* ಬೆಂಗಳೂರಿನಲ್ಲಿ ದಕ್ಷಿಣ ಭಾರತದ ಅತಿ ದೊಡ್ಡ ಎರಡನೇ ಅಯ್ಯಪ್ಪ ಸ್ವಾಮಿ ದೇವಸ್ಥಾನ
* ಅಯ್ಯಪ್ಪ ಸ್ವಾಮಿ ಭಕ್ತರ 15 ವರ್ಷಗಳ ಕನಸು ನನಸಾಯ್ತು
* 10.50 ಕೆಜಿ ಚಿನ್ನ ಬಳಸಿ ಚಿನ್ನಲೇಪಿತ ಗರ್ಭಗುಡಿ ಲೋಕಾರ್ಪಣೆ
ವರದಿ- ನಂದೀಶ್ ಮಲ್ಲೇನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್ ಬೆಂಗಳೂರು
ಬೆಂಗಳೂರು, (ಮೇ.07): ದಕ್ಷಿಣ ಭಾರತದ ಅತಿದೊಡ್ಡ ಎರಡನೇ ಅಯ್ಯಪ್ಪ ಸ್ವಾಮಿ ದೇವಾಲಯ ಎಂದೇ ಪ್ರಸಿದ್ಧಿ ಪಡೆದಿರುವ ಜಾಲಹಳ್ಳಿ ಅಯ್ಯಪ್ಪ ಸ್ವಾಮಿ ದೇವಾಲಯ..ಈ ದೇವಾಲಯ ಮತ್ತೊಂದು ವಿಶೇಷತೆಗೆ ಸಾಕ್ಷಿಯಾಗಿದೆ.
ಹೌದು,ಕೇರಳದ ಶಬರಿ ಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಿ ನಂತರದ ಸ್ಥಾನ ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ಅಯ್ಯಪ್ಪ ಸ್ವಾಮಿ ಸನ್ನಿಧಿ ಪಡೆದುಕೊಂಡಿದೆ..ಕಳೆದ 15 ವರ್ಷಗಳಿಂದ ಜಾಲಹಳ್ಳಿಯಲ್ಲಿರುವ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಚಿನ್ನಲೇಪಿತ ಗರ್ಭಗುಡಿ ಮಾಡಿಸಲು ದೇವಾಸ್ಥನದ ಆಡಳಿತ ಮಂಡಳಿಯವರು ಕನಸು ಕಂಡಿದ್ರು.ಅ ಕನಸು ಇದೀಗ ನನಸಾಗಿದೆ..ದೇವಾಲಯದ ಗರ್ಭಗುಡಿ ಚಿನ್ನಲೇಪಿತ ಗರ್ಭಗುಡಿಯನ್ನ ಇಂದು ಶಬರಿ ಮಲೆಯ ಮುಖ್ಯ ತಂತ್ರಿಗಳಾದ ಬ್ರಹ್ಮಶ್ರೀ ತಾಳಮನ್ ಮಡಮ್ ನೇತೃತ್ವದಲ್ಲಿ ಇಂದು(ಶನಿವಾರ) ಗರ್ಭಗುಡಿಯನ್ನ ಲೋಕಾರ್ಪಣೆ ಮಾಡಿದ್ರು..
undefined
ಮಹಿಳೆಯರ ಪ್ರವೇಶದಿಂದ ಅಯ್ಯಪ್ಪನ ಬ್ರಹ್ಮಚರ್ಯ ಕೆಟ್ಟಿತಾ?
10.50 ಕೆಜಿ ಚಿನ್ನ ಬಳಸಿ ಗರ್ಭಗುಡಿ ನಿರ್ಮಾಣ
ಸುಮಾರು 15 ವರ್ಷಗಳ ಚಿನ್ನದ ಲೇಪನದ ಕನಸು ಇಂದು ಈಡೇರಿದೆ. 11 ಕೆ.ಜಿ ಚಿನ್ನವನ್ನು ಬಳಸಿಕೊಂಡು ದೇವಾಲಯದ ಗರ್ಭಗುಡಿಗೆ ಚಿನ್ನದ ಲೇಪನದ ತಗಡನ್ನು ಯಶಸ್ವಿಯಾಗಿ ಆಳವಡಿಕೆ ಮಾಡಲಾಗಿದ್ದು, ಬೆಳಗ್ಗೆ ಭಕ್ತರ ದರ್ಶನಕ್ಕೆ ಲೋಕಾರ್ಪಣೆ ಮಾಡಲಾಯಿತು ಎಂದು ಆಡಳಿತ ಮಂಡಳಿ ತಿಳಿಸಿದೆ.
ಅಯ್ಯಪ್ಪ ಸ್ವಾಮಿ ದೇವಾಲಯದ ಗರ್ಭಗುಡಿ , ಕಳಶ ಹಾಗೂ ಗೋಪುರ ನಿರ್ಮಾಣಕ್ಕೆ 10 .50 ಕೆಜಿ ಚಿನ್ನ ಬಳಸಲಾಗಿದೆ.ಕೇರಳದ ಶಬರಿ ಮಲೆಯ ಮುಖ್ಯ ತಂತ್ರಿಗಳಾದ ಬ್ರಹ್ಮಶ್ರೀ ತಾಳಮನ್ ಮಡಮ್ ರಾಜೀವ್ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳನ್ನ ನೇರವೇರಿಸಲಾಯ್ತು.ಗೋಪುರದ ಮೇಲೆ ಚಿನ್ನ ಲೇಪಿತ ಕಳಶ ಸ್ಥಾಪನೆ ಮಾಡುವ ಮೂಲಕ ಚಿನ್ನಲೇಪಿತ ಗರ್ಭಗುಡಿಯನ್ನ ಲೋಕಾರ್ಪಣೆ ಮಾಡಿದ್ರು..
ಸುಮಾರು 6 ಕೋಟಿ ಹಣ ಚಿನ್ನಕ್ಕೆ ಬಳಸಲಾಗಿದ್ದು, ತುಂಬಾ ಸುಂದರವಾಗಿ ದೇವಾಲಯ ಗರ್ಭಗುಡಿ ಮೂಡಿ ಬಂದಿದೆ. ಲಕ್ಷಾರ್ಚನೆ, ದೀಪಾರಾಧನೆ, ಪ್ರಸಾಧ ಶುದ್ಧಿ ಹಾಗೂ ಸಹಸ್ರ ಕಳಸ ಪೂಜೆ ಕಾರ್ಯಗಳು ವಿಜೃಂಭಣೆಯಿಂದ ನೇರವೇರಿತ್ತು. ಇನ್ನೂ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಮುನಿರಾಜು, ಅಯ್ಯಪ್ಪ ಸ್ವಾಮಿ ದೇವಾಲಯದ ಅಧ್ಯಕ್ಷರಾದ ಶಿವರಾಜು, ಟ್ರಸ್ಟಿಗಳು ಸೇರಿದಂತೆ ಸಾವಿರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ರು.