Shivamogga: ಬೆಂಗಳೂರು ಬಳಿಕ ಶಿವಮೊಗ್ಗದಲ್ಲೂ HMP ವೈರಸ್‌ ಪತ್ತೆ, ಐವರು ಮಕ್ಕಳಲ್ಲಿ ಸೋಂಕು

By Santosh Naik  |  First Published Jan 7, 2025, 4:13 PM IST

ಶಿವಮೊಗ್ಗದಲ್ಲಿ ಐವರು ಮಕ್ಕಳಲ್ಲಿ ಹೆಚ್ಎಂಪಿ ವೈರಸ್ ಸೋಂಕು ಪತ್ತೆಯಾಗಿದೆ. ಖಾಸಗಿ ಮಕ್ಕಳ ಆಸ್ಪತ್ರೆಯಲ್ಲಿ ಈ ಪ್ರಕರಣಗಳು ವರದಿಯಾಗಿವೆ, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದೆ.


ಶಿವಮೊಗ್ಗ (ಜ.7): ದೇಶದಲ್ಲಿ ಆತಂಕ ಮೂಡಿಸಿರುವ ಎಚ್‌ಎಂಪಿ ವೈರಸ್‌ ಪ್ರಭಾವ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ ಸೋಮವಾರ ದೇಶದ ಎರಡು ಮೊದಲ ಕೇಸ್‌ ಪತ್ತೆಯಾದ ಬಳಿಕ ಮಂಗಳವಾರ ಮಲೆನಾಡು ಶಿವಮೊಗ್ಗದಲ್ಲೂ ಎಚ್‌ಎಂಪಿವಿ ಬಗ್ಗೆ ಗೊತ್ತಾಗಿದೆ. ಚೀನಾದಲ್ಲಿ ಆತಂಕ ಮೂಡಿಸುತ್ತಿರುವ  ವೈರಸ್ ಶಿವಮೊಗ್ಗದಲ್ಲೂ ಪತ್ತೆಯಾಗಿದೆ. ಖಾಸಗಿ ಮಕ್ಕಳ ಆಸ್ಪತ್ರೆಯಲ್ಲಿ ಐವರು ಮಕ್ಕಳಲ್ಲಿ  ಹೆಚ್ಎಂಪಿ ವೈರಸ್ ಸೋಂಕು ಕಂಡುಬಂದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಶಿವಮೊಗ್ಗದ ಸರ್ಜಿ ಮಕ್ಕಳ ಆಸ್ಪತ್ರೆಯಲ್ಲಿ ಎಚ್ಎಂಪಿ ವೈರಸ್ ಸೋಂಕು ದೃಢಪಟ್ಟ ಬಗ್ಗೆ ವೈದ್ಯ ಧನಂಜಯ್ ಸರ್ಜಿ ಮಾಹಿತಿ ನೀಡಿದ್ದಾರೆ. ಆರು ತಿಂಗಳಿನಿಂದ ಎರಡು ವರ್ಷದೊಳಗಿನ ಮೂವರು ಮಕ್ಕಳಲ್ಲಿ ಸೋಂಕು ದೃಢಪಟ್ಟಿತ್ತು. ಮಕ್ಕಳಲ್ಲಿ ಉಸಿರಾಟದ ತೊಂದರೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು  ಎಂದು ಮಾಹಿತಿ ನೀಡಿದ್ದಾರೆ.

ಜಗತ್ತಿನ ಅತ್ಯಂತ ಡೇಂಜರಸ್‌ ವೈರಸ್‌ ಜೈರ್‌ ಎಬೋಲಾ ಬಗ್ಗೆ ನಿಮಗೆಷ್ಟು ಗೊತ್ತು?

Tap to resize

Latest Videos

ಕೊರೋನಾ ಶಂಕೆಯಲ್ಲಿ ಸ್ವಾಬ್ ತೆಗೆದು ಟೆಸ್ಟ್ ಮಾಡಿಸಲಾಗಿತ್ತು. ನಂತರ ಲ್ಯಾಬ್ ವರದಿಯಲ್ಲಿ ಹ್ಯೂಮನ್ ಮೆಟಾನ್ಯುಮೊವೈರಸ್ ಎನ್ನುವುದು ದೃಢಪಟ್ಟಿತ್ತು. ಉಸಿರಾಟದ ಸೋಂಕಿನ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡಿ ಮಕ್ಕಳನ್ನು ಗುಣಪಡಿಸಲಾಗಿದೆ ಎಂದು ಡಾ.  ಧನಂಜಯ್ ಸರ್ಜಿ ಮಾಹಿತಿ ನೀಡಿದ್ದಾರ. ಅಕ್ಟೋಬರ್ ನವೆಂಬರ್ ತಿಂಗಳಿನಿಂದಲೇ ಈ ಸೋಂಕು ಆರಂಭಗೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ.  2 ವರ್ಷ, 11 ತಿಂಗಳು, 4 ವರ್ಷ , 1  ವರ್ಷ, 6 ತಿಂಗಳ ಒಟ್ಟು ಐದು ಮಕ್ಕಳಲ್ಲಿ ಎಚ್ಎಂಪಿ ವೈರಸ್ ಪತ್ತೆಯಾಗಿದ್ದು ಎಲ್ಲರೂ ಗುಣಮುಖರಾಗಿದ್ದಾರೆ ಎಂದಿದ್ದಾರೆ.

