ಸತತ ನಾಲ್ಕನೇ ಬಾರಿ ಮಂಗಳೂರು ವಿವಿ ಚಾಂಪಿಯನ್‌

By Kannadaprabha NewsFirst Published Jan 7, 2020, 9:05 AM IST
Highlights

5 ದಿನಗಳ 80ನೇ ಅಖಿಲ ಭಾರತ ಅಂತರ್‌ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರು ವಿವಿ ಒಟ್ಟು 170 ಅಂಕಗಳೊಂದಿಗೆ ಸತತ ನಾಲ್ಕನೇ ಬಾರಿ ಚಾಂಪಿಯನ್‌ ಪಟ್ಟಕ್ಕೇರಿತು. ಅಚ್ಚರಿಯ ಪ್ರದರ್ಶನದೊಂದಿಗೆ ಚೆನ್ನೈನ ಮದ್ರಾಸ್‌ ವಿವಿ (98.5 ಅಂಕ) ದ್ವಿತೀಯ ಸ್ಥಾನ ಪಡೆದರೆ, ಕೊಟ್ಟಾಯಂನ ಮಹಾತ್ಮ ಗಾಂಧಿ ವಿವಿ (80 ಅಂಕ) ತೃತೀಯ ಸ್ಥಾನ ಪಡೆಯಿತು.

ಮೂಡುಬಿದಿರೆ(ಜ.07): ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ಸೋಮವಾರ ಮುಕ್ತಾಯಗೊಂಡ 5 ದಿನಗಳ 80ನೇ ಅಖಿಲ ಭಾರತ ಅಂತರ್‌ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರು ವಿವಿ ಒಟ್ಟು 170 ಅಂಕಗಳೊಂದಿಗೆ ಸತತ ನಾಲ್ಕನೇ ಬಾರಿ ಚಾಂಪಿಯನ್‌ ಪಟ್ಟಕ್ಕೇರಿತು.

ಅಚ್ಚರಿಯ ಪ್ರದರ್ಶನದೊಂದಿಗೆ ಚೆನ್ನೈನ ಮದ್ರಾಸ್‌ ವಿವಿ (98.5 ಅಂಕ) ದ್ವಿತೀಯ ಸ್ಥಾನ ಪಡೆದರೆ, ಕೊಟ್ಟಾಯಂನ ಮಹಾತ್ಮ ಗಾಂಧಿ ವಿವಿ (80 ಅಂಕ) ತೃತೀಯ ಸ್ಥಾನ ಪಡೆಯಿತು. ಕ್ರೀಡಾಕೂಟದಲ್ಲಿ ಒಟ್ಟು 9 ಕೂಟ ದಾಖಲೆಗಳು ನಿರ್ಮಾಣವಾಗಿದ್ದು, ಈ ಪೈಕಿ ಮಂಗಳೂರು ವಿವಿ 4 ಕೂಟ ದಾಖಲೆ ಮಾಡಿದ್ದು, ಒಟ್ಟು 9 ಚಿನ್ನ, 9 ಬೆಳ್ಳಿ ಹಾಗೂ 5 ಕಂಚಿನ ಪದಕ ಸೇರಿದಂತೆ ಒಟ್ಟು 23 ಪದಕ ಪಡೆದಿದೆ.

ಮೋದಿ-ಶಾಗೆ ಕೊಲೆ ಬೆದರಿಕೆ ಹಾಕಿದ್ದ ಯುವಕ ಅಂದರ್..!

ಪುರುಷರ ವಿಭಾಗದಲ್ಲಿ ಮಂಗಳೂರು ವಿವಿ (101 ಅಂಕಗಳು), ಮದ್ರಾಸ್‌ ವಿವಿ (56.5ಅಂಕಗಳು), ಮಹರ್ಷಿ ದಯಾನಂದ ವಿವಿ (34) ಅಂಕಗಳೊಂದಿಗೆ ಮೊದಲ ಮೂರು ಸ್ಥಾನ ಪಡೆದರೆ, ಮಹಿಳಾ ವಿಭಾಗದಲ್ಲಿ ಮಂಗಳೂರು ವಿವಿ (69 ಅಂಕಗಳು), ಕೊಟ್ಟಾಯಂನ ಮಹಾತ್ಮ ಗಾಂಧಿ ವಿವಿ (47ಅಂಕಗಳು) ಹಾಗೂ ಮದ್ರಾಸ್‌ ವಿವಿ (42 ಅಂಕ) ಗಳೊಂದಿಗೆ ಮೊದಲ ಮೂರು ಸ್ಥಾನ ಅಲಂಕರಿಸಿತು.

ಮಂಗಳೂರು ವಿವಿಯ ಜಯ್‌ಶಾ ಪ್ರದೀಪ್‌ (ಟ್ರಿಪಲ್‌ ಜಂಪ್‌/1115 ಪಾಯಿಂಟ್ಸ್‌) ಹಾಗೂ ಆಚಾರ್ಯ ನಾಗಾರ್ಜುನ ವಿವಿಯ ವೈ.ಜ್ಯೋತಿ (100ಮೀ ಹರ್ಡಲ್ಸ್‌/1146 ಪಾಯಿಂಟ್ಸ್‌) ಸಾಧನೆಯೊಂದಿಗೆ ಬೆಸ್ಟ್‌ ಅಥ್ಲೀಟ್‌ ಗೌರವಕ್ಕೆ ಪಾತ್ರರಾದರು.

