ಯಾದಗಿರಿ: ಲಂಚ ಸಮೇತ ಎಸಿಬಿ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿ

By Kannadaprabha News  |  First Published Sep 30, 2020, 2:30 PM IST

ಎಸಿಬಿ ಬಲೆಗೆ ಬಿದ್ದ ಅಧಿಕಾರಿ| ತೋಟಗಾರಿಕಾ ಇಲಾಖೆ ಉಪ ನಿರ್ದೇಶಕರ ಕಚೇರಿ ಮೇಲೆ ಎಸಿಬಿ ದಾಳಿ| 5000 ರು. ಹಣ ಪಡೆಯುತ್ತಿರುವಾಗ ಎಸಿಬಿ ಬಲೆಗೆ ಬಿದ್ದ ಮಲ್ಲಿಕಾರ್ಜುನ ಬಾಬು| ತನ್ನನ್ನು ಬಿಟ್ಟು ಬಿಡುವಂತೆ ಎಸಿಬಿ ಅಧಿಕಾರಿಗಳ ಕಾಲುಮುಟ್ಟಿ ನಮಸ್ಕರಿಸಿದ ಅಧಿಕಾರಿ| 


ಯಾದಗಿರಿ(ಸೆ.30): ತೋಟಗಾರಿಕಾ ಇಲಾಖೆ ಉಪ ನಿರ್ದೇಶಕರೊಬ್ಬ ಎಸಿಬಿ ಬಲೆಗೆ ಬಿದ್ದ ಘಟನೆ ನಗರದಲ್ಲಿ ಇಂದು(ಬುಧವಾರ) ನಡೆದಿದೆ. ಹನಿ ನೀರಾವರಿ ಯೋಜನೆಯಡಿ, ಸಬ್ಸಿಡಿ ಹಣ ಬಿಡುಗಡೆ ಮಾಡಲು ಹಣದ ಬೇಡಿಕೆ ಇಟ್ಟಿದ್ದ ಆರೋಪ ಹಿನ್ನೆಲೆಯಲ್ಲಿ ಉಪ ನಿರ್ದೇಶಕ ಮಲ್ಲಿಕಾರ್ಜುನ ಬಾಬು ಅವರ ಕಚೇರಿ ಮೇಲೆ ದಾಳಿ ನಡೆಸಲಾಗಿದೆ. 

ಕವಲೂರಿನ ಶಿವಾರೆಡ್ಡಿ ಎಂಬುವರು ಎಸಿಬಿಗೆ ದೂರು ನೀಡಿದ್ದರು. ನಗರದ ಜಿಲ್ಲಾಡಳಿತ ಭವನದಲ್ಲಿರುವ ತೋಟಗಾರಿಕಾ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ಒಂದು ಲಕ್ಷ ರೂಪಾಯಿ ಸಬ್ಸಿಡಿ ಹಣ ಬಿಡುಗಡೆಗೆ 5000 ರು. ಹಣ ಪಡೆಯುತ್ತಿರುವಾಗ ಮಲ್ಲಿಕಾರ್ಜುನ ಬಾಬು ಎಸಿಬಿ ಬಲೆಗೆ ಬಿದ್ದಿದ್ದಾರೆ. 

Tap to resize

Latest Videos

undefined

ಯಾದಗಿರಿ: ಎತ್ತು ರಕ್ಷಣೆ ಮಾಡಲು ಹೋದ ರೈತರಿಬ್ಬರ ದುರ್ಮರಣ..!

ಹೀಗಾಗಿ ಉಪ ನಿರ್ದೇಶಕ ಮಲ್ಲಿಕಾರ್ಜುನ ಬಾಬು ಅವರನ್ನ ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ವೇಳೆ ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಬಾಬು ತನ್ನನ್ನು ಬಿಟ್ಟು ಬಿಡುವಂತೆ, ಎಸಿಬಿ ಎಸ್ಪಿ ಮೇಘಣ್ಣವರ ಕಾಲುಮುಟ್ಟಿ ನಮಸ್ಕರಿಸಲು ಮುಂದಾಗಿದ್ದರು ಎಂದು ತಿಳಿದು ಬಂದಿದೆ. 
 

click me!