ಚಿಕ್ಕಬಳ್ಳಾಪುರ (ನ.22): ವ್ಯಾಪಕ ಮಳೆಯಿಂದ (Heavy rain) ಜಿಲ್ಲೆಯಲ್ಲಿ (Chikkaballapura District) ಕೃಷಿ, ತೋಟಗಾರಿಕಾ ಬೆಳೆಗಳು ಸಂಕಷ್ಟದಲ್ಲಿವೆ. ಈಗಾಗಲೇ ಅನೇಕ ಬೆಳೆ (Crops) ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಕಳೆದ ಅನೇಕ ದಿನಗಳಿಂದಲೂ ಜಿಲ್ಲಯಲ್ಲಿ ಸುರಿಯುತ್ತಿರುವ ಮಳೆಯಿಂದ (Rain) ಸಾವಿರಾರು ಎಕರೆಯಲ್ಲಿ ಬೆಳೆದ ವಿವಿಧ ರೀತಿಯ ಬೆಳೆಗಳು ನಷ್ಟವಾಗಿದೆ. ಬೆಳೆ ಕೊಳೆಯುವುದು. ಮೊಳಕೆಯೊಡೆವುದು. ಕೊಚ್ಚಿ ಹೋಗುತ್ತಿರುವುದು ಸಾಮಾನ್ಯವಾಗಿದೆ. ಇತ್ತ ಅನ್ನದಾತ (farmers) ಕಂಗಾಲಾಗಿದ್ದಾನೆ. ಹಾಗಾದರೆ ಮಳೆಯಿಂದ ಬೆಳೆ ಸಂರಕ್ಷಣೆ ಹೇಗೆ ..? ಕೃಷಿ ವಿಜ್ಞಾನಿಗಳು (Scientist) ನೀಡಿರುವ ಈ ಸಲಹೆಗಳನ್ನು ತಪ್ಪದೇ ಪಾಲಿಸಿ. ಕೃಷಿ ವಿಜ್ಞಾನಿಗಳು ನೀಡಿರುವ ಸಲಹೆಗಳಿಂದ ನಷ್ಟ ತಪ್ಪಿಸಿ ಬೆಳೆಗಳನ್ನು ರಕ್ಷಿಸಿ.
ಸತತ ಮೂರು ದಿನಗಳಿಂದ ಸುರಿದ ಮಳೆಯಿಂದ ಹೊಲದಲ್ಲಿ ನಿಂತ ನೀರನ್ನು (water) ಬಸಿದು ಹೋಗುವಂತೆ ಮಾಡಬೇಕು. ಸತತ ಮಳೆಯಿಂದಾಗಿ ಬೆಳೆಗಳ ಎಲೆ ಹಳದಿ (yellow) ಬಣ್ಣವಾಗುವ ಸಾಧ್ಯತೆ ಇರುವುದರಿಂದ ರೈತರು 19:19:19 ಪ್ರತಿ ಲೀಟರ್ ನೀರಿಗೆ 6 ಮಿ.ಲೀ. ಬೆರೆಸಿ ಸಿಂಪಡಿಸಬೇಕು.
ತೊಗರಿ ಮತು ಅವರೆ : ಜಿಲ್ಲೆಯಾದ್ಯಂತ ತೊಗರಿ ಬೆಳೆಯು ಹೂ (Flower) ವಾಡುವ ಹಂತದಲ್ಲಿದೆ. ಆಂತಹ ಕಡೆ ಕಾಯಿ ಕೊರಕ ಕೀಟದ ಮೊಟ್ಟೆ (egg) ಮತ್ತು ಮೊದಲನೇ ಹಂತದ ಹುಳುಗಳು ಕಂಡುಬಂದಿವೆ. ಇವುಗಳ ಸಂಖ್ಯೆಯು ಆರ್ಥಿಕ ನಷ್ಟವನ್ನುಂಟು ಮಾಡುವಷ್ಟು ಇರುವುದರಿಂದ ತಪ್ಪದೇ ರೈತರು ಮೊದಲನೇ ಸಿಂಪರಣೆಯಾಗಿ ಮೋಟ್ಟೆ ನಾಶಕಗಳಾದ ಪ್ರೋಫೆನೋಫಾಸ್ (profenophos) 50 ಇಸಿ 2.0 ಮಿ.ಲೀ. ಅಥವಾ ಥಯೋಡಿಕಾರ್ಬ 0.6 ಗ್ರಾಂ. ಅಥವಾ ಮಿಥೋಮಿಲ್ 0.6 ಗ್ರಾಂ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಪ್ರತಿಎಕರೆಗೆ 250 ಲೀಟರ್ ಸಿಂಪರಣಾ ದ್ರಾವಣ ಉಪಯೋಗಿಸಬೇಕು.
