ಕಳೆದ ರಾತ್ರಿ ಕೂಡ ದರ್ಶನ್ ನಿದ್ರೆ ಇಲ್ಲದೇ ಎಚ್ಚರವಾಗಿಯೇ ಕಾಲ ಕಳೆದಿದ್ದಾನೆ ಎಂದು ತಿಳಿದು ಬಂದಿದೆ. ಜಾರ್ಜ್‌ಶೀಟ್ ಟೆನ್ಷನ್‌ನಲ್ಲಿ ಊಟ, ನಿದ್ರೆಯನ್ನೇ ಬಿಟ್ಟಿದ್ದಾನೆ ದರ್ಶನ್. ಮೊನ್ನೆ ಸಂಜೆಯಿಂದಲೇ ದರ್ಶನ್ ಜಾರ್ಜ್‌ಶೀಟ್ ಸಲ್ಲಿಕೆ ಟೆನ್ಷನ್‌ನಲ್ಲಿದ್ದಾನಂತೆ. ನಟ ದರ್ಶನ್ ಜಾರ್ಜ್‌ಶೀಟ್ ಸಲ್ಲಿಕೆ ಬಗ್ಗೆ ಏನು ಗೊತ್ತಾಗದೇ ಅತಂತ್ರದಲ್ಲಿದ್ದಾನೆ.
ಬಳ್ಳಾರಿ(ಸೆ.04): ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಸಂಬಂಧಿಸಿದಂತೆ ಒಂದೆರಡು ದಿನಗಳಲ್ಲಿ ಬೆಂಗಳೂರು ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಲಿದ್ದಾರೆ. ಈ ಬಗ್ಗೆ ಸ್ವತಃ ಪೊಲೀಸರೇ ಹೇಳಿದ್ದಾರೆ. ಹೀಗಾಗಿ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರುವ ಕೊಲೆ ಆರೋಪಿ ನಟ ದರ್ಶನ್‌ಗೆ ಈಗಿನಿಂದಲೇ ಟೆನ್ಷನ್ ಶುರುವಾಗಿದೆ.
ಹೌದು, ಕಳೆದ ರಾತ್ರಿ ಕೂಡ ದರ್ಶನ್ ನಿದ್ರೆ ಇಲ್ಲದೇ ಎಚ್ಚರವಾಗಿಯೇ ಕಾಲ ಕಳೆದಿದ್ದಾನೆ ಎಂದು ತಿಳಿದು ಬಂದಿದೆ. ಜಾರ್ಜ್‌ಶೀಟ್ ಟೆನ್ಷನ್‌ನಲ್ಲಿ ಊಟ, ನಿದ್ರೆಯನ್ನೇ ಬಿಟ್ಟಿದ್ದಾನೆ ದರ್ಶನ್.
ದರ್ಶನ್ ಗ್ಯಾಂಗ್ ಪ್ರಕರಣದ ಚಾರ್ಜ್ ಶೀಟ್‌ನಲ್ಲಿ ಸ್ಫೋಟಕ ಮಾಹಿತಿ!
ಮೊನ್ನೆ ಸಂಜೆಯಿಂದಲೇ ದರ್ಶನ್ ಜಾರ್ಜ್‌ಶೀಟ್ ಸಲ್ಲಿಕೆ ಟೆನ್ಷನ್‌ನಲ್ಲಿದ್ದಾನಂತೆ. ನಟ ದರ್ಶನ್ ಜಾರ್ಜ್‌ಶೀಟ್ ಸಲ್ಲಿಕೆ ಬಗ್ಗೆ ಏನು ಗೊತ್ತಾಗದೇ ಅತಂತ್ರದಲ್ಲಿದ್ದಾನೆ. ಜಾರ್ಜ್‌ಶೀಟ್‌ನಲ್ಲಿ ಎ 2 ನಿಂದ ಎ1 ಗೆ ದರ್ಶನ್ ಹೆಸರು ಬರೋ ಸಾಧ್ಯತೆ ಹಿನ್ನೆಲೆಯಲ್ಲಿ ದರ್ಶನ್ ಅಕ್ಷರಶಃ ಕಂಗಾಲಾಗಿ ಹೋಗಿದ್ದಾನೆ. ದರ್ಶನ್ ಬಳ್ಳಾರಿ ಸೆಂಟ್ರಲ್ ಜೈಲ್‌ನಲ್ಲಿ ಒಂದೊಂದು ಕ್ಷಣವೂ ನರಕ ಅನುಭವಿಸುತ್ತಿದ್ದಾನೆ.