ಉಡುತೊರೆ ಜಲಾಶಯದ ನೀರು ನಿರ್ವಹಣಾ ಸಲಹಾ ಸಮಿತಿಯೇ ರಚನೆಯಾಗಿಲ್ಲ. ಹೀಗಾಗಿ ಜಲಾಶಯದಿಂದ ರೈತರಿಗೆ ಯಾವುದೇ ರೀತಿ ಅನುಕೂಲವಾಗುತ್ತಿಲ್ಲ. ಜಲಾಶಯದಲ್ಲಿ ಗಿಡಗಂಟಿಗಳು ಆವೃತ್ತಗೊಂಡು ಕೆಸರು ತುಂಬಿದ್ದು, ನೀರಾವರಿ ಇಲಾಖೆ ನಿರ್ವಹಣೆ ಮಾಡದ ಪರಿಣಾಮ ಜಮೀನುಗಳಿಗೆ ನೀರಿಲ್ಲದೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.
ಜಿ. ದೇವರಾಜ ನಾಯ್ಡು
ಹನೂರು:(ಅ.11): ಉಡುತೊರೆ ಜಲಾಶಯದ ನೀರು ನಿರ್ವಹಣಾ ಸಲಹಾ ಸಮಿತಿಯೇ ರಚನೆಯಾಗಿಲ್ಲ. ಹೀಗಾಗಿ ಜಲಾಶಯದಿಂದ ರೈತರಿಗೆ ಯಾವುದೇ ರೀತಿ ಅನುಕೂಲವಾಗುತ್ತಿಲ್ಲ. ಜಲಾಶಯದಲ್ಲಿ ಗಿಡಗಂಟಿಗಳು ಆವೃತ್ತಗೊಂಡು ಕೆಸರು ತುಂಬಿದ್ದು, ನೀರಾವರಿ ಇಲಾಖೆ ನಿರ್ವಹಣೆ ಮಾಡದ ಪರಿಣಾಮ ಜಮೀನುಗಳಿಗೆ ನೀರಿಲ್ಲದೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.
undefined
1977-78ರಲ್ಲಿ 250 ಕೋಟಿ ರು. ವೆಚ್ಚದಲ್ಲಿ ದೇವರಾಜ ಅರಸು (Devaraja Arasu) ಮುಖ್ಯಮಂತ್ರಿಗಳ ಅವಧಿಯಲ್ಲಿ ಪ್ರಾರಂಭಗೊಂಡ ಕಾಮಗಾರಿ ನಾಲ್ಕು ದಶಕ ಕಳೆದರೂ ರೈತರಿಗೆ (Farmers) ನೀರಾವರಿ ಯೋಜನೆಗೆ ಸದ್ಬಳಕೆಯಾಗಿಲ್ಲ. 2016ರಲ್ಲಿ ದಿ. ಸಚಿವ ಮಹದೇವ ಪ್ರಸಾದ್ (Mahadev Prasad ) ಅವಧಿಯಲ್ಲಿ ಉದ್ಘಾಟನೆಗೊಂಡು ಎಂಟು ವರ್ಷಗಳಾಗಿದ್ದು, ಅಪಾರ ಪ್ರಮಾಣದ ನೀರು ಡ್ಯಾಮ್‌ನಲ್ಲಿ ತುಂಬಿದ್ದರೂ ರೈತರಿಗೆ ಯಾವುದೇ ಉಪಯೋಗವಾಗುತ್ತಿಲ್ಲ.
ಉಡುತೊರೆ ಯೋಜನೆ ಅಚ್ಚುಕಟ್ಟು ಪ್ರದೇಶದ ಎಡದಂಡೆ ನಾಲೆಯ 10 ಸಾವಿರ ಹೆಕ್ಟೇರ್, ಬಲದಂಡೆ ಯೋಜನೆ 6,000 ಹೆಕ್ಟರ್ ಪ್ರದೇಶದಲ್ಲಿದ್ದು, ನೀರಾವರಿ ಯೋಜನೆಗೆ ಸದ್ಬಳಕೆ ಮಾಡಿಕೊಳ್ಳಲು ಈ ಭಾಗದ ಅಜ್ಜಿಪುರ, ಕಾಂಚಳ್ಳಿ, ಬಸಪ್ಪನ ದೊಡ್ಡಿ, ಗಂಗನ ದೊಡ್ಡಿ, ಕುರುಬರ ದೊಡ್ಡಿ, ರಾಮಾಪುರ, ಗಂಗನದೊಡ್ಡಿ, ಬಸಪ್ಪನ ದೊಡ್ಡಿ ರಾಮಪುರ ಮತ್ತು ಇತರೆ ಕೌದಳ್ಳಿಯವರೆಗೂ ರೈತರು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಆದರೆ, ಈ ಭಾಗದ ರೈತರಿಗೆ ವರದಾನವಾಗಬೇಕಾಗಿದ್ದ ಜಲಾಶಯದ ನೀರು, ನಾಲೆಯಲ್ಲಿ ಗಿಡಗಂಟಿ ಅಳೆತ್ತರ ಬೆಳೆದು ನಿಂತು ಕೆಸರು ತುಂಬಿರುವುದರಿಂದ ಯೋಜನೆಯ ಪ್ರತಿಫಲ ರೈತರಿಗೆ ಇಲ್ಲದಂತಾಗಿದೆ.
