ರಾಜರ ಆಳ್ವಿಕೆ ಪತನದೊಂದಿಗೆ ಮೂಲೆ ಗುಂಪಾದ ಸಿದ್ದಿ ಜನಾಂಗ

By Kannadaprabha News  |  First Published Oct 11, 2022, 6:31 AM IST

ಎಲ್ಲಾ ಸಮಾ​ಜ​ಗಳು ವಿಕಾಸ ಹೊಂದು​ತ್ತಿ​ದ್ದರೂ ಸಿದ್ದಿ ಜನಾಂಗ ಮೂಲೆ ಗುಂಪಾ​ಗಿ​ರು​ವುದು ನೋವಿನ ಸಂಗತಿ ಎಂದು ಕರ್ನಾ​ಟಕ ಜನಾ​ಪದ ಪರಿ​ಷ​ತ್ತಿನ ಅಧ್ಯಕ್ಷ ಪ್ರೊ.ಹಿ.​ಶಿ.​ರಾ​ಮ​ಚಂದ್ರೇ​ಗೌಡ ಬೇಸರ ವ್ಯಕ್ತ​ಪ​ಡಿ​ಸಿ​ದರು.


 ರಾಮ​ನ​ಗ​ರ (ಅ.11): ಎಲ್ಲಾ ಸಮಾ​ಜ​ಗಳು ವಿಕಾಸ ಹೊಂದು​ತ್ತಿ​ದ್ದರೂ ಸಿದ್ದಿ ಜನಾಂಗ ಮೂಲೆ ಗುಂಪಾ​ಗಿ​ರು​ವುದು ನೋವಿನ ಸಂಗತಿ ಎಂದು ಕರ್ನಾ​ಟಕ ಜನಾ​ಪದ ಪರಿ​ಷ​ತ್ತಿನ ಅಧ್ಯಕ್ಷ ಪ್ರೊ.ಹಿ.​ಶಿ.​ರಾ​ಮ​ಚಂದ್ರೇ​ಗೌಡ ಬೇಸರ ವ್ಯಕ್ತ​ಪ​ಡಿ​ಸಿ​ದರು.

ನಗ​ರದ ಜಾನ​ಪ​ದ (Folk)  ಲೋಕ​ದಲ್ಲಿ ಲೋಕ​ಸಿರಿ ತಿಂಗಳ ಅತಿಥಿ 78ರ ಕಾರ್ಯ​ಕ್ರ​ಮ​ದಲ್ಲಿ ಶ್ರೀಮತಿ ಬೊಡ್ಡೆ ಹನು​ಮಂತ ಸಿದ್ದಿ ಅವ​ರಿಗೆ ಗೌರವ ಪ್ರದಾನ ಮಾಡಿ ಮಾತ​ನಾ​ಡಿದ ಅವರು, ನಾವು ಇಂದು ವಿಕಾಸದ ಬಗ್ಗೆ ಮಾತನಾಡುತ್ತಿದ್ದೇವೆ. ಸಮಾಜ (Socity)  ಯಾವಾಗಲೂ ವಿಕಾಸವಾಗುತ್ತ್ತದೆ. ಆಧುನಿಕತೆಯನ್ನು ಕುರಿತು ಮಾತನಾಡುತ್ತಿದ್ದೇವೆ. ಆದರೆ, ತಂತ್ರಜ್ಞಾನ ಯಾರನ್ನು ಆಯ್ಕೆ ಮಾಡಿಕೊಳ್ಳುತ್ತದೆ ಎಂದರೆ ಯಾರು ಪ್ರಜ್ಞಾವಂತರಾಗಿ ಮುನ್ನೆಲೆಯಲ್ಲಿ ಇರುತ್ತಾರೆ, ಅಂತವರನ್ನು ಆಯ್ಕೆ ಮಾಡಿಕೊಳ್ಳುತ್ತದೆ. ತಂತ್ರಜ್ಞಾನದ ಜೊತೆ ಯಾರು ಒಡನಾಟ ಇಟ್ಟುಕೊಳ್ಳಲ್ಲ ಅವರು ಹಿಂದೆ ಸರಿಯುತ್ತಾರೆಂದು ವಿಷಾದಿಸಿದರು.

