನಿರಂಜನ್‌, ತಾಲೂಕು ಅಧ್ಯಕ್ಷ ಸಿದ್ದರಾಮು, ಹಾರೋಹಳ್ಳಿ ಎಚ್‌.ಕೆ.ಸುರೇಶ್‌ ಇತರರು ಇದ್ದರು.

click me!