ಬೆಂಗಳೂರಲ್ಲಿ ಮೊದಲ ಕೇಸ್‌, HMPV ವಿರುದ್ಧ ಸಮರಕ್ಕೆ ಸಜ್ಜಾದ ದೆಹಲಿ!

HMPV ವೈರಸ್ ಕುರಿತು ಕೇಂದ್ರ ಹಾಗೂ ಕರ್ನಾಟಕ ಆರೋಗ್ಯ ಇಲಾಖೆಗಳು ಮಾರ್ಗಸೂಚಿ ಪ್ರಕಟಿಸಿದೆ. ಜನಸಂದಣಿ ಪ್ರದೇಶಗಳಿಂದ ದೂರವಿರಿ ಎಂದು ಸೂಚಿಸಿದೆ. ಶುಚಿತ್ವಕ್ಕೆ ಹೆಚ್ಚಿನ ಆದ್ಯತ ನೀಡಲು ಸೂಚಿಸಿದೆ.ಕೈಗಗಳನ್ನು ಸೋಪಿನಿಂದ ಅಥವಾ ಸ್ಯಾನಿಟೈಸರ್‌ನಿಂದ ತೊಳೆಯಲು ಸೂಚಿಸಿದೆ. ಕೆಮ್ಮುವಾಗಿ ಮೂಗು, ಬಾಯಿ ಮುಚ್ಚಿಕೊಳ್ಳಲು ಸೂಚಿಸಲಾಗಿದೆ. HMPV  ಯಾವುದೇ ರೋಗಲಕ್ಷಣಗಳು ಕಂಡು ಬಂದರೆ ತಕ್ಷಣವೇ ಆರೋಗ್ಯ ಕೇಂದ್ರಕ್ಕೆ ಬೇಟಿ ನೀಡಲು ಸೂಚಿಸಿದ್ದಾರೆ.


ಮಂಗಳವಾರ ಜ್ವರ, ಶೀತ ಹಾಗೂ ಕೆಮ್ಮು ಸಮಸ್ಯೆಯಿಂದ ನಾಗ್ಪುರದ ಖಾಸಗಿ ಆಸ್ಪತ್ರೆಗೆ ಇಬ್ಬರು ಮಕ್ಕಳು ದಾಖಲಾಗಿದ್ದರು. ಇವರ ಪರೀಕ್ಷಿಸಿದಾಗ HMPV ವೈರಸ್ ಪತ್ತೆಯಾಗಿತ್ತು. ಆದರೆ ಮಾದರಿ ಸಂಗ್ರಹಿಸಿ ಅದರ ಫಲಿತಾಂಶ ಬರುವ ವೇಳೆ ಅಂದರೆ ಇಂದು(ಜ.07) ಇಬ್ಬರು ಮಕ್ಕಳು ಗುಣಮುಖರಾಗಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಪತ್ತೆಯಾದ 2 ಪ್ರಕರಣಗಳಲ್ಲಿ 3 ತಿಂಗಳ ಮಗು ಈಗಾಗಲೆ ಆಸ್ಪತ್ರೆಯಿಂದ  ಬಿಡುಗಡೆಯಾಗಿದೆ. ಇನ್ನು 8 ತಿಂಗಳ ಮಗು ಇಂದು ಬಿಡುಗಡೆಯಾಗುವ ಸಾಧ್ಯತೆ ಇದೆ. ಭಾರತದಲ್ಲಿ ಪತ್ತೆಯಾಗಿರುವ ಈ ವೈರಸ್‌ನಿಂದ ಯಾವುದೇ ಆತಂಕವಿಲ್ಲ ಎಂದು ಆರೋಗ್ಯ ಇಲಾಖೆ ಹೇಳಿದೆ. ಇಷ್ಟೇ ಅಲ್ಲ ಇದು ಕೋವಿಡ್ ರೀತಿಯ ಯಾವುದೇ ಪರಿಣಾಮ ಸೃಷ್ಟಿಸುವುದಿಲ್ಲ ಎಂದಿದೆ.
 

click me!