* ಬಾಲಕನಲ್ಲಿ ಪತ್ತೆಯಾದ ಕೊರೋನಾ ನಂತರದಲ್ಲಿ ಕಾಣಿಸಿಕೊಳ್ಳುವ ಎ-ನೆಕ್ ರೋಗ
* ಎ-ನೆಕ್ ರೋಗದ ಲಕ್ಷಣ ಇದ್ದವರಲ್ಲಿ ಶೇ.60ರಷ್ಟು ಸಾವಿನ ಸಾಧ್ಯತೆ
* ಕನಿಷ್ಠ 75 ಸಾವಿರ ರು.ದಿಂದ 1 ಲಕ್ಷ ರು.ವರೆಗೆ ವೆಚ್ಚ
ದಾವಣಗೆರೆ(ಜೂ.27): ಕೊರೋನಾ ಸೋಂಕಿನಿಂದ ಗುಣಮುಖರಾದ ಮಕ್ಕಳಲ್ಲಿ ಮಿಸ್-ಸಿ ಸೋಂಕು ಕಂಡು ಬಂದ ಬೆನ್ನಲ್ಲೇ ದೇಶದಲ್ಲೇ ಅಪರೂಪದ್ದಾದ ಕೊರೋನಾ ನಂತರದಲ್ಲಿ ಕಾಣಿಸಿಕೊಳ್ಳುವ ಎ-ನೆಕ್(Acute nectrotinzing encephalopathy of childhood Multisystem inflammatory syndrome in children) 10 ವರ್ಷದ ನಲ್ಲಿ ಕಾಣಿಸಿಕೊಂಡಿದೆ.
ನಗರದ ಎಸ್ಸೆಸ್ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕು ಮೂಲದ ಬಾಲಕನಲ್ಲಿ ಎ-ನೆಕ್ ಇರುವುದನ್ನು ಆಸ್ಪತ್ರೆಯ ವೈದ್ಯರ ತಂಡವು ಪತ್ತೆ ಮಾಡಿದೆ. ಎ-ನೆಕ್ ಕಾಯಿಲೆ ಕೊರೋನಾದಿಂದ ಗುಣಮುಖರಾದ ವಯಸ್ಕರಲ್ಲಿ ಕಾಣಿಸಿಕೊಂಡಿದ್ದು, ಇದೇ ಮೊದಲ ಬಾರಿಗೆ ಅಪ್ರಾಪ್ತನಲ್ಲಿ ದೃಢಪಟ್ಟಿದೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ, ಮಕ್ಕಳ ತಜ್ಞ ಡಾ. ಎನ್.ಕೆ.ಕಾಳಪ್ಪನವರ್ ತಿಳಿಸಿದ್ದಾರೆ.
undefined
ಕೊರೋನಾ 3ನೇ ಅಲೆ: ಮಕ್ಕಳಿಗೇ 95,000 ಬೆಡ್ ಬೇಕು..!
ಮಕ್ಕಳಲ್ಲಿ ಮಿಸ್ಸಿ ಕಾಣಿಸಿಕೊಳ್ಳುತ್ತಿತ್ತು. 6 ಮಕ್ಕಳಿಗೆ ಎಸ್ಸೆಸ್ ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇವರ ಪೈಕಿ ಒಬ್ಬನಾದ ಬಾಲಕನಲ್ಲಿ ಎ-ನೆಕ್ ರೋಗದ ಲಕ್ಷಣಗಳಿವೆ. ಮಿಸ್ಸಿ, ಕೊರೋನಾ ಸೋಂಕಿನಿಂದ ಗುಣಮುಖರಾದ ಮಕ್ಕಳಲ್ಲಿ ಬರುವ ಕಾಯಿಲೆ. ಬಾಲಕನಿಗೆ ಸೂಕ್ತ ಔಷಧ, ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯರಿಂದ ಮಾಹಿತಿ ಪಡೆದಿದ್ದಾರೆ.
ಅಪಾಯವೇನು?:
ಎ-ನೆಕ್ ರೋಗದ ಲಕ್ಷಣ ಇದ್ದವರಲ್ಲಿ ಶೇ.60ರಷ್ಟು ಸಾವಿನ ಸಾಧ್ಯತೆ ಇದೆ. ಬಹು ಅಂಗಾಂಗ ವೈಫಲ್ಯತೆವಾಗುತ್ತದೆ. ಈ ರೋಗಕ್ಕೆ ಹಿಮನೋಗ್ಲೋಬಿನ್ ಔಷಧಿ ನೀಡಿದರೆ ಗುಣ ಹೊಂದುವ ಸಾಧ್ಯತೆ ಹೆಚ್ಚಾಗಿದೆ. ಚಿಕಿತ್ಸೆಗೆ ಕನಿಷ್ಠ 75 ಸಾವಿರ ರು.ದಿಂದ 1 ಲಕ್ಷ ರು.ವರೆಗೆ ವೆಚ್ಚವಾಗಲಿದೆ.