ತುಮಕೂರು ಜಿಲ್ಲೆಯಲ್ಲಿ ವರುಣ ಆರ್ಭಟ ಮುಂದುವರೆದಿದೆ. ಮಳೆಯ ಅಬ್ಬರಕ್ಕೆ ಪ್ರತಿದಿನ ಒಂದಲ್ಲೊಂದು ಅವಾಂತರಗಳು ಸೃಷ್ಟಿಯಾಗುತ್ತಿವೆ. ಇದ್ರಿಂದ ತುಮಕೂರು ಹೊರವಲಯದ ಹೆಬ್ಬಾಕ ಕೆರೆ 45 ವರ್ಷಗಳ ಬಳಿಕ ಮೈ ತುಂಬಿ ಹರಿದಿದೆ.
ವರದಿ: ಮಹಂತೇಶ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್
ತುಮಕೂರು (ಅ.20): ಜಿಲ್ಲೆಯಲ್ಲಿ ವರುಣ ಆರ್ಭಟ ಮುಂದುವರೆದಿದೆ. ಮಳೆಯ ಅಬ್ಬರಕ್ಕೆ ಪ್ರತಿದಿನ ಒಂದಲ್ಲೊಂದು ಅವಾಂತರಗಳು ಸೃಷ್ಟಿಯಾಗುತ್ತಿವೆ. ನಿನ್ನೆ ರಾತ್ರಿ ಸರಿ ಸುಮಾರು 11 ಗಂಟೆಗೆ ಶುರುವಾದ ಮಳೆ ರಾತ್ರಿ ಇಡಿ ಸುರಿದಿದೆ. ಇದ್ರಿಂದ ಕೆರೆ ಕಟ್ಟೆಗಳು ಭರ್ತಿಯಾಗಿ ತುಂಬಿ ಹರಿದಿವೆ. ಇದ್ರಿಂದ ತುಮಕೂರು ಹೊರವಲಯದ ಹೆಬ್ಬಾಕ ಕೆರೆ 45 ವರ್ಷಗಳ ಬಳಿಕ ಮೈ ತುಂಬಿ ಹರಿದಿದೆ. ಈಗಾಗ್ಲೇ ನಾಲ್ಕೈದು ದಿನದಿಂದ ಹೆ್ಬ್ಬಾಕ ಕೆರೆಯಲ್ಲಿ ನೀರು ಹರಿಯುತ್ತಿದೆ. ಆದರೆ ರಾತ್ರಿ ಸುರಿದ ಮಳೆಗೆ ಮತ್ತಷ್ಟು ಅವಾಂತ ಸೃಷ್ಟಿಯಾಗಿದೆ. ಹೆಬ್ಬಾಕ ಕೆರೆ ತುಂಬಿದ ಪರಿಣಾಮ ಬೆಂಗಳೂರು_ ಪೂನಾ ರಾಷ್ಟ್ರೀಯ ಹೆದ್ದಾರಿ ಜಲಾವೃತ್ತವಾಗಿದೆ. ಕೋರಾ ಊರುಕೆರೆ ಗ್ರಾಮದ ಮಧ್ಯಭಾಗದಲ್ಲಿ ಸುಮಾರು ಅರ್ಥ ಕಿಲೋ ಮೀಟರ್ ದೂರ ರಾಷ್ಟ್ರೀಯ ಹೆದ್ದಾರಿ 48 ಜಲಾವೃತವಾಗಿದೆ. ದಿನದ 24 ಗಂಟೆ ವಾಹನಗಳ ಓಡಾಟವಿರುವ ಹೆದ್ದಾರಿಯಲ್ಲಿ ಕೆರೆ ನೀರು ನಿಂತ ಪರಿಣಾಮ ವಾಹನ ಓಡಾಟಕ್ಕೆ ಅಡ್ಡಿಯುಂಟಾಗಿದೆ. ಹೆದ್ದಾರಿ ರಸ್ತೆ ಮೇಲೆ ಐದಾರು ಅಡಿಗಿಂತ ಎತ್ತರದಲ್ಲಿ ನೀರು ನಿಂತಿದೆ. ಸರಿಸುಮಾರು ಬೆಳಗಿನ ಜಾವ 4 ಗಂಟೆಯಿಂದ ಹೆದ್ದಾರಿಯಲ್ಲಿ ವಾಹನಗಳ ಓಡಾಟ ಬಂದ್ ಆಗಿದೆ. ಇದ್ರಿಂದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಸರಿಸುಮಾರು 15 ಕಿಲೋ ಮೀಟರ್ ದೂರ ದೊಡ್ಡ ದೊಡ್ಡ ಟ್ರಕ್ ಗಳು, ಲಾರಿಗಳು, ಬಸ್, ಕಾರುಗಳು ಸೇರಿದಂತೆ ನೂರಾರು ವಾಹನಗಳು ಮುಂದಕ್ಕೆ ಚಲಿಸಲು ಸಾಧ್ಯವಾಗದೆ ಹೆದ್ದಾರಿಯಲ್ಲೇ ನಿಂತಿವೆ. ಇದ್ರಿಂದ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುವಂತಾಗಿದೆ.
