ಶಿವಯೋಗ ಸುಲಭವಾಗಿದ್ದು, ಎಲ್ಲ ಯೋಗಗಳ ಸಮನ್ವಯವಾಗಿದೆ. ಇದು ಮನೋನಿಯಂತ್ರಣ ಮಾಡುವ ಶ್ರೇಷ್ಠ ವಿಧಾನ. ಇದು ವೈಚಾರಿಕತೆ, ವೈಜ್ಞಾನಿಕ ಆಗಿದ್ದು ಮನಸ್ಸನ್ನು ಸಹಜ ಸ್ಥಿತಿಗೆ ಕೊಂಡೊಂಯ್ದು ಸಹಜ ಇರುವಿಕೆಯನ್ನು ಕಲಿಸುತ್ತದೆ ಎಂದು ಮುಂಡರಗಿ ತೋಂಟದಾರ್ಯ ಮಠದ ನಿಜಗುಣಾನಂದ ಸ್ವಾಮೀಜಿ ಹೇಳಿದರು.
ಧಾರವಾಡ (ಡಿ..2) : ಶಿವಯೋಗ ಸುಲಭವಾಗಿದ್ದು, ಎಲ್ಲ ಯೋಗಗಳ ಸಮನ್ವಯವಾಗಿದೆ. ಇದು ಮನೋನಿಯಂತ್ರಣ ಮಾಡುವ ಶ್ರೇಷ್ಠ ವಿಧಾನ. ಇದು ವೈಚಾರಿಕತೆ, ವೈಜ್ಞಾನಿಕ ಆಗಿದ್ದು ಮನಸ್ಸನ್ನು ಸಹಜ ಸ್ಥಿತಿಗೆ ಕೊಂಡೊಂಯ್ದು ಸಹಜ ಇರುವಿಕೆಯನ್ನು ಕಲಿಸುತ್ತದೆ ಎಂದು ಮುಂಡರಗಿ ತೋಂಟದಾರ್ಯ ಮಠದ ನಿಜಗುಣಾನಂದ ಸ್ವಾಮೀಜಿ ಹೇಳಿದರು.
ಇಲ್ಲಿಯ ಟೌನ್‌ಹಾಲ್ ಆವರಣದಲ್ಲಿ ನಡೆಯುತ್ತಿರುವ ವಿಶ್ವಧರ್ಮ ಪ್ರವಚನದಲ್ಲಿ ಶುಕ್ರವಾರ, ನಿತ್ಯ ಶಿವಯೋಗ ಮಾಡುತ್ತಾ ಅಂಗ, ಮನ, ಭಾವಗಳು ಅಂಗದಲ್ಲಿ ಲೀನವಾಗಿ ಮಾನವನು ಮಹಾಮಾನವನಾಗುತ್ತಾನೆ. ವೃಷ್ಠಿಸಾಧನೆಯ ವಿಚಾರದಲ್ಲಿ ಶರಣರದ್ದು ಅಚಲವಾದ ನಿಲುವು. ಇಷ್ಟಲಿಂಗವೊಂದೆ ಉಪಾಸನೆಯ ಮಾಧ್ಯಮವಾಗಿತ್ತು. ನಮ್ಮ ಭಕ್ತಿಯನ್ನು ಪರಮಾತ್ಮನಿಗೆ ಸಮರ್ಪಿಸಲು ಅನುಕೂಲವಾಗುವಂತೆ ಸಾಕಾರ ರೂಪದಲ್ಲಿ ನಿರಾಕಾರ ಕುರುಹಾಗಿ ಇಷ್ಟಲಿಂಗ ಪರಿಕಲ್ಪಿಸಿದ್ದಾರೆ ಎಂದರು.
ನಿಜಗುಣಾನಂದ ಶ್ರೀಗೆ ಜೀವ ಬೆದರಿಕೆ ಪತ್ರ; 'ಇದು ಲವ್ ಲೆಟರ್' - ಸ್ವಾಮೀಜಿ