PMAY: ಧಾರವಾಡಕ್ಕೆ ಹೆಚ್ಚುವರಿ 3500 ಮನೆ: ಸಚಿವ ಸೋಮಣ್ಣ

By Girish Goudar  |  First Published Mar 20, 2022, 6:53 AM IST

*  ಕುಂದಗೋಳದಲ್ಲಿ 235 ಮನೆ ನಿರ್ಮಾಣ ಕಾಮಗಾರಿಯ ಭೂಮಿಪೂಜೆ
*  ಬಾರದ ಶಾಸಕಿ ಕುಸುಮಾವತಿ
*  ಜನ ವಾಸಿಸುವಲ್ಲೆ ಮನೆ ಕಟ್ಟಿಕೊಳ್ಳಲು ಅನುದಾನ ನೀಡುತ್ತರುವ ಪ್ರಧಾನಿ ಮೋದಿ 


ಹುಬ್ಬಳ್ಳಿ(ಮಾ.20):  ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ(Pradhan Mantri Awas Yojana) ಧಾರವಾಡ(Dharwad) ಜಿಲ್ಲೆಗೆ ಹೆಚ್ಚುವರಿಯಾಗಿ ನಗರ ಪ್ರದೇಶಗಳ ವ್ಯಾಪ್ತಿಗೆ 3500 ಮನೆ ಮಂಜೂರು ಮಾಡುವುದಾಗಿ ವಸತಿ ಹಾಗೂ ಮೂಲಭೂತ ಸೌಲಭ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ(V Somanna) ತಿಳಿಸಿದ್ದಾರೆ.

ಕುಂದಗೋಳ ಪಟ್ಟಣದಲ್ಲಿ ಶನಿವಾರ ಪ್ರಧಾನಮಂತ್ರಿ ಆವಾಸ್‌ ಯೋಜನೆಯ ಸರ್ವರಿಗೂ ಸೂರು ಯೋಜನೆಯಡಿ 235 ಮನೆ ನಿರ್ಮಾಣ ಕಾಮಗಾರಿಯ ಭೂಮಿಪೂಜೆ ನೆರವೇರಿಸಿ, ಕೊಳಚೆ ಪ್ರದೇಶದ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು. ಧಾರವಾಡ ಜಿಲ್ಲೆಯ ನಗರ ಹಾಗೂ ಪುರಸಭೆಗಳಿಗೆ 4,075 ಮನೆಗಳನ್ನು ಈಗಾಗಲೇ ಮಂಜೂರು ಮಾಡಲಾಗಿದೆ. ಶೀಘ್ರ ಹೆಚ್ಚುವರಿಯಾಗಿ 500 ಮನೆ ಮಂಜೂರು ಮಾಡುತ್ತೇವೆ. ಸರ್ಕಾರದಿಂದ ಮಂಜೂರು ಮಾಡಿದ ಮನೆಗಳನ್ನು ಅಡಮಾನ ಹಾಗೂ ಭೋಗ್ಯಕ್ಕೆ ಪಡೆಯುವ ಪದ್ಧತಿಯನ್ನು ತಡೆಯಲಾಗಿದೆ. ವಸತಿ ಯೋಜನೆಯ ಲಾಭ ಪಡೆಯವ ಫಲಾನುಭವಿಗಳ ಆದಾಯ ಮಿತಿಯನ್ನು 1.20 ಲಕ್ಷ ಹೆಚ್ಚಿಸಲಾಗಿದೆ ಎಂದರು.

Latest Videos

undefined

ಗುಡ್‌ ನ್ಯೂಸ್: ವಸತಿ ಯೋಜನೆಗಳ ಆದಾಯಮಿತಿ ಹೆಚ್ಚಳ

ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ(Pralhad Joshi) ಮಾತನಾಡಿ, ಹಿಂದಿನ ಸರ್ಕಾರಗಳು ಸ್ಲಂಗಳನ್ನು ಸ್ಥಳಾಂತರಿಸಲು ಪ್ರಯತ್ನಿಸುತ್ತಿದ್ದವು. ಆದರೆ ಪ್ರಧಾನಿ ಮೋದಿ(Narenda Modi) ಅವರು ಜನ ವಾಸಿಸುವಲ್ಲೆ ಮನೆ ಕಟ್ಟಿಕೊಳ್ಳಲು ಅನುದಾನ ನೀಡುತ್ತಿದ್ದಾರೆ. 2024ರ ಒಳಗಾಗಿ ಸರ್ವರಿಗೂ ಸೂರು ಒದಗಿಸುವ ಯೋಜನೆ ಹೊಂದಿದ್ದಾರೆ. ಈ ವರ್ಷ ಕೇಂದ್ರ ಸರ್ಕಾರ(Central Government) 1.15 ಕೋಟಿ ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಿದೆ ಎಂದರು.

