ಒಂದೇ ಕಣ್ಣು ಬಿಟ್ಟ ಆಂಜನೇಯ ಮೂರ್ತಿ : ಪವಾಡಕ್ಕೆ ಜನರ ಅಚ್ಚರಿ !

Suvarna News   | Asianet News
Published : Jan 07, 2020, 09:27 AM ISTUpdated : Jan 07, 2020, 11:44 AM IST
ಒಂದೇ ಕಣ್ಣು ಬಿಟ್ಟ ಆಂಜನೇಯ ಮೂರ್ತಿ : ಪವಾಡಕ್ಕೆ ಜನರ ಅಚ್ಚರಿ !

ಸಾರಾಂಶ

ಬೆಳಗಾವಿಯಲ್ಲಿ ಪವಾಡ ಸದೃಶ ಬೆಳವಣಿಗೆಯೊಂದು ನಡೆದಿದೆ. ಏಕಾ ಏಕಿ ಆಂಜನೇಯ ಮೂರ್ತಿಯ ಒಂದು ಕಣ್ಣು ತೆರೆದಿದ್ದು, ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ. 

ಬೆಳಗಾವಿ [ಜ.07]:  ಆಂಜನೇಯ ಮೂರ್ತಿಯಲ್ಲಿ ಏಕಾಏಕಿ ಒಂದು ಕಣ್ಣು  ತೆರೆದಂತೆ ಕಾಣಿಸುತ್ತಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. 

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ಆಂಜನೇಯ ದೇವಾಲಯದಲ್ಲಿರುವ ಮೂರ್ತಿಯಲ್ಲಿ ಏಕಾ ಏಕಿ ಒಂದು ಕಣ್ಣು ಬಿಟ್ಟಂತೆ ಕಾಣಿಸುತ್ತಿದೆ. 

ಇನ್ನು ಆಂಜನೇಯ ಮೂರ್ತಿಯಲ್ಲಿ ಕಣ್ಣು ಕಾಣಿಸಿಕೊಂಡಿರುವುದು ಗ್ರಾಮಸ್ಥರ ಅಚ್ಚರಿಗೆ ಕಾರಣವಾಗಿದೆ. ಈ ವಿದ್ಯಮಾನ ನೋಡಲು ನೂರಾರು ಜನರು ಸ್ಥಳಕ್ಕೆ ಆಗಮಿಸುತ್ತಿದ್ದಾರೆ. 

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನನ್ನು ನೇಣಿಗೆ ಏರಿಸಿದ್ದ ನಂದಗಡ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇದು ಶುಭ ಶಕುನವೋ ಅಥವಾ ಯಾವುದೋ ರೀತಿಯ ಸಮಸ್ಯೆ ಎದುರಾಗಲಿದೆಯೋ ಅನ್ನುವ ಆತಂಕ ಎದುರಾಗಿದೆ. 

ರೂಪ ಬದಲಿಸಿದ ಆಂಜನೇಯ, ವಿಸ್ಮಯಕಾರಿ ಮಂದಿರದ ಹಿಂದಿದೆ ರೋಚಕ ಕತೆ...

ಬೃಹತ್ ಆಲದ ಮರದ ಕೆಳಗೆ ಹನುಮನ ವಿಗ್ರಹ ಇದ್ದು, ಇಲ್ಲಿ ಪ್ರತೀ ಶನಿವಾರವೂ ಕೂಡ ಸಾವಿರಾರು ಮಂದಿ ಭಕ್ತರು ದರ್ಶನ ಪಡೆಯಲು ಆಗಮಿಸುತ್ತಾರೆ. ಈ ಹಿಂದೆಯೂ ಕೂಡ ಇದೇ ಹನುಮನ ವಿಗ್ರಹವು ಎರಡು ಕಣ್ಣುಗಳನ್ನು ಬಿಟ್ಟು ಅಚ್ಚರಿ ಮೂಡಿಸಿತ್ತು. ಇದೀಗ ಒಂದು ಕಣ್ಣು ತೆರೆದಿರುವುದು ಅಚ್ಚರಿಗೆ ಕಾರಣವಾಗಿದೆ. 

ಮಂಗಳಾರತಿ ವೇಳೆ ಪವಾಡ; ದರ್ಶನ ನೀಡಿದ ಹೊಳೆ ಆಂಜನೇಯಸ್ವಾಮಿ...

ಈ ಹಿಂದೆ ಮಂಡ್ಯದ ಮದ್ದೂರಿನಲ್ಲಿ ಆಂಜನೇಯ ದೇವಾಲಯದಲ್ಲಿ ಬೆಳ್ಳಿಯ ಮುಖವಾಡ ಕಳಚಿ  ಮೂಲ ಸ್ವರೂಪ ದರ್ಶನವಾಗಿತ್ತು. ಇದು ಕೂಡ ಪವಾಡ ಎನ್ನಲಾಗಿತ್ತು. ಇದೀಗ ನಂದಗಡದ ಘಟನೆಯೂ ಹಲವು ಅಚ್ಚರಿಕೆ ಕಾರಣವಾಗಿದೆ.

"

PREV
click me!

Recommended Stories

ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್