ಉಪನಗರವಾಗಿ ನೆಲಮಂಗಲದ ಸಮಗ್ರ ಅಭಿವೃದ್ಧಿಗೆ ಕ್ರಮ: ಸಚಿವ ಸುಧಾಕರ್‌

By Govindaraj S  |  First Published Nov 30, 2022, 10:05 AM IST

ರಾಜಧಾನಿ ಬೆಂಗಳೂರಿಗೆ ಹೊಂದಿಕೊಂಡು ಅತಿವೇಗವಾಗಿ ಬೆಳೆಯುತ್ತಿರುವ ನೆಲಮಂಗಲ ಪಟ್ಟಣವನ್ನು ಸ್ಯಾಟಲೈಟ್‌ ಟೌನ್‌ ಆಗಿ ಪರಿವರ್ತಿಸಿ ಸವಾಂರ್‍ಗೀಣ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು.ಉಪನಗರ ರೈಲು ಹಾಗೂ ಮೆಟ್ರೋ ರೈಲುಗಳ ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು. 


ದೊಡ್ಡಬಳ್ಳಾಪುರ/ದಾಬಸ್‌ಪೇಟೆ (ನ.30): ರಾಜಧಾನಿ ಬೆಂಗಳೂರಿಗೆ ಹೊಂದಿಕೊಂಡು ಅತಿವೇಗವಾಗಿ ಬೆಳೆಯುತ್ತಿರುವ ನೆಲಮಂಗಲ ಪಟ್ಟಣವನ್ನು ಸ್ಯಾಟಲೈಟ್‌ ಟೌನ್‌ ಆಗಿ ಪರಿವರ್ತಿಸಿ ಸವಾಂರ್‍ಗೀಣ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು.ಉಪನಗರ ರೈಲು ಹಾಗೂ ಮೆಟ್ರೋ ರೈಲುಗಳ ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು. ನೆಲಮಂಗಲದ ತಾಲೂಕು ಪಂಚಾಯಿತಿ ಆವರಣದಲ್ಲಿ ಮಂಗಳವಾರ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಅವರು, ರಾಜಧಾನಿ ಬೆಂಗಳೂರು ಸುತ್ತ ಮುತ್ತಲಿನ 7-8 ನಗರಗಳನ್ನು ಸ್ಯಾಟಲೈಟ್‌ ನಗರಗಳನ್ನಾಗಿ ಅಭಿವೃದ್ಧಿ ಪಡಿಸುವ ಉದ್ದೇಶ ಸರ್ಕಾರಕ್ಕಿದೆ. 

ಇವುಗಳಲ್ಲಿ ನೆಲಮಂಗಲ ನಗರವೂ ಪ್ರಮುಖವಾಗಿದೆ. ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಗಳ ಮೂಲಸೌಕರ್ಯಗಳ ಹೆಚ್ಚಳಕ್ಕೆ ಸರ್ಕಾರ ಆದ್ಯತೆ ನೀಡಿದೆ. ರಾಜ್ಯದ ಪ್ರತಿಯೊಂದು ತಾಲೂಕುಗಳಲ್ಲಿ 20ರಿಂದ 30 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಸುಮಾರು 500 ಕೋಟಿ ರುಪಾಯಿಗಳನ್ನು ಸರ್ಕಾರ ಒದಗಿಸಿದೆ. ನಗರ ಪ್ರದೇಶಗಳ ಕೊಳಗೇರಿಗಳಲ್ಲಿ ವಾಸಿಸುವ ಬಡಜನರಿಗೆ ಆರೋಗ್ಯ ಸೇವೆಗಳನ್ನು ಒದಗಿಸಲು ನಮ್ಮ ಕ್ಲಿನಿಕ್‌ಗಳಿಗೆ ಬರುವ ಡಿ.14ರಂದು ಮಂಡ್ಯ ಜಿಲ್ಲೆಯಲ್ಲಿ ಮುಖ್ಯಮಂತ್ರಿಗಳು ಚಾಲನೆ ನೀಡುವರು. ಅದೇ ದಿನ ರಾಜ್ಯದ ನೂರು ತಾಲೂಕುಗಳಲ್ಲಿ ನೂರು ನಮ್ಮ ಕ್ಲಿನಿಕ್‌ಗಳು ಕಾರ್ಯಾರಂಭ ಮಾಡಲಿವೆ ಎಂದರು.