ತೊಗರಿ: ಹೂ ಉದುರುವಿಕೆ ತಡೆಗಟ್ಟಲು ಪ್ರತಿ ಲೀಟರ್ ನೀರಿಗೆ0.5 ಮಿ.ಲೀ. ಎನ್‌ಎಎ(ನ್ಯಾಪ್ತಲೀನ್ ಅಸಿಟಿಕ್ ಅಸಿಡ್) ಸಿಂಪಡಿಸಬೇಕು. ಕಳೆದ ವಾರ ಬಿದ್ದ ಮಳೆಯಿಂದಾಗಿ ವಾತಾವರಣ ತೇವಾಂಶದಿಂದ ಕೂಡಿದ್ದು ಕೆಲವು ಕಡೆ ಸರ್ಕೊಸ್ಪೊರಾ (sarcostora) ಎಲೆ ಚುಕ್ಕೆ ರೋಗಕಂಡುಬಂದಿದ್ದು ನಿರ್ವಹಣೆಗಾಗಿ ಕಾರ್ಬನ್ ಡೈಜಿಮ್ 1ಗ್ರಾಂ. ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪರಿಸಿರಿ. ಜಾನುವಾರುಗಳಿಗೆ (Cattle) ಚಪ್ಪೆ ರೋಗ ಹಾಗೂ ಗಂಟಲು ಬೇನೆ ತಗಲುವ ಸಾಧ್ಯತೆ ಇರುವುದರಿಂದ ಸೂಕ್ತ ಲಸಿಕೆ ಹಾಕಿಸಬೇಕು. ಕುರಿ ಹಾಗೂ ಆಡುಗಳಿಗೆ ಬರುವ ಎಂಟರೋಟಾಕ್ಸಿಮಿಯಾ ರೋಗಕ್ಕೆ ಸೂಕ್ತ ಲಸಿಕೆ ಹಾಕಿಸಬೇಕು.
ಅಪಾರ ಹಾನಿ :
ಜಿಲ್ಲಾದ್ಯಂತ ಸುರಿಯುತ್ತಿರುವ ವ್ಯಾಪಕ ಮಳೆಯಿಂದಾಗಿ (Heavy Rain) ಹಾಗೂ ಮುಂದಿನ ಎರಡು ದಿನ ಹೆಚ್ಚು ಮಳೆ ಬರುವ ಸಾಧ್ಯತೆಯ ಹಿನ್ನೆಲೆ ಯಲ್ಲಿ ಮಕ್ಕಳು (Children) ಹಾಗೂ ವಿದ್ಯಾರ್ಥಿಗಳ (Students) ಹಿತ ದೃಷ್ಟಿಯಿಂದ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಬರುವ ಎರಡು ದಿನಗಳ (ಇಂದು - ನಾಳೆ) ಕಾಲ ಜಿಲ್ಲೆಯ ಎಲ್ಲ ಶಾಲಾ, ಕಾಲೇಜುಗಳಿಗೆ (School and Colleges) ರಜೆ ಘೋಷಣೆ ಮಾಡಲಾಗಿದೆ.
ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದ್ದು ಈ ಸಂಬಂದ ಜಿಲ್ಲಾಧಿಕಾರಿಗಳ (DC) ಮೌಖಿಕ ಸೂಚನ ಮೇರಗೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ (Education Department) ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಪ್ರತ್ಯೇಕವಾಗಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿರುವ ಸಂಬಂದ ಆದೇಶ ಹೊರಡಿಸಿದ್ದಾರೆ.
ಸತತ ಮಳೆಯಿಂದಾಗಿ (Rain) ಚಿಕ್ಕಬಳ್ಳಾಪುರ ಜಿಲ್ಲೆಯ ಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಮಳೆಯಿಂದಾಗಿ ಸರ್ಕಾರಿ ಶಾಲಾ, ಕಾಲೇಜುಗಳ ಕೊಠಡಿಗಳು ಕೆಲವು ಸೋರಿಕೆ ಆಗುತ್ತಿದ್ದು ಮಕ್ಕಳ ಭದ್ರತೆಯ ಹಿತ ದೃಷ್ಟಿಯಿಂದಾಗಿ ಹಾಗೂ ಪೋಷಕರು (parents) ಮಕ್ಕಳ ಬಗ್ಗೆ ತೀವ್ರ ಕಳವಳ ವ್ಯಕ್ತ ಪಡಿಸಿರುವ ಹಿನ್ನಲೆಯಲ್ಲಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಎರಡು ದಿನಗಳ ಕಾಲ ಜಿಲ್ಲೆಯ ಎಲ್ಲ ಶಾಲೆ ಹಾಗೂ ಪಿಯು ಕಾಲೇಜುಗಳಿಗೆ ರಜೆ ಘೋಷಿಸಿರುವುದಾಗಿ ಜಿಲ್ಲಾಧಿಕಾರಿ ಆರ್.ಲತಾ (R latha) ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.