ಯಾದಗಿರಿ ಜಿಲ್ಲೆಯಲ್ಲಿ ಮನುಷ್ಯರಿಗೆ ನೀರಿನ ಹಾಹಾಕಾರ ಉಂಟಾಗಿದೆ, ಅಂತದ್ರಲ್ಲಿ ಯಾದಗಿರಿ ತಾಲೂಕಿನ ಯರಗೋಳ ಗ್ರಾಮದ ರೈತ ಅಬ್ದುಲ್ ಗಫರ್ ಮೂಕ ಪ್ರಾಣಿಗಳ ಕಾಳಜಿ ಕಾರ್ಯ ಮಾಡ್ತಿದ್ದಾರೆ.
ವರದಿ: ಪರಶುರಾಮ್ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್
ಯಾದಗಿರಿ (ಮೇ.07): ಕಲ್ಯಾಣ ಕರ್ನಾಟಕ ಅಂದ್ರೆ ಅದು ಬಿಸಿಲನಾಡು ಎಂಬ ಮಾತಿದೆ. ಅದರಲ್ಲಿ ಯಾದಗಿರಿ, ರಾಯಚೂರಿನಲ್ಲಿ ಬೇಸಿಗೆ (Summer) ಬಂದ್ರೆ ಸಾಕು ಹೊರಗಡೆ ಬರುವುದಕ್ಕೂ ಜನರ ಅಂಜುವಂತಾಗಿದೆ. ಸದ್ಯ ಬೇಸಿಗೆಯಿಂದ ಈಡೀ ರಾಜ್ಯದ (Karnataka) ಜನ ತಲ್ಲಣಿಸುವಂತಾಗಿದೆ. ಯಾದಗಿರಿ (Yadgir) ಜಿಲ್ಲೆಯಲ್ಲಿ ಮನುಷ್ಯರಿಗೆ ನೀರಿನ (Drinking Water) ಹಾಹಾಕಾರ ಉಂಟಾಗಿದೆ, ಅಂತದ್ರಲ್ಲಿ ಯಾದಗಿರಿ ತಾಲೂಕಿನ ಯರಗೋಳ ಗ್ರಾಮದ ರೈತ ಅಬ್ದುಲ್ ಗಫರ್ (Abdul Gafar) ಮೂಕ ಪ್ರಾಣಿಗಳ ಕಾಳಜಿ ಕಾರ್ಯ ಮಾಡ್ತಿದ್ದಾರೆ.
undefined
ಗೋವುಗಳಿಗಾಗಿ ನೀರು ಖರೀದಿಸುತ್ತಿರುವ ಗಫರ್: ಮೂಕ ಪ್ರಾಣಿಗಳು ಬೇಸಿಗೆಯಲ್ಲಿ ನೀರಿನ ದಾಹ ತಣಿಸಿಕೊಳ್ಳಲು ನಿತ್ಯವೂ ಪರದಾಡುವಂತಾಗಿದೆ. ಗೋವುಗಳ (Cow) ನೀರಿನ ಪರದಾಡವುದನ್ನು ಅರಿತ ಮುಸ್ಲಿಂ ರೈತ (Muslim Farmer) ಅಬ್ದುಲ್ ಗಫರ್ ಎಂಬ ಗೋ ಪ್ರೇಮಿ, ಬೇಸಿಗೆ ಕಾಲದಲ್ಲಿ ಗೋವುಗಳು ನೀರಿನ ದಾಹ ತಣಿಸಿಕೊಳ್ಳಲು ಅಲೆದಾಡುವದನ್ನು ಕಂಡು ಅಬ್ದುಲ್ ಗಫರ್ ಅವರು ಗೋವುಗಳ ನೀರಿನ ದಾಹ ತಣಿಸುತ್ತಿದ್ದಾರೆ.
ಆಧುನಿಕ ಭಗೀರಥ ಅಬ್ದುಲ್ ಗಫರ್: ಗೋವುಗಳ ನೀರಿನ ದಾಹ ತಣಿಸುತ್ತಿರುವ ಅಬ್ದುಲ್ ಗಫರ್‌ನನ್ನು ಯಾದಗಿರಿ ಭಾಗದ ಜನ ಆಧುನಿಕ ಭಗೀರಥ ಎಂದೇ ಕರೆಯುತ್ತಾರೆ. ಯಾದಗಿರಿ ತಾಲೂಕಿನ ಯರಗೋಳ ಗ್ರಾಮದ ರೈತ ಅಬ್ದುಲ್ ಗಫರ್ ಅವರು ಗ್ರಾಮದ ಬೆಟ್ಟದ ಭಾಗದಲ್ಲಿರುವ ತನ್ನ ಮೂರು ಎಕರೆ ಭೂಮಿಯಲ್ಲಿ ಕೃಷಿ ಮಾಡುತ್ತಾರೆ.
