Mandya: ರೈತರ ಜಮೀನು ದಾಖಲೆಯಲ್ಲಿ ವಕ್ಫ್‌ ನಮೂದು, ಶ್ರೀರಂಗಪಟ್ಟಣ ಬಂದ್‌ಗೆ ವ್ಯಾಪಕ ಪ್ರತಿಕ್ರಿಯೆ!

Published : Jan 20, 2025, 09:20 AM ISTUpdated : Jan 20, 2025, 09:27 AM IST
Mandya: ರೈತರ ಜಮೀನು ದಾಖಲೆಯಲ್ಲಿ ವಕ್ಫ್‌ ನಮೂದು, ಶ್ರೀರಂಗಪಟ್ಟಣ ಬಂದ್‌ಗೆ ವ್ಯಾಪಕ ಪ್ರತಿಕ್ರಿಯೆ!

ಸಾರಾಂಶ

ರಾಜ್ಯದ ರೈತರ ಜಮೀನುಗಳಲ್ಲಿ ವಕ್ಫ್ ಹೆಸರು ನಮೂದಾಗಿರುವುದನ್ನು ವಿರೋಧಿಸಿ ಶ್ರೀರಂಗಪಟ್ಟಣದಲ್ಲಿ ಬಂದ್‌ಗೆ ಕರೆ ನೀಡಲಾಗಿದ್ದು, ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ. ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು, ಪ್ರತಿಭಟನಾಕಾರರು ಟೈರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಡ್ಯ (ಜ.20): ರಾಜ್ಯದ ರೈತರಿಗೆ ವಕ್ಫ್‌ ಭೂತ ಇನ್ನೂ ನಿಂತಿಲ್ಲ. ರೈತರ ಜಮೀನು ಹಾಗೂ ಸರ್ಕಾರ ಆಸ್ತಿ ದಾಖಲೆಯಲ್ಲಿ ವಕ್ಫ್ ಹೆಸರು ನಮೂದಾಗಿರೋದು ಮುಂದುವರಿದಿದೆ. ಈ ಕಾರಣಕ್ಕಾಗಿ ಇಂದು ಶ್ರೀರಂಗಪಟ್ಟಣ ಬಂದ್‌ಗೆ ಕರೆ ನೀಡಲಾಗಿತ್ತು. ಇದಕ್ಕೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಲ್ಲಿನ ಅಂಗಡಿ-ಮುಂಗಟ್ಟುಗಳು ಬಹುತೇಕ ಬಂದ್ ಆಗಿದ್ದು, ಟೈರ್ ಸುಟ್ಟು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಟ್ಟಣದಲ್ಲಿ ವಾಹನ ಸಂಚಾರ ಕೂಡ ವಿರಳವಾಗಿದೆ. ಬಂದ್ ಹಿನ್ನಲೆ ಗಾರ್ಮೆಂಟ್ಸ್ ಗಳಿಗೂ ರಜೆ ಘೋಷಣೆ ಮಾಡಲಾಗಿದ್ದು, ಪಟ್ಟಣದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. 1SP, 1ASP ಸೇರಿ 200 ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಜಾಮೀಯಾ ಮಸೀದಿ ಸುತ್ತಲೂ ಬ್ಯಾರೀಕೇಡ್ ಅಳವಡಿಸಿ ಭದ್ರತೆ ನೀಡಲಾಗಿದೆ. ಬೆಳಿಗ್ಗೆ 10 ಗಂಟೆ ಬಳಿಕ ಹೋರಾಟಗಾರರು ಬೀದಿಗಿಳಿಯಲಿದ್ದಾರೆ. ಜಾನುವಾರುಗಳೊಂದಿಗೆ ಪ್ರತಿಭಟನೆ ನಡೆಸಲು ರೈತರು, ಹಿಂದೂ‌ಪರ ಸೇರಿ ವಿವಿಧ ಸಂಘಟನೆಗಳು ಯೋಜನೆ ರೂಪಿಸಿದ್ದು, ಕುವೆಂಪು ವೃತ್ತದಿಂದ ತಾಲೂಕು ಕಚೇರಿವರೆಗೆ ಪ್ರತಿಭಟನೆ ಮೆರವಣಿಗೆ ನಡೆಯಲಿದೆ.

ಶ್ರೀರಂಗಪಟ್ಟಣ: 70ಕ್ಕೂ ಹೆಚ್ಚು ಆರ್‌ಟಿಸಿಯಲ್ಲಿ ವಕ್ಫ್‌ ಹೆಸರು, ಸಾರ್ವಜನಿಕರು, ರೈತರಲ್ಲಿ ಆತಂಕ!

ಶ್ರೀರಂಗಪಟ್ಟಣ ಬಂದ್ ಗೆ ಕರೆ ಹಿನ್ನಲೆಯಲ್ಲಿ ಜಾಮಿಯಾ ಮಸೀದಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ ವಿಧಿಸಲಾಗಿದೆ. ಮಸೀದಿ ಸುತ್ತಮುತ್ತ ಬಿಗಿಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಪ್ರತಿಭಟನಾ ಮೆರವಣಿಗೆ ಮುಗಿಯುವವರೆಗೂ ಮಸೀದಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಜಾಮಿಯಾ ಮಸೀದಿ ಪಕ್ಕದಲ್ಲೇ ಮೆರವಣಿಗೆ ಹಾದು ಹೋಗಲಿದೆ. ಆ‌ ಹಿನ್ನಲೆ ಮಸೀದಿ ಸಮೀಪ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ. ಮಸೀದಿ ಸುತ್ತ ನೂರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ.

ಇಂದು ಯತ್ನಾಳ್‌ ಟೀಂ ವಕ್ಫ್‌ ಹೋರಾಟ: ಕಂಪ್ಲಿಯಲ್ಲಿ ಜನ ಜಾಗೃತಿ ಸಮಾವೇಶ

PREV
Read more Articles on
click me!

Recommended Stories

ಸಿದ್ಧರಾಮಯ್ಯ ಮಾತು ಎತ್ತಿದ್ರೆ ಸಾಬ್ರು ಸಾಬ್ರು ಅಂತ ಜಪ ಮಾಡ್ತಾರೆ: ಶಾಸಕ ಯತ್ನಾಳ್ ವ್ಯಂಗ್ಯ!
ಎಚ್‌ಡಿ ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್‌ ವಿರುದ್ಧ ಗುಡುಗಿದ ಸಿಎಂ ಸಿದ್ದರಾಮಯ್ಯ