ಕನ್ನಡ ಪ್ರಭ ವರದಿಯಿಂದ ಎಂಬಿಬಿಎಸ್‌ ವಿದ್ಯಾರ್ಥಿಗೆ ನೆರವಿನ ಮಹಾಪೂರ

By Kannadaprabha News  |  First Published Nov 19, 2022, 3:48 PM IST


ಎಂಬಿಬಿಎಸ್‌ ಓದಲು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ವಿದ್ಯಾರ್ಥಿಯ ಬಗ್ಗೆ ಕನ್ನಡಪ್ರಭದಲ್ಲಿ ನೆರವು ನೀಡುವಂತೆ ವರದಿ ಪ್ರಕಟಿಸಲಾಗಿತ್ತು. ಈ ವರದಿಯನ್ನು ಗಮನಿಸಿದ ನೂರಾರು ಜನರು ಬಡವಿದ್ಯಾರ್ಥಿಯ ಕುರಿತು ಕೈಲಾದಷ್ಟು ನೆರವು ನೀಡುವ ಮೂಲಕ ವರದಿಗೆ ಉತ್ತಮ ಸ್ಪಂದನೆ ವ್ಯಕ್ತಪಡಿಸಿದ್ದಾರೆ.


ಕನ್ನಡಪ್ರಭ ವಾರ್ತೆ ಕೊಪ್ಪಳ
ತಾಲೂಕಿನ ಜಿನ್ನಾಪುರ ಗ್ರಾಮದ ಪ್ರಶಾಂತ ಚಂಡೂರು ಕುರಿತು ‘ಎಂಬಿಬಿಎಸ್‌ ಸೀಟ್‌ ಸಿಕ್ಕಿದ್ದರೂ ಪ್ರವೇಶಕ್ಕೆ ಬಡತನ ಅಡ್ಡಿ’ ಎನ್ನುವ ತಲೆಬರಹದಡಿಯಲ್ಲಿ ‘ಕನ್ನಡಪ್ರಭ’ ಪ್ರಕಟಿಸಿದ ವಿಶೇಷ ವರದಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಪ್ರಶಾಂತನಿಗೆ ನೆರವಿನ ಮಹಾಪೂರವೇ ಹರಿದುಬಂದಿದೆ. ಆತನ ಐದು ವರ್ಷದ ವೆಚ್ಚ ಭರಿಸುವ ವಾಗ್ದಾನವೂ ಸಿಕ್ಕಿದೆ. 

ಇದರಿಂದ ವಿದ್ಯಾರ್ಥಿ ಪ್ರಶಾಂತ ಚಂಡೂರು (Prashanth Chandura) ಅವರು ಕೊಡಗಿನ ಎಂಬಿಬಿಎಸ್‌ (MBBS) ಕಾಲೇಜಿನಲ್ಲಿ ಪ್ರವೇಶ ಪಡೆಯುವುದಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾನೆ. ಆತನ ಖಾತೆಗೆ ಸುಮಾರು 1.20 ಲಕ್ಷ ರು. ಜಮೆಯಾಗಿದೆ. ಅಲ್ಲದೇ ಚೆಕ್‌, ನಗದು ಸೇರಿ 80 ಸಾವಿರ ಬಂದಿದೆ. ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ (Paranna Munavalli) ಅವರು, 60 ಸಾವಿರ ರು. ನಗದನ್ನು ಅವರ ಪುತ್ರ ಸಾಗರ ಮೂಲಕ ಆತನ ಮನೆಗೆ ತಲುಪಿಸಿದ್ದಾರೆ ಮತ್ತು ಆತನನ್ನು ಸನ್ಮಾನಿಸಿದ್ದಾರೆ. ಅಲ್ಲದೇ ಮುಂದಿನ ಐದು ವರ್ಷಗಳ ಕಾಲವೂ ಶುಲ್ಕದ ನೆರವು (Fee help) ನೀಡುವುದಾಗಿ ಭರವಸೆ (assurance) ನೀಡಿದ್ದಾರೆ. ಇರಕಲ್‌ನಲ್ಲಿರುವ ಡಾ. ಈಶಪ್ಪ ಅವರು ಖುದ್ದು ಅವರ ನಿವಾಸಕ್ಕೆ ತೆರಳಿ 10 ಸಾವಿರ ರು. ಸಹಾಯ ಮಾಡಿದ್ದಾರೆ. ಅನೇಕರು ಬ್ಯಾಂಕ್‌ ಖಾತೆಗೂ (Bank Account) ನೇರವಾಗಿ ಜಮೆ ಮಾಡುತ್ತಿದ್ದಾರೆ.