Tap to resize

Latest Videos

ಗೋ ರಕ್ಷಣೆಗಾಗಿ ಗೋಶಾಲೆ ಸ್ಥಾಪನೆ: ಸಚಿವ ಪ್ರಭು ಚವ್ಹಾಣ್‌

ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ, ಗುರಿ: ಜನತಾ ದರ್ಶನ ಕಾರ್ಯಕ್ರಮ ಜನಸ್ನೇಹಿ, ಜನೋಪಯೋಗಿ ಆಡಳಿತ ನೀಡಲು ಸಹಕಾರಿಯಾಗಿವೆ. ಕಂದಾಯ ಇಲಾಖೆಯ ಸೇವೆಗಳು, ಭೂ ದಾಖಲೆಗಳ ಮಾಪನ, ಸರ್ವೆ ಸ್ಕೆಚ್‌, ತಿದ್ದುಪಡಿ, ಪೌತಿಖಾತೆ, ಸಾಗುವಳಿ ಚೀಟಿ ಮೊದಲಾದ ಕಾರ್ಯಗಳಿಗೆ ವೇಗ ಒದಗಿಸಲು ಸಾಧ್ಯವಾಗಿದೆ. ಬರುವ ತಿಂಗಳಿನಿಂದ ನಿರಂತರವಾಗಿ ಜನತಾ ದರ್ಶನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರ ಅಹವಾಲುಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಲು ಶ್ರಮಿಸಲಾಗುವುದು. ಜಿಲ್ಲೆಯ ಎಲ್ಲಾ ಗ್ರಾಮಾಂತರ ಪ್ರದೇಶಗಳಿಗೆ ಸಮರ್ಪಕ ಸಾರಿಗೆ ವ್ಯವಸ್ಥೆ ಒದಗಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ: ಅಪಘಾತದಲ್ಲಿ ಮೃತರಾದ ವ್ಯಕ್ತಿಗಳ ಕುಟುಂಬಕ್ಕೆ ಪರಿಹಾರ ದೊಡ್ಡಬಳ್ಳಾಪುರ-ನೆಲಮಂಗಲ ರಸ್ತೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟದ್ವಿಚಕ್ರ ವಾಹನ ಸವಾರರಾದ ಮಾರುತಿ ಹಾಗೂ ಮಹೇಶ ಅವರ ಕುಟುಂಬದ ವಾರಸುದಾರರಿಗೆ ತಲಾ 25 ಲಕ್ಷ ರುಪಾಯಿ ಪರಿಹಾರ ನೀಡಲು ಬಿಬಿಎಂಪಿಗೆ ಸೂಚಿಸಲಾಗಿತ್ತು. ಮೊದಲ ಹಂತದಲ್ಲಿ ಇಂದು ತಲಾ 10 ಲಕ್ಷ ರುಪಾಯಿ ಪರಿಹಾರದ ಚೆಕ್‌ ನೀಡಲಾಗುತ್ತಿದೆ. ಉಳಿದ ಪರಿಹಾರ ಮೊತ್ತ ಶೀಘ್ರ ನೀಡಲು ನಿರ್ದೇಶನ ನೀಡಲಾಗಿದೆ ಎಂದರು.

ಶೇ.68ರಷ್ಟು ಇ-ಖಾತೆ ಪೂರ್ಣ: ಶಾಸಕಿ ಅನಿತಾ ಕುಮಾರಸ್ವಾಮಿ

ನಿವೇಶನಗಳ ಹಕ್ಕು ಪತ್ರ, ಮದಲಕೋಟೆ ಆಸ್ಪತ್ರೆಗೆ ವೈದ್ಯರು ಹಾಗೂ ಸಿಬ್ಬಂದಿ, ಗ್ರಾಮಗಳ ನಕಾಶೆ, ಸರ್ವೆ, ವಿಕಲಚೇತನರೊಬ್ಬರಿಗೆ ನಗರಸಭೆಯ ಮೂಲಕ ಪೆಟ್ಟಿಗೆ ಅಂಗಡಿ ಒದಗಿಸುವುದು, ಪತ್ರಿಕಾ ಭವನ ನಿರ್ಮಾಣ ಸೇರಿದಂತೆ ಅನೇಕ ಅಹವಾಲುಗಳನ್ನು ಸಚಿವರು ಸ್ವೀಕರಿಸಿ, ಸಂಬಂಧಿಸಿದ ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದರು. ಜಿಲ್ಲಾಧಿಕಾರಿ ಆರ್‌.ಲತಾ, ಜಿಪಂ ಸಿಇಒ ಕೆ.ರೇವಣಪ್ಪ, ಉಪ ವಿಭಾಗಾಧಿಕಾರಿ ತೇಜಸ್‌ಕುಮಾರ್‌, ತಹಸೀಲ್ದಾರ್‌ ಮಂಜುನಾಥ, ತಾಪಂ ಇಒ ಮೋಹನ್‌ ಇತರರಿದ್ದರು.

click me!