* ಚಿತ್ರದುರ್ಗ ನಗರದ ಹೊರವಲಯದಲ್ಲಿ ಮುರುಘಾ ಮಠದ ಬಳಿ ನಡೆದ ಘಟನೆ
* ರಿಪೇರಿಗೆ ನಿಂತಿದ್ದ ಮೂರು ಲಾರಿಗಳು ಬೆಂಕಿಗೆ ಆಹುತಿ
* ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭಬಿಸಿಲ್ಲ
ಚಿತ್ರದುರ್ಗ(ಏ.06): ಗ್ಯಾರೆಜ್‌ನಲ್ಲಿ(Garage) ಆಕಸ್ಮಿಕವಾಗಿ ಕಾಣಿಸಿಕೊಂಡ ಭಾರೀ ಪ್ರಮಾಣದ ಬೆಂಕಿ(Fire) ಕೆಲಕಾಲ ಸ್ಥಳೀಯರಲ್ಲಿ ಆತಂಕ ಮೂಡಿಸಿದ ಘಟನೆ ಚಿತ್ರದುರ್ಗ(Chitradurga) ನಗರದ ಹೊರವಲಯದಲ್ಲಿ ಮುರುಘಾ ಮಠದ ಬಳಿ ತಡರಾತ್ರಿ ನಡದಿದೆ.
ಆಕಸ್ಮಿಕ ಬೆಂಕಿಯಿಂದಾಗಿ ರಿಪೇರಿಗೆ ಅಂತ ನಿಂತಿದ್ದ ಮೂರು ಲಾರಿಗಳು(Truck) ಕ್ಷಣಮಾತ್ರದಲ್ಲೇ ದಗ ದಗನೇ ಉರಿದು ಸುಟ್ಟು ಕರಕಲಾಗಿವೆ. ಈ ದುರ್ಘಟನೆಯು ತಡರಾತ್ರಿ 2 ಗಂಟೆ ಸಮಯದಲ್ಲಿ ನಡೆದಿರೋ ಕಾರಣ ಕಿಡಿಗೇಡಿಗಳು ಲಾರಿಗಳ ಟೈರ್‌ಗಳಿಗೆ ಬೆಂಕಿ ಹಾಕಿರೋ ಪರಿಣಾಮ ಈ ರೀತಿಯ ಘಟನೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ತಡರಾತ್ರಿ ಘಟನೆ ನಡೆದಿರೋ ಕಾರಣ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭಬಿಸಿಲ್ಲ.
Electric Vehicle Fire ಎಲೆಕ್ಟ್ರಿಕ್ ವಾಹನಗಳ ಶೋ ರೂಂನಲ್ಲಿ ದಿಢೀರ್ ಕಾಣಿಸಿಕೊಂಡ ಬೆಂಕಿ, ಹೆಚ್ಚಾಯ್ತು ಆತಂಕ!
ಘಟನೆಯ ಮಾಹಿತಿ ತಿಳಿದು ಕ್ಷಣಾರ್ಧದಲ್ಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ(Fire Department) ಸಿಬ್ಬಂದಿಗಳು ಬೆಂಕಿ ನಂದಿಸಲು ಕೆಲ ಕಾಲ ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಸಿಬ್ಬಂದಿಗಳ ಸಮಯಪ್ರಜ್ಞೆಯಿಂದಾಗಿ ಬೇಗನೇ ಬೆಂಕಿ ನಂದಿಸುವ ಮೂಲಕ ಪಕ್ಕದಲ್ಲೇ ನಿಂತಿದ್ದ ನೂರಾರು ಲಾರಿಗಳು ಹಾಗೂ ಗೂಡಂಗಡಿಗಳು ಸೇಫ್ ಆಗಿವೆ. ಇನ್ನು ಈ ಘಟನೆಯು ಚಿತ್ರದುರ್ಗ ಗ್ರಾಮಾಂತರ ಪೊಲೀಸ್(Police) ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಪ್ರಕರಣ ದಾಖಲಾಗಿದೆ.