Uttara Kannada: ಪೀಠೋಪಕರಣ ಮಳಿಗೆಯಲ್ಲಿ ಭಾರೀ ಅಗ್ನಿ ಅನಾಹುತ

By Kannadaprabha News  |  First Published Oct 22, 2022, 12:48 PM IST
  • ಪೀಠೋಪಕರಣ ಮಳಿಗೆಯಲ್ಲಿ ಭಾರೀ ಅಗ್ನಿ ಅನಾಹುತ
  • ವಿದ್ಯುತ್‌ ಶಾರ್ಚ್‌ ಸಕ್ರ್ಯೂಟ್‌ಗೆ ಕೋಟ್ಯಂತರ ಮೌಲ್ಯದ ಸೊತ್ತು ಹಾನಿ
  • ರಾತ್ರಿ ಹೊತ್ತಿಕೊಂಡ ಬೆಂಕಿ ಮಧ್ಯಾಹ್ನವಾದರೂ ನಿಯಂತ್ರಣಕ್ಕೆ ಬಂದಿಲ್ಲ

ದಾಂಡೇಲಿ (ಅ.22) : ನಗರದ ಅಂಬೇವಾಡಿಯ ಕೈಗಾರಿಕಾ ವಸಾಹತುನಲ್ಲಿನ ಕಟ್ಟಿಗೆ ಪೀಠೋಪಕರಣ ತಯಾರಿಕೆ ಮತ್ತು ಮಾರಾಟ ಮಳಿಗೆಯಲ್ಲಿ ಗುರುವಾರ ತಡರಾತ್ರಿ ಬೆಂಕಿ ಅವಘಡ ಸಂಭವಿಸಿ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಉದಯ ನಾಯ್ಕ ಮಾಲೀಕತ್ವದ ವುಡ್‌ಲ್ಯಾಂಡ್‌ ಪೀಠೋಪಕರಣಗಳ ಮಳಿಗೆಯಲ್ಲಿ ಹಠಾತ್‌ ಬೆಂಕಿ ಕಾಣಿಸಿಕೊಂಡಿದೆ. ಅಂಗಡಿಯಲ್ಲಿದ್ದ ಎಲ್ಲ ಪೀಠೋಪಕರಣಗಳು ಬೆಂಕಿಗೆ ಆಹುತಿ ಆಗಿದ್ದು, ಕೋಟ್ಯಂತರ ರು. ನಷ್ಟಸಂಭಸಿದೆ ಎಂದು ಅಂದಾಜಿಸಲಾಗಿದೆ.

ಸೂಪರ್‌ ಮಾರ್ಕೆಟ್‌ಗೆ ಆಕಸ್ಮಿಕ ಬೆಂಕಿ: ಕೋಟ್ಯಾಂತರ ಮೌಲ್ಯದ ವಸ್ತು ನಾಶ

Latest Videos

undefined

ಗುರುವಾರ ರಾತ್ರಿ 9:30ರ ಸುಮಾರಿಗೆ ಮಿಂಚು ಗುಡುಗು ಸಹಿತ ಜೋರಾಗಿ ಮಳೆ ಬಂದಿದೆ. ಇದೇ ವೇಳೆ ವಿದ್ಯುತ್‌ ಶಾರ್ಚ್‌ ಸಕ್ರ್ಯೂಟ್‌ ಆಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಇದು ರಾತ್ರಿ 2 ಗಂಟೆ ಸುಮಾರಿಗೆ ಬೆಂಕಿ ಭಾರೀ ಪ್ರಮಾಣದಲ್ಲಿ ಕಾಣಿಸಿಕೊಂಡಿತ್ತು. ಈ ವೇಳೆ ಸುದ್ದಿ ತಿಳಿಯುತ್ತಿದ್ದಂತೆಯೇ ನಗರದ ವೆಸ್ಟ್‌ಕೋಸ್ಟ್‌ ಪೇಪರ್‌ ಮಿಲ್‌ನ ಅಗ್ನಿಶಾಮಕ ದಳ, ಹಳಿಯಾಳ, ಜೋಯಿಡಾ, ಯಲ್ಲಾಪುರದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದರು. ರಾತ್ರಿಯೇ ಹೊತ್ತಿಕೊಂಡಿದ್ದ ಬೆಂಕಿ ಜ್ವಾಲೆ ಶುಕ್ರವಾರ ಬೆಳಿಗ್ಗೆ 11 ಗಂಟೆಯಾದರೂ ಸಂಪೂರ್ಣ ಹತೋಟಿಗೆ ಬಂದಿರಲಿಲ್ಲ.