Latest Videos

undefined

ವಸ್ತುಗಳನ್ನು ಸೃಷ್ಟಿಮಾಡುವಂತದ್ದು ವಿಜ್ಞಾನಿ (Scintist)  ಮತ್ತು ಬಂಡವಾಳ ಶಾಹಿಗಳು. ಆ ವಸ್ತುಗಳನ್ನು ಪಡೆಯಲು ಹೋರಾಟ ಮಾಡಬೇಕು. ಆದರೆ, ಸಿದ್ದಿ ಜನಾಂಗ ಆ ಕೆಲಸವನ್ನು ಮಾಡಲಿಲ್ಲ. ಸಿದ್ದಿ ಜನರು ತುಂಬಾ ಬಲಿಷ್ಠರು ಎಂದು ಅವರನ್ನು ನಮ್ಮ ದೇಶಕ್ಕೆ ಬರಮಾಡಿಕೊಳ್ಳಲಾಯಿತು. ಹೈದಾರಬಾದ್‌ನಲ್ಲಿ ಉಳಿಸಲಾಯಿತು. ಸಿದ್ಧಿ ಜನಾಂಗ ಪ್ರಬಲವಾದ ಸೈನಿಕ ದÜಳವಾಗಿದ್ದರು. ಬೇರೆ ಬೇರೆ ರಾಜ ಮನೆತನಗಳು ಮತ್ತು ಸಾಮ್ರಾಜ್ಯ ಕುಸಿದು ಪತನ ಹೊಂದಿದ ಸಂದರ್ಭದಲ್ಲಿ ಇವರನ್ನು ಮೂಲೆ ಗುಂಪು ಮಾಡಲಾಯಿತು. ಆ ಸಂದರ್ಭದಲ್ಲಿ ಇವರು ಕಾಡುಗಳಲ್ಲಿ ವಾಸಿಸಲು ಪ್ರಾರಂಭಿಸಿದರು. ಆದರೆ, ಎಲ್ಲಾ ಸಮಾಜ ವಿಕಾಸವಾಗುತ್ತಿದ್ದೂ, ಸಿದ್ದಿ ಜನಾಂಗ ಮೂಲೆಗುಂಪಾಗಿದೆ ಎಂದು ಹೇಳಿ​ದರು.

ಜಾನ​ಪದ ಲೋಕದ ಮ್ಯಾನೇಜಿಂಗ್‌ ಟ್ರಸ್ಟಿಆದಿತ್ಯ ನಂಜರಾಜ್‌ ಮಾತನಾಡಿ, ಜಾನಪದ ಲೋಕ ಕಲಾವಿದರ ತವ​ರೂರು. ನಿಮ್ಮಂತಹ ಕಲಾವಿದರನ್ನು ಗುರುತಿಸಿ ಗೌರವಿಸುವುದು, ನಾಡೋಜ ಎಚ್‌.ಎಲ್‌.ನಾಗೇಗೌಡರ ಆಶಯವಾಗಿತ್ತು. ಅದನ್ನು ಉಳಿಸಿ ಬೆಳೆಸುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಎಂದರು.

ರಾಮನಗರ ಸ್ನಾತಕೋತ್ತರ ಕೇಂದ್ರದ ನಿದೇರ್ಶಕ ಡಾ.ಕೆರಾಮಕೃಷ್ಣಯ್ಯ ಮಾತ​ನಾ​ಡಿ​ದ​ರು. ಕ್ಯೂರೇಟರ್‌ ಡಾ. ರವಿ ಯುಎಂ ಕಲಾವಿದರೊಂದಿಗೆ ಸಂವಾದ ನಡೆಸಿಕೊಟ್ಟರು. ರಂಗಸಹಾಯಕರಾದ ಪ್ರದೀಪ್‌, ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷ ಸು.ತ.ರಾಮೇಗೌಡ, ಕಾರ್ಯದರ್ಶಿ ವಸಂತಕುಮಾರ್‌, ಚನ್ನಪಟ್ಟಣ ತಾಲೂಕು ಅಧ್ಯಕ್ಷ ವಿಜಯರಾಂಪುರ, ರಾಮನಗರ ತಾಲೂಕು ಅಧ್ಯಕ್ಷ ರುದ್ರೇಶ್ವರ ಉಪಸ್ಥಿತರಿದ್ದರು.

