ಚಿತ್ತಾಪುರ (ನ.19) : ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಮೂಲ ಸೌಕರ್ಯ ಒದಗಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ದಂಡಗುಂಡ ಬಸವೇಶ್ವರ ದೇವಾಲಯಕ್ಕೆ ಹೊಂದಿಕೊಂಡಂತೆ ಸುಸಜ್ಜಿತ ಯಾತ್ರಿ ನಿವಾಸ ನಿರ್ಮಾಣ ಮಾಡಬೇಕೆನ್ನುವ ಕನಸು ಇಂದು ಈಡೇರಿದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.
ತಾಲೂಕಿನ ದಂಡಗುಂಡ ಗ್ರಾಮದಲ್ಲಿ .50 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಯಾತ್ರಿ ನಿವಾಸ ಉದ್ಘಾಟನೆ ಹಾಗೂ .10 ಲಕ್ಷ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಿರುವ ಅಂಬಿಗರ ಚೌಡಯ್ಯ ಭವನ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿಸಿ ಮಾತನಾಡಿದರು.
undefined
ಚಿತ್ತಾಪುರದಲ್ಲಿ ಪೋಸ್ಟರ್ ಪಾಲಿಟಿಕ್ಸ್: ಬಿಜೆಪಿಗೆ ಪ್ರಿಯಾಂಕ್ ಖರ್ಗೆ ವಾರ್ನಿಂಗ್
ದಂಡಗುಂಡ ಬಸವೇಶ್ವರ ದೇವಾಲಯ ಪುನರುಜ್ಜೀವನಗೊಳಿಸಲು ಮಾಸ್ಟರ್ ಪ್ಲಾನ್ ಮಾಡುವಂತೆ ಹೇಳಿದ್ದೆ ಅದು ರೆಡಿ ಆಗಿದೆಯಂತೆ, ದೇವಾಲಯ ಕಮಿಟಿಯವರು ದೇವಾಲಯ ಪುನರ್ ನಿರ್ಮಾಣಕ್ಕೆ ಈಗ ಸಿದ್ದರಾಗಿದ್ದಾರೆ. ಈ ಕಾರ್ಯಕ್ಕೆ ನಾನು ಮುಕ್ತವಾಗಿ ಬೆನ್ನೆಲುಬಾಗಿ ನಿಲ್ಲುತ್ತೇನೆ ಅದು .5 ಕೊಟಿ ಆಗಲಿ .10 ಕೊಟಿ ಆಗಲಿ ಎಂದು ಭರವಸೆ ನೀಡಿದರು.
ಇತ್ತೀಚೆಗೆ ಚಿತ್ತಾಪುರದಲ್ಲಿ ರಾಜಕೀಯ ವಾತಾವರಣ ಕಲುಷಿತಗೊಂಡಿದೆ. ಇದು ಬೇಸರ ತರಿಸಿದೆ ಎಂದ ಖರ್ಗೆ ಅವರು ದೇವಾಲಯಕ್ಕೆ ಸಂಬಂದಿಸಿದಂತೆ ದಿ.ವಾಲ್ಮೀಕಿ ನಾಯಕ್ ಅವರು ನನ್ನೊಂದಿಗೆ ಹಲವಾರು ಬಾರಿ ಚರ್ಚಿಸಿದ್ದಾರೆ. ರಾಜಕಾರಣವನ್ನು ಕೇವಲ ಚುನಾವಣೆಗೆ ಮಾತ್ರ ಸೀಮಿತಗೊಳಿಸಬೇಕು. ಆ ನಂತರ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಆದರೆ ಈಗ ಅಂತಹ ವಾತಾವರಣ ಇಲ್ಲಾ. ಮತ್ತೊಮ್ಮೆ ಅಂತಹ ವಾತಾವರಣ ಪುನರ್‌ನಿರ್ಮಾಣ ಆಗಬೇಕಿದೆ ಎಂದರು.