Tap to resize

Latest Videos

undefined

ಅನಿವಾಸಿ ಭಾರತೀಯರಿಂದಲೂ ನೆರವು: ಮುರುಡೇಶ್ವರದ ರಾಜೇಶ ಶೆಟ್ಟಿ (Rajesh Shetty) ಎಂಬವರು ಸದ್ಯ ನಾರ್ವೆ (Norway) ದೇಶದಲ್ಲಿದ್ದು, ಅವರು ‘ಕನ್ನಡಪ್ರಭ’ದ ವರದಿ ಗಮನಿಸಿ 50 ಸಾವಿರ ರು. ಬ್ಯಾಂಕ್‌ ಖಾತೆಗೆ ಜಮೆ ಮಾಡಿದ್ದಾರೆ. ಅಲ್ಲದೇ ಆತನ ಐದು ವರ್ಷಗಳ ವೈದ್ಯಕೀಯ ಕೋರ್ಸ್‌ (Medical Course) ಓದುವುದಕ್ಕೆ ಸಂಪೂರ್ಣ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ಬೆಂಗಳೂರು ನಿವಾಸಿ ಲಲಿತಾ (Lalitha) ಎಂಬವರು ಪತ್ರಿಕೆಯ ವರದಿ ನೋಡಿ, ವಿದ್ಯಾರ್ಥಿಗೆ ಕರೆ ಮಾಡಿ ಮಾತನಾಡಿ, 40 ಸಾವಿರ ಸಹಾಯಹಸ್ತ ನೀಡಿದ್ದಾರೆ.

ಸದ್ಯಕ್ಕೆ ನನಗೆ ಸಾಕು: ನನಗೆ ಬೇಕಾಗಿರುವಷ್ಟು ನೆರವು ಸಿಕ್ಕಿದೆ. ನನಗೆ ಈ ನೆರವು ಸಾಕು. ನನ್ನಂಥವರು ಇನ್ನೂ ಹಲವೆಡೆ ಇರುತ್ತಾರೆ. ಅವರಿಗೆ ಸಹಾಯ ಸಿಗಲಿ ಎಂದು ಪ್ರಶಾಂತ ಚಂಡೂರು ಮತ್ತು ಆತನ ತಾಯಿ ಹೇಳುತ್ತಿದ್ದಾರೆ. ಈ ಮೂಲಕವೂ ಹರಿದು ಬರುವ ನೆರವನ್ನು ಬಂದರೆ ಬರಲಿಬಿಡಿ ಎನ್ನುತ್ತಿಲ್ಲ. ಬದಲಾಗಿ ದೊಡ್ಡ ಮನಸ್ಸಿನಿಂದ ಬೇರೆಯವರಿಗೂ ಸಹಾಯವಾಗಲಿ ಎನ್ನುತ್ತಿದ್ದಾರೆ.

‘ಕನ್ನಡಪ್ರಭ’ಕ್ಕೆ ಧನ್ಯವಾದ: ನಿಜಕ್ಕೂ ನಾವು ‘ಕನ್ನಡಪ್ರಭ’ಕ್ಕೆ ಧನ್ಯವಾದ (Thanks) ಹೇಳಲೇಬೇಕು ಎನ್ನುತ್ತಾರೆ ಶಿಕ್ಷಕ ಚನ್ನಬಸಯ್ಯ (Channabasavayya) ಅವರು. ‘ಕನ್ನಡಪ್ರಭ’ಕ್ಕೆ ಕರೆ ಮಾಡಿ ಮಾತನಾಡಿದ ಅವರು, ಪ್ರಶಾಂತ ಚಂಡೂರು ಎಂಬಿಬಿಎಸ್‌ ಓದುವುದಕ್ಕೆ ಅಡ್ಡಿಯಾಗಿದ್ದ ಬಡನತ (Poverty) ಪತ್ರಿಕೆಯ ವರದಿಯಿಂದ ನಿವಾರಣೆಯಾಗಿದೆ ಎಂದಿದ್ದಾರೆ.

click me!