ಯಾದಗಿರಿಯಲ್ಲಿ ಅದ್ದೂರಿ ಬಸವೇಶ್ವರ ಜಯಂತಿ ಆಚರಣೆ, ಕಾರು, ಬೈಕ್ ರ್‍ಯಾಲಿ, ರಾಜೂಗೌಡ ಸಖತ್ ಡ್ಯಾನ್ಸ್
ತನ್ನ ಜಮೀನಿನಲ್ಲೆ ಗೋವುಗಳಿಗಾಗಿ ಬೋರ್‌ವೆಲ್ ಕೊರೆಸಿದ ಗಫರ್: ಬೇಸಿಗೆಯಲ್ಲಿ ಜಾನುವಾರುಗಳು ನೀರಿಗಾಗಿ ಪರದಾಡುವದನ್ನು ತಪ್ಪಿಸಲು ಮೂಕ ಪ್ರಾಣಿಗಳಿಗೆ ಅನುಕೂಲವಾಗಲು ಜಮೀನಿನಲ್ಲಿ ಬೋರ್‌ವೆಲ್ ಹಾಕಿಸಿ, ನೀರು ಸಂಗ್ರಹ ಮಾಡಲು ಹೌಸ್ ನಿರ್ಮಾಣ ಮಾಡಿದ್ದಾರೆ. ಹೌಸ್ ತುಂಬಿಸಿ ಜಾನುವಾರುಗಳಿಗೆ ನೀರು ಕುಡಿಸುವ ಮಾನವೀಯ ಕಾರ್ಯ ಮಾಡುತ್ತಿದ್ದಾರೆ. ಬೇಸಿಗೆ ಕಾಲದಲ್ಲಿ ನಾಲ್ಕು ತಿಂಗಳ ಕಾಲ ಜಾನುವಾರುಗಳಿಗೆ ನೀರಿನ ಸೌಲಭ್ಯ ಕಲ್ಪಿಸಿದ್ದಾರೆ. ಯರಗೋಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಭಾಗದಿಂದ ಸಾವಿರಾರು ಸಂಖ್ಯೆಯಲ್ಲಿ ಜಾನುವಾರುಗಳು ಆಗಮಿಸಿ ನೀರು ಸೇವನೆ ಮಾಡುತ್ತವೆ. ಕುರಿ ಮೆಕೆಗಳು ಸಹಿತ ನೀರಿನ ದಾಹ ತಣಿಸಿಕೊಳ್ಳುತ್ತವೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಜಾನುವಾರುಗಳು ಮೇವು ತಿಂದು ನಂತರ ನೀರು ಕುಡಿಯಲು ಆಗಮಿಸಿ ನೀರು ಸೇವನೆ ಮಾಡಿ ತೆರಳುತ್ತವೆ.
ಕಳೆದ ಎಂಟು ವರ್ಷಗಳಿಂದ ಗೋವುಗಳಿಗೆ ಕುಡಿಯಲು ನೀರು ವ್ಯವಸ್ಥೆ: ಕಳೆದ ಎಂಟು ವರ್ಷದಿಂದಲೂ ಸಹ ಅಬ್ದುಲ್ ಗಫರ್ ಅವರು ಗೋವುಗಳಿಗೆ ನೀರು ಕುಡಿಯಲು ಅನುಕೂಲ ಕಲ್ಪಿಸಿದ್ದಾರೆ. ಅಬ್ದುಲ್ ಗಫರ್‌ನ ಮೂಕ ಪ್ರಾಣಿಗಳ ಕಾಳಜಿಯ ಕಾರ್ಯ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗಿದೆ.