ಜಿಲ್ಲೆಗೆ ನಗರ ವ್ಯಾಪ್ತಿಯಲ್ಲಿ 4,075 ಮನೆಗಳು ಮಂಜೂರಾಗಿವೆ. ಈ ಪೈಕಿ ಧಾರವಾಡ 2326, ಹುಬ್ಬಳ್ಳಿ 889, ನವಲಗುಂದ 375 ಕುಂದಗೋಳ 235 ಹಾಗೂ ಕಲಘಟಗಿ 250 ಮನೆಗಳನ್ನು . 271.82 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಪ್ರತಿ ಮನೆಯ ನಿರ್ಮಾಣದ ವೆಚ್ಚ . 6.34ರಿಂದ . 6.81 ಲಕ್ಷಗಳಾಗಿದೆ. ಕೇಂದ್ರ ಸರ್ಕಾರ ಪರಿಶಿಷ್ಟಜಾತಿ ಹಾಗೂ ಪಂಗಡದ ಫಲಾನುಭವಿಗಳಿಗೆ . 3.50 ಲಕ್ಷ ಹಾಗೂ ಇತರರಿಗೆ . 2.70 ಲಕ್ಷ ಅನುದಾನ ನೀಡುತ್ತಿದೆ. ಧಾರವಾಡ ಜಿಲ್ಲೆಗೆ 7642 ಮನೆಗಳನ್ನು ನೀಡಲಾಗಿದೆ ಎಂದರು.

ಧಾರವಾಡ ಜಿಲ್ಲೆಯಲ್ಲಿ 36 ಸಾವಿರ ಕುಟುಂಬ ಕೊಳಚೆ ಪ್ರದೇಶದಲ್ಲಿ ವಾಸವಾಗಿದ್ದಾರೆ. ಕುಂದಗೋಳ ತಾಲೂಕಿನಲ್ಲಿ . 76 ಕೋಟಿ ವೆಚ್ಚದ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಹಾಗೂ ಸೇತುವೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗಿದೆ ಎಂದರು.

Chamarajanagar: ಆನೆಮಡುವಿನ ಕೆರೆಗೆ ನೀರು ತುಂಬಿಸಲು ಸಚಿವ ಸೋಮಣ್ಣ ಭರವಸೆ

ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ಪಪಂ ಅಧ್ಯಕ್ಷ ಪ್ರಕಾಶ ವಿಠಲ ಕೊಕಾಟೆ, ಜಿಪಂ ಸದಸ್ಯರಾದ ಚೈತ್ರಾ ಶಿರೂರು, ಭುವನೇಶ್ವರಿ ಕವಲಗೇರಿ, ಉಪಾಧ್ಯಕ್ಷ ಹನುಮಂತಪ್ಪ ರಣತೂರ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಆಯುಕ್ತ ಬಿ. ವೆಂಕಟೇಶ, ಧಾರವಾಡ ವೃತ್ತದ ತಾಂತ್ರಿಕ ನಿರ್ದೇಶಕ ಎಚ್‌.ಪಿ. ಸುಧೀರ, ಕುಂದಗೋಳ ಪಪಂ ಮುಖ್ಯಾಧಿಕಾರಿ ಗಂಗಾಧರ ಎಂ. ಸಾನಕ್ಯಾನವರ, ತಹಸೀಲ್ದಾರ್‌ ಅಶೋಕ್‌ ಶಿಗ್ಗಾವ್‌ ಇತರರಿದ್ದರು.

ಬಾರದ ಶಾಸಕಿ ಕುಸುಮಾವತಿ...

ಕಾರ್ಯಕ್ರಮಕ್ಕೆ ಶಾಸಕಿ ಕುಸುಮಾವತಿ ಶಿವಳ್ಳಿ ಗೈರಾಗಿದ್ದರು. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಸೋಮಣ್ಣ, ಕುಸುಮಾವತಿ ಅವರು ಇನ್ನೂ ರಾಜಕೀಯದಲ್ಲಿ ಹೆಚ್ಚು ಬೆಳೆಯಬೇಕಾದವರು. ವೈಯಕ್ತಿಕವಾಗಿ ನಾನೇ ಕರೆ ಮಾಡಿ ಅವರಿಗೆ ಬನ್ನಿ, ಇದು ಅಭಿವೃದ್ಧಿ ಕಾರ್ಯಕ್ರಮ, ರಾಜಕೀಯ ಮಾಡಬಾರದು ಎಂದಿದ್ದೆ. ಆದರೆ, ಅವರು ಬಂದಿಲ್ಲ. ನನ್ನ ತಂಗಿಯಾಗಿ ಅವರು ಬರದಿರುವುದು ನೋವಾಗಿದೆ ಎಂದರು.
 

click me!