ರೈತರ ಸಲಹಾ ಸಮಿತಿ ರಚನೆಯಾಗಿಲ್ಲ: ನೀರಾವರಿ ಇಲಾಖೆ ರೈತರ ಸಲಹಾ ಸಮಿತಿ ರಚಿಸಿ, ನಂತರ ಜಮೀನುಗಳಿಗೆ ನೀರಾವರಿ ಕಲ್ಪಿಸುವ ವ್ಯವಸ್ಥೆ ಮಾಡಬೇಕಾಗಿರುವುದರಿಂದ ಅಧಿಕಾರಿಗಳು ಯಾವುದೇ ನೀರಾವರಿಗೆ ಸಂಬಂಧಿಸಿದಂತೆ ರೈತರ ಸಭೆಯಾಗಲಿ ಅಧಿಕಾರಿಗಳ ಸಭೆಯಾಗಲಿ ಮಾಡದೇ ಇರುವುದರಿಂದ ಯೋಜನೆ ಸದುದ್ದೇಶ ರೈತರಿಗೆ ಕನಸಾಗಿಯೇ ಉಳಿದಿದೆ.
ಉಡುತೊರೆ ಜಲಾಶಯದ ನಾಲಾ ಬಂಡುಗಳು ಅನೇಕ ವರ್ಷಗಳಿಂದ ನಿರ್ವಹಣೆ ಇಲ್ಲದೆ ಗಿಡ ಗಂಟೆ ಬೆಳೆದು ಕೆಸರು ತುಂಬಿದೆ. ಅಲ್ಲಲ್ಲಿ ಕಿತ್ತು ಬಂದ ಗಾರೆ ಹಾಳಾಗುತ್ತಿರುವ ನಾಲೆಗಳು ಮದ್ಯವ್ಯಸನಿಗಳ ತಾಣಗಳಾಗಿವೆ. ಸಂಬಂಧಿಸಿದ ನೀರಾವರಿ ಅಧಿಕಾರಿಗಳು ಕೋಟ್ಯಂತರ ರು. ವೆಚ್ಚ ಮಾಡಿ, ನಿರ್ಮಿಸಲಾಗಿರುವ ಜಲಾಶಯದ ನೀರು, ರೈತರು ಬಳಕೆಗೆæ ಅನುಕೂಲ ಕಲ್ಪಿಸುವಲ್ಲಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಅಪಾರ ಪ್ರಮಾಣದ ನೀರು ಪೋಲಾಗುವುದರ ಜೊತೆಗೆ ಈ ಭಾಗದ ರೈತರಿಗೂ ಅನ್ಯಾಯವಾಗಲಿದೆ.
ಉತ್ತಮ ಮಳೆಯಾದ ಹಿನ್ನೆಲೆ ಉಡುತೊರೆ ಜಲಾಶಯ ತುಂಬಿದೆ. ಎರಡು ದಶಕಗಳಿಂದಲೂ ಜಲಾಶಯ ನಾಲೆಗಳು ಗಿಡಗಂಟೆ ಬೆಳೆದಿದೆ. ಕೆಸರು ಮಣ್ಣು ತುಂಬಿದೆ. ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ 16,000 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯದ ಸದುದ್ದೇಶದಿಂದ ನಿರ್ಮಾಣಗೊಂಡಿರುವ ಜಲಾಶಯದಲ್ಲಿ ನೀರಿದ್ದರೂ, ರೈತರ ಉಪಯೋಗಕ್ಕೆ ಇಲ್ಲದಂತಾಗಿದೆ. ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕಾಗಿದೆ.
ಮುರಡೇಶ್ವರಸ್ವಾಮಿ, ತಾಪಂ ಮಾಜಿ ಅಧ್ಯಕ್ಷ,