24 ಗಂಟೆಯಲ್ಲಿ ಹಾಸಿಗೆಗಳ ವಿವರ ನೀಡದ ಆಸ್ಪತ್ರೆಗಳ ವಿರುದ್ಧ ಕೇಸ್‌

By Kannadaprabha NewsFirst Published Jul 22, 2020, 9:10 AM IST
Highlights

ನಗರದ ಎಲ್ಲ ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್‌ ಜಾರಿ ಮಾಡಿ 24 ಗಂಟೆಗಳಲ್ಲಿ ಹಾಸಿಗೆ ವಿವರ ನೀಡುವಂತೆ ಸೂಚನೆ ನೀಡಲಾಗಿದ್ದು, ವಿವರ ನೀಡದ ಆಸ್ಪತ್ರೆಗಳಿಗೆ ಬುಧವಾರದಿಂದ ವಿಪತ್ತು ನಿರ್ವಹಣೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ತಿಳಿಸಿದ್ದಾರೆ.

ಬೆಂಗಳೂರು(ಜು.22) : ನಗರದ ಎಲ್ಲ ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್‌ ಜಾರಿ ಮಾಡಿ 24 ಗಂಟೆಗಳಲ್ಲಿ ಹಾಸಿಗೆ ವಿವರ ನೀಡುವಂತೆ ಸೂಚನೆ ನೀಡಲಾಗಿದ್ದು, ವಿವರ ನೀಡದ ಆಸ್ಪತ್ರೆಗಳಿಗೆ ಬುಧವಾರದಿಂದ ವಿಪತ್ತು ನಿರ್ವಹಣೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮವಾರ ಸಂಜೆ ನಗರದ ಎಲ್ಲ 291 ಖಾಸಗಿ ಆಸ್ಪತ್ರೆಗಳಿಗೆ ಶೋಕಾಸ್‌ ನೋಟಿಸ್‌ ಜಾರಿ ಮಾಡಿ ಮಂಗಳವಾರ ಸಂಜೆಯೊಳಗಾಗಿ, ತಮ್ಮ ಆಸ್ಪತ್ರೆಯಲ್ಲಿ ಒಟ್ಟು ಎಷ್ಟುಹಾಸಿಗೆ, ವೆಟಿಲೇಟರ್‌ ಹಾಸಿಗೆ, ಐಸಿಯು ಸೌಲಭ್ಯ ಇದೆ.

ಕೊರೋನಾ ಗೆದ್ದ ಸಿಬ್ಬಂದಿಗೆ ಹೂ ನೀಡಿ, ಕೈಮುಗಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ

ಅದರಲ್ಲಿ ಸರ್ಕಾರಿ ಕೋಟಾದಡಿ ಎಷ್ಟುಹಾಸಿಗೆಗಳನ್ನು ಮೀಸಲಿಡಲಾಗಿದೆ. ಈಗಾಗಲೇ ಸರ್ಕಾರಿ ಕೋಟಾದಡಿ ಎಷ್ಟುರೋಗಿಗಳನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಎಷ್ಟುಹಾಸಿಗೆ ಖಾಲಿ ಇವೆ ಎಂಬ ವಿವರವನ್ನು ನೀಡಬೇಕು ಎಂದು ನಿರ್ದೇಶಿಸಲಾಗಿದೆ.

ದ್ವಿತೀಯ ಪಿಯು​ಗೆ ಯೂಟ್ಯೂಬ್‌ ಕ್ಲಾಸ್‌: ಹೀಗಿದೆ ವೇಳಾಪಟ್ಟಿ

ಮಂಗಳವಾರ ಸಂಜೆ ಒಳಗಾಗಿ ವಿವರಗಳನ್ನು ನೀಡದ ಆಸ್ಪತ್ರೆಗಳ ವಿರುದ್ಧ ಬುಧವಾರದಿಂದ ಖಾಸಗಿ ಆಸ್ಪತ್ರೆಗಳ ಪರಿಶೀಲನೆಗೆ ಸರ್ಕಾರ ನೇಮಿಸಿದ 14 ಐಎಎಸ್‌ ಹಾಗೂ ಎಪಿಎಸ್‌ ಅಧಿಕಾರಿಗಳು ವಿಪತ್ತು ನಿರ್ವಹಣೆ ಕಾಯ್ದೆಯಡಿ ನಿರ್ದಾಕ್ಷಿಣ್ಯವಾಗಿ ಪ್ರಕರಣ ದಾಖಲಿಸಲಿದ್ದಾರೆ ಎಂದು ತಿಳಿಸಿದರು.

click me!