ಫೇಸ್‌ಬುಕ್‌ನಲ್ಲೇ ಲವ್‌: ಬಾಲಕನನ್ನ ವರಿಸಿದ 20 ವರ್ಷದ ಯುವತಿ..!

Kannadaprabha News   | Asianet News
Published : Jun 27, 2021, 07:32 AM ISTUpdated : Jun 27, 2021, 07:49 AM IST
ಫೇಸ್‌ಬುಕ್‌ನಲ್ಲೇ ಲವ್‌: ಬಾಲಕನನ್ನ ವರಿಸಿದ 20 ವರ್ಷದ ಯುವತಿ..!

ಸಾರಾಂಶ

* ಫೇಸ್‌ಬುಕ್‌ ಮೂಲಕ ಪರಿಚಯವಾಗಿ ಲವ್‌ * ಎರಡು ಕುಟುಂಬಸ್ಥರು ಸೇರಿ ಜೂ.23ರಂದು ಮಾಡಿದ ಮದುವೆ *  ಯುವತಿ ವಿರುದ್ಧ ಸಖರಾಯಪಟ್ಟಣ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು

ಚಿಕ್ಕಮಗಳೂರು(ಜೂ.27): 20 ವರ್ಷ ವಯಸ್ಸಿನ ಯುವತಿ, 17 ವರ್ಷದ ಬಾಲಕನೊಂದಿಗೆ ಮದುವೆಯಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. 

ಯುವತಿ ಮೂಲತಃ ಬೆಂಗಳೂರು ನಿವಾಸಿಯಾಗಿದ್ದು, ಬಾಲಕ ಕಡೂರು ತಾಲೂಕಿನ ಬ್ರಹ್ಮಸಮುದ್ರದವನು. ಇಬ್ಬರು ಫೇಸ್‌ಬುಕ್‌ ಮೂಲಕ ಪರಿಚಯವಾಗಿ, ನಂತರದಲ್ಲಿ ಮದುವೆಯಾಗಲು ನಿಶ್ಚಯಿಸಿದ್ದಾರೆ. 

ಪ್ರೀತಿಯ ಹೆಸರಲ್ಲಿ ವಿದ್ಯಾರ್ಥಿನಿ ಮೇಲೆ ರೌಡಿಶೀಟರ್‌ ಅತ್ಯಾಚಾರ

ಆಗ ಎರಡು ಕುಟುಂಬಸ್ಥರು ಸೇರಿ ಬಾಲಕನ ಊರಿನಲ್ಲಿ ಜೂ.23ರಂದು ಮದುವೆ ಮಾಡಿದ್ದಾರೆ. ಬಾಲಕನನ್ನು ವಿವಾಹ ಆಗಿರುವ ಯುವತಿ ವಿರುದ್ಧ ಸಖರಾಯಪಟ್ಟಣ ಪೊಲೀಸ್‌ ಠಾಣೆಯಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆ, ಕೋವಿಡ್‌ ನಿಯಮ ಉಲ್ಲಂಘನೆಯಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಮಕ್ಕಳ ಸಹಾಯವಾಣಿಯ ಸಂಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!