20 ಕೆರೆಗಳಿಂದ ಹರಿದು ಬಂದ ನೀರು: ಹೆದ್ದಾರಿ ಮೇಲೆ ಈ ಪರಿ ನೀರು ನಿಲ್ಲಲ್ಲು ಕಾರಣ ಅಪಾರದ ಮಳೆ, ಜಿಲ್ಲೆಯಲ್ಲಿ ಕಂಡು ಕೇಳರಿಯದ ಪ್ರಮಾಣದಲ್ಲಿ ಮಳೆ ಬೀಳುತ್ತಿದೆ. ನಿನ್ನೆ ರಾತ್ರಿ ಕೊರಟಗೆರೆ ಹಾಗೂ ತುಮಕೂರು ಗ್ರಾಮಾಂತರದ ಭಾಗದಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಇದ್ರಿಂದ ಸಿದ್ದರಬೆಟ್ಟ,ದಾಸಾಲುಕುಂಟೆ, ಚಿಕ್ಕತೋಟ್ಲುಕೆರೆ, ಅರಕೆರೆ ಹೀಗೆ 20ಕ್ಕೂ ಹೆಚ್ಚು ಕೆರೆಗಳ ನೀರು ಏಕಾಏಕಿ ಹೆಬ್ಬಾಕ ಕೆರೆಯತ್ತ ಹರಿದು ಬಂದಿದೆ. ಕೆರೆಗೆ ನೀರಿನ ಪ್ರಮಾಣ ಹೆಚ್ಚಿದ ಪರಿಣಾಮ ಹೆದ್ದಾರಿ ಜಲಾವೃತ್ತವಾಗಿದೆ.
Tumakuru Rains: ನೀರಿನಲ್ಲಿ ಸಿಲುಕಿದ್ದ ಬಸ್ ಪ್ರಯಾಣಿಕರು ಪರದಾಟ
ಜಿಲ್ಲಾಢಳಿತ ಹಾಗೂ ಪೊಲೀಸರಿಂದ ಕಾರ್ಯಾಚರಣೆ:
ಟ್ರಾಫಿಕ್ ಜಾಮ್ ಹೆಚ್ಚಾದ ಬಳಿಕ ಸರಿಸುಮಾರು 5 ಗಂಟೆ ಸಂದರ್ಭದಲ್ಲಿ ಕೋರಾ ಹಾಗೂ ತುಮಕೂರು ಗ್ರಾಮಾಂತರ ಠಾಣೆಯ ಪೊಲೀಸ್ ಸಿಬ್ಬಂದಿಗಳು ಕಾರ್ಯಾಚರಣೆಗೆ ಇಳಿದಿದ್ದಾರೆ. ಟ್ರಾಫಿಕ್ ಜಾಮ್ ಕ್ಲಿಯರ್ ಮಾಡಲು ಹರಸಾಹಸ ಮಾಡಿದ್ದಾರೆ. ಬೆಂಗಳೂರು- ಪೂನಾ ನಡುವಿನ ಈಹೆದ್ದಾರಿ ನಾಲ್ಕು ಪಥಗಳನ್ನು ಹೊಂದಿದೆ. ಇದರಲ್ಲಿ ಪೂನಾದಿಂದ ಬೆಂಗಳೂರಿಗೆ ಬರುವ ಬರುವ ಎರಡು ಪಥದ ರಸ್ತೆಯಲ್ಲಿ ನೀರು ನಿಂತ ಪರಿಣಾಮ, ಬೆಂಗಳೂರಿನಿಂದ ಪೂನಾಗೆ ಹೋಗುವ ಒಂದೇ ರಸ್ತೆಯಲ್ಲಿ ವಾಹನಗಳನ್ನು ಕಳುಹಿಸಿ ಟ್ರಾಫಿಕ್ ಜಾಮ್ ಕ್ಲೀಯರ್ ಮಾಡಲು ಪೊಲೀಸರು ಯತ್ನಿಸಿದ್ದಾರೆ. ಅಲ್ಲದೆ ಡಿವೈಡರ್ ಹೊಡೆದು ಟ್ರಾಫಿಕ್ ಕ್ಲೀಯರ್ ಮಾಡಿದ್ದಾರೆ.