ಮತ್ತೆ ಎರಡು ಕೂಟ ದಾಖಲೆ

ಮಹಿಳೆಯರ ವಿಭಾಗದ 1500 ಮೀ. ಓಟದಲ್ಲಿ ಪಟಿಯಾಲದ ಪಂಜಾಬ್‌ ವಿವಿಯ ಹರ್‌ಮಿಲನ್‌, 4 ನಿಮಿಷ 24.86ಸೆಕೆಂಡ್ಸ್‌ನಲ್ಲಿ ಗುರಿಮುಟ್ಟುವ ಮೂಲಕ ಕ್ಯಾಲಿಕಟ್‌ ವಿವಿಯ ಚಿತ್ರಾ ಪಿ.ಯು. (4 ನಿಮಿಷ 24.87 ಸೆಕೆಂಡ್ಸ್‌) ಹೆಸರಲ್ಲಿದ್ದ ದಾಖಲೆ ಮುರಿದರು. ಪುರುಷರ ವಿಭಾಗದ ಟ್ರಿಪಲ್‌ ಜಂಪ್‌ನಲ್ಲಿ ಮಂಗಳೂರು ವಿವಿಯ ಪ್ರದೀಪ್‌ ಜಯ್‌ ಶಾ (16.53 ಮೀ.) ತಮ್ಮದೇ ಹಿಂದಿನ ದಾಖಲೆ(16.36ಮೀ) ಮುರಿದು, ನೂತನ ಕೂಟ ದಾಖಲೆ ನಿರ್ಮಿಸಿದರು.

ಆಳ್ವಾಸ್‌ನ ಕ್ರೀಡಾ ಪ್ರೋತ್ಸಾಹ ಸ್ತುತ್ಯರ್ಹ: ಪಿ.ಟಿ.ಉಷಾ

ಕ್ರೀಡಾ ವಿಜೇತರಿಗೆ ಪ್ರೋತ್ಸಾಹ ಧನ ನೀಡಿ ಉತ್ತೇಜಿಸುವಂತಹ ಮಹತ್‌ಕಾರ್ಯ ಆಳ್ವಾಸ್‌ ವಿದ್ಯಾಸಂಸ್ಥೆ ಮಾಡುತ್ತಿರುವುದು ವಿಶೇಷ ಹಾಗೂ ಸ್ತುತ್ಯರ್ಹವಾದುದು ಎಂದು ಮಾಜಿ ಕ್ರೀಡಾಪಟು ಪಿ.ಟಿ.ಉಷಾ ಹೇಳಿದ್ದಾರೆ. ಅಥ್ಲೆಟಿಕ್‌ ಚಾಂಪಿಯನ್‌ಶಿಪ್‌ ಸಮಾರೋಪದಲ್ಲಿ ಮಾತನಾಡಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗಾಗಿ ಮಾಜಿ ಒಲಂಪಿಯನ್‌ ಕ್ರೀಡಾಪಟು ಪಿ.ಟಿ.ಉಷಾ ಅವರನ್ನು ಸನ್ಮಾನಿಸಲಾಯಿತು.

ಅಮಿತ್ ಶಾ ಬಂದ್ರೆ ಶಾಂತಿ ಕದಡ್ತಾರೆ, ಭೇಟಿಗೆ ಅವಕಾಶ ಬೇಡ: ಕಾಂಗ್ರೆಸ್ ಒತ್ತಾಯ.

ಮಾಜಿ ಸಚಿವ ಅಭಯಚಂದ್ರ ಜೈನ್‌ ಮಾತನಾಡಿದ್ದಾರೆ. ಕ್ರೀಡಾಕೂಟದ ಆಯೋಜನೆಗೆ ಹಾಗೂ ಸಹಕಾರಕ್ಕಾಗಿ ಪಟಿಯಾಲದ ಪಂಜಾಬಿ ಯೂನಿರ್ವಸಿಟಿ, ಕ್ಯಾಲಿಕಟ್‌ ಯೂನಿರ್ವಸಿಟಿ, ಅಮೃತ್‌ಸರ್‌ ಗುರುನಾನಕ್‌ ಯೂನಿರ್ವಸಿಟಿ, ಮಹಾರಾಜ್‌ ಯೂನಿರ್ವಸಿಟಿ, ಕೊಟ್ಟಾಯಂನ ಎಂ.ಜಿ. ಯೂನಿರ್ವಸಿಟಿ ಸೇರಿದಂತೆ ಮಂಗಳೂರು ವಿಶ್ವವಿದ್ಯಾಲಯದ ತರಬೇತುದಾರರನ್ನು ಹಾಗೂ ವ್ಯವಸ್ಥಾಪಕರನ್ನು ಆಳ್ವಾಸ್‌ ಸಂಸ್ಥೆ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅವರು ಗೌರವಿಸಿದ್ದಾರೆ.

ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಉಪ ಕುಲಸಚಿವ ಡಾ.ಬಿ.ವಸಂತ ಶೆಟ್ಟಿ, ಅಸೋಸಿಯೇಶನ್‌ ಆಫ್‌ ಇಂಡಿಯನ್‌ ಯುನಿವರ್ಸಿಟಿಯ ವೀಕ್ಷಕ ಡಾ.ಚರಣಜೀತ್‌ ಸಿಂಗ್‌ ಹಾಗೂ ಹಿರಿಯ ಕ್ರೀಡಾಪಟು ಬಾಬುಶೆಟ್ಟಿ ಉಪಸ್ಥಿತರಿದ್ದರು.

click me!