ನಾಸಾಗೆ ಆಯ್ಕೆಯಾದ ಬುಡಕಟ್ಟು ಬಾಲಕಿ 

 

ಅಮೆರಿಕದ ನಾಸಾಗೆ (NASA) ಸೇರಲು ಅನೇಕರು ಹಾತೊರೆಯುತ್ತಾರೆ. ಆದರೆ, ಈ ಪೈಕಿ ಆಯ್ಕೆಯಾಗೋದು ಕೆಲವರು ಮಾತ್ರ. ಇಂತಹ ಅವಕಾಶ ಛತ್ತೀಸ್‌ಗಢದ 16 ವರ್ಷದ ಬುಡಕಟ್ಟು ಬಾಲಕಿಗೆ (Tribal Girl) ಒಲಿದುಬಂದಿದೆ. ಹೌದು, ಛತ್ತೀಸ್‌ಗಢದ ಮಹಾಸಮುಂಡ್ ಜಿಲ್ಲೆಯ ಪುಟ್ಟ ಕುಗ್ರಾಮದ 16 ವರ್ಷದ ಬುಡಕಟ್ಟು ಹುಡುಗಿ ರಿತಿಕಾ ಧ್ರುವ್, ತನ್ನ ಪ್ರೆಸೆಂಟೇಷನ್‌ ಮೂಲಕ ಭಾರತೀಯ ತಂತ್ರಜ್ಞಾನ ಸಂಸ್ಥೆ (Indian Institute of Technology)  (ಐಐಟಿ) ಬಾಂಬೆ ಮತ್ತು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ (Satish Dhawan Space Centre) (ಎಸ್‌ಡಿಎಸ್‌ಸಿ) ವಿಜ್ಞಾನಿಗಳನ್ನು ಮೆಚ್ಚಿಸಲು ಸಮರ್ಥಳಾಗಿದ್ದಾಳೆ. ‘’ಬಾಹ್ಯಾಕಾಶದಲ್ಲಿ ವ್ಯಾಕ್ಯೂಮ್‌.. ಕಪ್ಪು ಕುಳಿಯಿಂದ ಧ್ವನಿಯನ್ನು ನಾಸಾ ಕಂಡುಹಿಡಿದಿದ್ದು ಹೇಗೆ’’ ಎಂಬ ವಿಷಯದ ಕುರಿತು ತನ್ನ ಪ್ರಸ್ತುತಿಯ ಮೂಲಕ, ನಾಸಾ ಯೋಜನೆಗೆ ಬಾಲಕಿ ರಿತಿಕಾ ಧ್ರುವ್‌ ಆಯ್ಕೆಯಾಗಿದ್ದಾಳೆ. 

NASAದ ಸಿಟಿಜನ್ ಸೈನ್ಸ್ ಪ್ರಾಜೆಕ್ಟ್‌ನೊಂದಿಗೆ ಪಾಲುದಾರಿಕೆ ಹೊಂದಿರುವ ಅಂತಾರಾಷ್ಟ್ರೀಯ ಖಗೋಳ ಹುಡುಕಾಟ ಸಹಯೋಗದಿಂದ (International Astronomical Search Collaboration) ಆಯೋಜಿಸಲಾದ ಕ್ಷುದ್ರಗ್ರಹ ಹುಡುಕಾಟ ಅಭಿಯಾನಕ್ಕೆ ಆಕೆಯನ್ನು ಆಯ್ಕೆ ಮಾಡಲಾಗಿದೆ. ಐತಿಹಾಸಿಕ ಮತ್ತು ಧಾರ್ಮಿಕವಾಗಿ ಮಹತ್ವದ ಸಿರ್ಪುರ್ ಪಟ್ಟಣ ಮೂಲದ ರಿತಿಕಾ ಧ್ರುವ್‌ ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಿಂದ 60 ಕಿಮೀ ದೂರದಲ್ಲಿರುವ ಮಹಾಸಮುಂಡ್‌ನ ನಯಾಪರದ ಸ್ವಾಮಿ ಆತ್ಮಾನಂದ ಸರ್ಕಾರಿ ಇಂಗ್ಲಿಷ್ ಶಾಲೆಯಲ್ಲಿ (SAGES) 11 ನೇ ತರಗತಿ ಓದುತ್ತಿದ್ದಾಳೆ ಎಂದು ತಿಳಿದುಬಂದಿದೆ.