ಮನುಷ್ಯರು ನೀರು ಖರಿದಿಸಿ ಕುಡಿಯುತ್ತಾರೆ. ಆದ್ರೆ ಮೂಕಪ್ರಾಣಿಗಳು ಎಲ್ಲಿಂದ ಕುಡಿಯಬೇಕು..?: ತನ್ನ ಕಾರ್ಯದ ಬಗ್ಗೆ ಮಾತನಾಡಿದ ಅಬ್ದುಲ್ ಗಫರ್, ಮನುಷ್ಯನಿಗೆ ನೀರು ಬೇಕಾದರೆ ನೀರು ಖರೀದಿ ಮಾಡಿ ಕುಡಿಯುತ್ತಾನೆ. ಆದರೆ, ಮೂಕ ಪ್ರಾಣಿಗಳು ಎಲ್ಲಿಂದ ಕುಡಿಯಬೇಕು. ಬೇಸಿಗೆ ಕಾಲದಲ್ಲಿ ಎಷ್ಟೇ ದೂರ ಇದ್ದರು ನೀರು ಇರುವ ಕಡೆ ಹೋಗಿ ನೀರು ಸೇವನೆ ಮಾಡುತ್ತವೆ. ಹೀಗಾಗಿ, ಜಾನುವಾರುಗಳು ನೀರಿನ ಸಮಸ್ಯೆ ಎದುರಿಸುವದನ್ನು ಅರಿತು ನಾನು ಜಮೀನಿನಲ್ಲಿ ಕೊಳವೆ ಬಾವಿ ಹಾಕಿಸಿ, ಹೌಸ್ ನಿರ್ಮಾಣ ಮಾಡಿ ನೀರು ಸಂಗ್ರಹ ಮಾಡಿ ಬೇಸಿಗೆಯ ನಾಲ್ಕು ತಿಂಗಳ ಕಾಲ ಮೂಕ ಪ್ರಾಣಿಗಳಿಗೆ ನೀರು ಕುಡಿಯಲು ಅನುಕೂಲ ಮಾಡಿದ್ದೆನೆ. ಜಾನುವಾರು ಹಾಗೂ ಕುರಿ ಮೇಕೆಗಳಿಗೆ ನೀರು ಕುಡಿಸಲು ಸಣ್ಣ ಸೇವೆ ಮಾಡುತ್ತಿದ್ದೆನೆ. ಸರ್ಕಾರದಿಂದ ಯಾವುದೇ ಸಹಾಯ ಪಡೆಯದೇ ನೀರಿನ ಅನುಕೂಲ ಮಾಡುತ್ತಿದ್ದೇನೆ ಎಂದರು.
ಗುಲಾಬಿ ಹೂವು ನೀಡಿ ರಂಜಾನ್ ಶುಭ ಕೋರಿದ ಹಿಂದುಗಳು, ಯಾದಗಿರಿಯಲ್ಲಿ ಭಾವೈಕ್ಯತೆ ಸಂದೇಶ
ಧರ್ಮ ದಂಗಲ್ ಮಧ್ಯೆ ಯಾದಗಿರಿಯಲ್ಲೊಬ್ಬ ಮುಸಲ್ಮಾನ ಗೋ ಪ್ರೇಮಿ: ರಾಜ್ಯದಲ್ಲಿ ಈಗ ಧರ್ಮ ದಂಗಲ್ ನಡೆಯುತ್ತಿದೆ. ಆದರೆ, ಯಾದಗಿರಿ ಜಿಲ್ಲೆಯ ಯರಗೋಳ ಗ್ರಾಮದ ಅಬ್ದುಲ್ ಗಫರ್ ಯಾವುದೇ ಧರ್ಮ ಸಂಘರ್ಷದ ಬಗ್ಗೆ ವಿಚಾರ ಮಾಡದೇ ಮೂಕ ಪ್ರಾಣಿಗಳ ನೀರಿನ ದಾಹ ತಣಿಸುವ ಕಾರ್ಯ ಮಾಡುತ್ತಿದ್ದಾನೆ. ಸೇವೆ ಮಾಡದೇ ಪೋಸ್ ಕೊಡುವವರ ಮದ್ಯೆ ನಡುವೆ ಸೇವೆ ಮಾಡುವ ಮನಸ್ಸು ಇದ್ರೆ ಯಾವುದೇ ಧರ್ಮ ಅಡ್ಡ ಬರುವುದಿಲ್ಲ ಎಂಬುದಕ್ಕೆ ಯರಗೋಳದ ಅಬ್ದುಲ್ ಗಫರ್ ಉದಾಹರಣೆಯಾಗಿದ್ದಾರೆ.