ಕೃಷಿ ಮತ್ತು ಅರಣ್ಯ ಪ್ರದೇಶದ ಮೇಲ್ಭಾಗದಲ್ಲಿ ಹೆಲಿಕ್ಯಾಪ್ಟರ್ ಹಾರಾಟ ನಡೆಸಿದ್ದು, ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಸಮೀಕ್ಷೆಗಾಗಿ ಈ ಹಾರಾಟ ನಡೆದಿದೆಯೇನೋ ಎಂಬ ಊಹೆ ಮಾಡಲಾಗಿದೆ.
ಯಲ್ಲಾಪುರ(ಡಿ.02): ತಾಲೂಕಿನ ವಜ್ರಳ್ಳಿಯ ಸುತ್ತಮುತ್ತಿನ ಪ್ರದೇಶದಲ್ಲಿ ಶುಕ್ರವಾರ ಬೆಳಗ್ಗೆ ಕಂದು ಬಣ್ಣದ ಹೆಲಿಕಾಪ್ಟರ್ ಹಾರಾಟ ನಡೆಸಿದ್ದು, ಈ ಕುರಿತು ಸ್ಥಳೀಯರಲ್ಲಿ ತೀವ್ರ ಆಸಕ್ತಿ ಮತ್ತು ಕುತೂಹಲ ಗರಿಗೆದರಿದೆ. ಕೃಷಿ ಮತ್ತು ಅರಣ್ಯ ಪ್ರದೇಶದ ಮೇಲ್ಭಾಗದಲ್ಲಿ ಹೆಲಿಕ್ಯಾಪ್ಟರ್ ಹಾರಾಟ ನಡೆಸಿದ್ದು, ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಸಮೀಕ್ಷೆಗಾಗಿ ಈ ಹಾರಾಟ ನಡೆದಿದೆಯೇನೋ ಎಂಬ ಊಹೆ ಮಾಡಲಾಗಿದೆ.
ವಜ್ರಳ್ಳಿ, ಹೊನ್ನಗದ್ದೆ, ಕೊಡ್ಲಗದ್ದೆ ಗ್ರಾಮದ ಮೇಲ್ಗಡೆ ಈ ಹಾರಾಟ ನಡೆದಿದ್ದು, ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಐದಾರು ಕಿಮೀ ವ್ಯಾಪ್ತಿಯಲ್ಲಿ ವೃತ್ತಾಕಾರವಾಗಿ ಹಾಗೂ ಪೂರ್ವದಿಂದ ಪಶ್ಚಿಮಾಭಿಮುಖವಾಗಿ ತನ್ನ ಹಾರಾಟ ನಡೆಸಿದ ಈ ಹೆಲಿಕಾಪ್ಟರ್ ಗುರುವಾರವೂ ಎರಡು ಬಾರಿ ಹಾರಾಟ ನಡೆಸಿತ್ತು.
undefined
ಉತ್ತರಕನ್ನಡ: ಹೊನ್ನಾವರದ ಇಡಗುಂಜಿ ದೇವಸ್ಥಾನದಲ್ಲಿ ಪಂಕ್ತಿಬೇಧ...?
ಸಮೀಪದಲ್ಲಿ ಕೈಗಾ ಅಣು ಸ್ಥಾವರ, ಕಾಳಿ ನದಿಯ ಕೊಡಸಳ್ಳಿ, ಕದ್ರಾ ಜಲಾಶಯ, ದೂರದಲ್ಲಿ ಸೀಬರ್ಡ್ ನೌಕಾನೆಲೆ ಇರುವುದರಿಂದ ಇಂತಹ ಸಮೀಕ್ಷೆ ಕಾರ್ಯದ ಕುರಿತು ಸಾರ್ವಜನಿಕವಾಗಿ ಸ್ಥಳೀಯ ಆಡಳಿತಕ್ಕೆ ಮಾಹಿತಿ ಇಲ್ಲದಿರುವುದು ಅಚ್ಚರಿಗೂ ಕಾರಣವಾಗಿದೆ.