Hassan Rains; ಮರಣ ಮಳೆಗೆ ಮನೆಗಳಿಗೆ ನುಗ್ಗಿದ ನೀರು, ಬಾಲಕಿ ನೀರು ಪಾಲು
ಮೋರಿಯಲ್ಲಿ ಕಟ್ಟಿಕೊಂಡಿದ್ದ ಕಸ ಕಡ್ಡಿಯನ್ನು ತೆಗೆದ ಡಿಸಿ:
10 ಗಂಟೆ ಕಳೆದರು ಟ್ರಾಫಿಕ್ ಜಾಮ್ ಕ್ಲಿಯರ್ ಆಗದ ಪರಿಣಾಮ ಖುದ್ದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ, ರಸ್ತೆಯಲ್ಲಿ ನಿಂತಿದ್ದ ಕೆರೆ ನೀರು ಹರಿದು ಹೋಗಲು ಬೇಕಾದ ಕಾರ್ಯಚರಣೆಯಲ್ಲಿ ತೊಡಗಿದ್ರು. ತಾವೇ ನೀರಿನಲ್ಲಿ ಇಳಿದು ಕಟ್ಟಿಕೊಂಡಿದ್ದ ಕಡ್ಡಿ-ಕಸ ಕಳೆಯನ್ನು ಕೈಯಿಂದ ತೆಗೆದರು. ಬಳಿಕ ಜೆಸಿಬಿ ತರಿಸಿ ಹೆದ್ದಾರಿ ತಡೆಗೋಡೆಯನ್ನು ತೆರವುಗೊಳಿಸಿದ್ರು. ಅಲ್ಲದೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಹೆಬ್ಬಾಕ ಕೆರೆಯ ಕೋಡಿಯನ್ನು ಕೂಡ ಒಡೆಸಲಾಯ್ತು. ಇದ್ರಿಂದ ಹೆದ್ದಾರಿಯಲ್ಲಿ ನಿಂತಿದ್ದ ನೀರು ಸರಾಗವಾಗಿ ಹರಿದು ಹೊಯ್ತು. ಬಳಿಕ ಒಂದೊಂದೆ ವಾಹನಗಳು ಸಂಚಾರ ಶುರುವಾಗಿ, ಟ್ರಾಫಿಕ್ ಜಾಮ್ ಕ್ಲೀಯರ್ ಆಯ್ತು. ಮಳೆಯಿಂದಾಗಿ ಸರಿ ಸುಮಾರು ಐದಾರು ಗಂಟೆಗಳ ಕಾಲ ಹೆದ್ದಾರಿ ಬ್ಲಾಕ್ ಆಗಿತ್ತು. ವಾಹನ ಸವಾರರು ಪರದಾಡುವಂತಾಯ್ತು. ಈ ಬಗ್ಗೆ ಏಷ್ಯನೆಟ್ ಸುವರ್ಣ ನ್ಯೂಸ್ ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿ ಹೆದ್ದಾರಿ ಮೇಲೆ ನೀರು ನಿಲ್ಲದಂತೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು. ಇಂದು ಕೂಡ ಮಳೆಯ ಮುನ್ಸೂಚನೆಯಿದ್ದು, ಇನ್ನು ಯಾವೆಲ್ಲಾ ಅವಾಂತರಗಳು ಸೃಷ್ಟಿಯಾಗುತ್ತೊ ಕಾದು ನೋಡಬೇಕು.