ವುಡ್‌ಲ್ಯಾಂಡ್‌ ಪೀಠೋಪಕರಣಗಳ ಮಳಿಗೆಯಲ್ಲಿದ್ದ ಸಾಗುವಾನಿ, ಸಿಸಂ, ಹೊನ್ನೆ, ಬೀಟೆ, ಕರಿಮತ್ತೆ ಮುಂತಾದ ಬೆಲೆಬಾಳುವ ಮರಗಳ ಪೀಠೋಪಕರಣ ಸಂಪೂರ್ಣ ಸುಟ್ಟು ಕರಕಲಾಗಿದೆ ಎಂದು ತಿಳಿದುಬಂದಿದೆ.

ಪಕ್ಕದ ಅರ್ಚನಾ ಸುನೀಲ ಸೋಮನಾಚೆ ಅವರ ದಾಂಡೇಲಿ ಆಟ್ಸ್‌ರ್‍ ಮರದ ಪೀಠೋಪಕರಣದಲ್ಲೂ ಅಗ್ನಿ ಅವಘಡದಿಂದ ಹಾನಿಯಾಗಿದೆ. ಇನ್ನು ಅಕ್ಕಪಕ್ಕದ ಅಂಗಡಿಗಳಿಗೂ ಬೆಂಕಿ ಅವಘಡದಿಂದ ಅಲ್ಪಸ್ವಲ್ಪ ಪ್ರಮಾಣದ ಹಾನಿ ಉಂಟಾಗಿದೆ.

ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ಕೆ.ಎಲ್‌. ಗಣೇಶ, ಸಿಪಿಐ ಬಿ.ಎಸ್‌. ಲೋಕಾಪುರ, ಪಿಎಸ್‌ಐ ಕೃಷ್ಣಗೌಡ ಹರಿಕೇರಿ, ಹೆಸ್ಕಾಂ ಅಧಿಕಾರಿಗಳು ಭೇಟಿ ನೀಡಿದರು. ಘಟನಾ ಸ್ಥಳದಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದು ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ವಿಜಯಪುರ: ಕೂಡಗಿ ಎನ್‌ಟಿಪಿಸಿ ಉಷ್ಣ ವಿದ್ಯುತ್‌ ಸ್ಥಾವರದಲ್ಲಿ ಅಗ್ನಿ ಅವಘಡ

ದಾಂಡೇಲಿಯಲ್ಲಿಲ್ಲ ಅಗ್ನಿಶಾಮಕ ಠಾಣೆ

ದಾಂಡೇಲಿ ನಗರದಲ್ಲಿ ಸರ್ಕಾರಿ ಅಗ್ನಿಶಾಮಕ ಠಾಣೆ ಇಲ್ಲದಿರುವುದು ಸಕಾಲಕ್ಕೆ ಬೆಂಕಿ ನಂದಿಸಲು ಬೇರೆ ತಾಲೂಕುಗಳ ಅಗ್ನಿ ಶಾಮಕ ದಳವನ್ನು ನೆಚ್ಚಿಕೊಳ್ಳಬೇಕಾಗಿದೆ. ನಗರದಲ್ಲಿಯೇ ಅಗ್ನಿಶಾಮಕ ಠಾಣೆ ಇದ್ದಿದ್ದರೆ ಸಾಧ್ಯವಾದಷ್ಟುಸಂಭವನೀಯ ಹಾನಿ ತಪ್ಪಿಸಬಹುದಿತ್ತು ಎನ್ನುವ ಮಾತುಗಳು ಸಾರ್ವಜನಿಕರಲ್ಲಿ ಕೇಳಿಬಂದಿತು. ಶೀಘ್ರದಲ್ಲಿಯೇ ನಗರದಲ್ಲೊಂದು ಸರ್ಕಾರಿ ಅಗ್ನಿಶಾಮಕ ದಳದ ಠಾಣೆಯನ್ನು ಸ್ಥಾಪಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

click me!