ಇದನ್ನು ಓದಿ: ನಾಸಾ ಚಂದ್ರಯಾನಕ್ಕೆ ತಾಂತ್ರಿಕ ದೋಷ: ಆರ್ಟೆಮಿಸ್‌ 1 ಯೋಜನೆ ಮುಂದೂಡಿಕೆ

ಈ ಸಂಬಂಧ ಮಾಧ್ಯಮಗಳಿಗೆ ಶಾಲೆಯ ಪ್ರಾಂಶುಪಾಲ ಅಮಿ ರುಫಸ್ “ರಿತಿಕಾ ಧ್ರುವ್‌ ಕ್ಷುದ್ರಗ್ರಹ ಶೋಧ ಅಭಿಯಾನದಲ್ಲಿ ಭಾಗವಹಿಸಿ ಆಯ್ಕೆಯಾಗಿದ್ದಳು. ಬಾಲ್ಯದಿಂದಲೂ ಬಾಹ್ಯಾಕಾಶದಲ್ಲಿ ಆಸಕ್ತಿ ಹೊಂದಿರುವ ನಮ್ಮ ಕುತೂಹಲಕಾರಿ ಚಿಕ್ಕ ಹುಡುಗಿ ರಿತಿಕಾ ಧ್ರುವ್‌ ಮಿಂಚಿದ್ದಾಳೆ. ಅವಳು ತಂಡವನ್ನು ಪ್ರತಿನಿಧಿಸಿದಳು ಮತ್ತು ಬಿಲಾಸ್‌ಪುರದಲ್ಲಿ ಉತ್ತಮ ಪ್ರದರ್ಶನ ನೀಡಿದಳು" ಎಂದು ಅವರು ಹೇಳಿದ್ದಾರೆ. 

ಅಲ್ಲದೆ, ಈಗ ರಿತಿಕಾ ಧ್ರುವ್‌ ಗುರುತ್ವಾಕರ್ಷಣೆಯ ಬಲ, R 136 A 1 (ಇದುವರೆಗೆ ಕಂಡುಬಂದಿರುವ ಅತ್ಯಂತ ಬೃಹತ್ ನಕ್ಷತ್ರ), ನಕ್ಷತ್ರಗಳ ಘರ್ಷಣೆ, ಕಪ್ಪು ಕುಳಿ ಮತ್ತು ಬಾಹ್ಯಾಕಾಶದ ಬಗ್ಗೆ ಪ್ರಾಯೋಗಿಕವಾಗಿ ಇನ್ನಷ್ಟು ತಿಳಿದುಕೊಳ್ಳಲು ಅಕ್ಟೋಬರ್ 1 ರಿಂದ 6 ರವರೆಗೆ ಎಸ್‌ಡಿಎಸ್‌ಸಿಗೆ ಹೋಗುತ್ತಿದ್ದಾಳೆ’’ ಎಂದು ಪ್ರಾಂಶುಪಾಲರು ಹೇಳಿದರು.

ಇನ್ನು, ತನ್ನ ಸಾಧನೆಯ ಬಗ್ಗೆ ಖುಷಿ ವ್ಯಕ್ತಪಡಿಸಿದ ರಿತಿಕಾ ಧ್ರುವ್‌, ಒಂದು ವಾರದ ತರಬೇತಿಯ ನಂತರ ತಾನು ನವೆಂಬರ್ 2022 ರ ನಂತರ ಇಸ್ರೋದಲ್ಲಿ ಕ್ಷುದ್ರಗ್ರಹ-ಬೇಟೆ ಶಿಬಿರದಲ್ಲಿ ಪಾಲ್ಗೊಳ್ಳುತ್ತೇನೆ ಎಂದೂ ಹೇಳಿದಳು.

click me!