ನಿಮ್ಮ ಭವಿಷ್ಯ ರೂಪಿಸುವವರಿಗೆ ಮತ ನೀಡಿ:
ನಿಮ್ಮ ಭವಿಷ್ಯವನ್ನು ರೂಪಿಸುವವರಿಗೆ ನೀವು ಮತದಾನ ಮಾಡಿ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮತದಾನ ಶ್ರೇಷ್ಠದಾನವಾಗಿದೆ. ಮತದಾನದಲ್ಲಿ ಯುವಕರ ಪಾತ್ರ ಹಿರಿದಾಗಿದೆ. ಹಾಗಾಗಿ ನಿಮ್ಮ ಮತವನ್ನು ವ್ಯರ್ಥವಾದಂತೆ ನೊಡಿಕೊಳ್ಳಬೇಕು. ಯುವಕತ ಭವಿಷ್ಯದ ಬಗ್ಗೆ ಯೊಚನೆ ಮಾಡದ ಸರ್ಕಾರ ಯುವಕರ ಪಾಲಿನ ಮಾರಕವಾಗುತ್ತದೆ. ಯುವಕರ ಕೈಗೆ ಉದ್ಯೊಗವಿಲ್ಲಾ. ಉತ್ಕೃಷ್ಟಶಿಕ್ಷಣ ವ್ಯವಸ್ಥೆ ಇಲ್ಲ. ಶಿಕ್ಷಣ ನೀಡದ ಸರ್ಕಾರದ ಅದ್ಯತೆ ಏನು ಎನ್ನುವುದೇ ತಿಳಿಯುತ್ತಿಲ್ಲ. ಮೌಲ್ಯಯುತ ಶಿಕ್ಷಣ ಒದಗಿಸದ ಸರ್ಕಾರ ಶಾಲೆಗಳಿಗೆ ಕೇಸರಿ ಬಣ್ಣ ಬಳಿಯುವ ಕುರಿತು ಚಿಂತನೆ ನಡೆಸಿದೆ ಎಂದು ಟೀಕಿಸಿದರು.
ಸೌರಪಾರ್ಕ್ ಟೆಂಡರಲ್ಲಿ ಅಕ್ರಮ ಆಗಿದ್ರೆ ತನಿಖೆ ಮಾಡಿ; ಪ್ರಿಯಾಂಕ್ ಖರ್ಗೆ
ನಮಗೆ ಕೇಸರಿ ಎಂದರೆ ಅಲರ್ಜಿ ಇಲ್ಲಾ ಆದರೆ ನಿಮ್ಮ ಆದ್ಯತೆಯ ಬಗ್ಗೆ ತಕರಾರಿದೆ. ಮಂತ್ರಿಗಳ ಹಾಗೂ ನಾಯಕರ ಮನೆಯ ಬಣ್ಣ ಯಾಕೆಕೇಸರಿ ಬಣ್ಣವಿಲ್ಲಾ? ಧರ್ಮರಕ್ಷಣೆಗೆ ಕೇವಲ ಬಡವರ ಹಿಂದುಳಿದವರ ಮಕ್ಕಳನ್ನು ಬಳಸಿಕೊಳ್ಳುವ ಬಿಜೆಪಿ ನಾಯಕರು ತಮ್ಮ ಮಕ್ಕಳನ್ನು ಉತ್ತಮ ಶಾಲೆಗಳಲ್ಲಿ ಓದಿಸುತ್ತಿದ್ದಾರೆ. ಯಾಕೆ ಅವರ ಮಕ್ಕಳನ್ನು ಧರ್ಮ ರಕ್ಷಣೆಗೆ ಕಳಿಸುತ್ತಿಲ್ಲಾ ಎಂದು ಕುಟುಕಿದರು. ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ, ನಾಗರೆಡ್ಡಿ ಪಾಟೀಲ್, ಜಿಪಂ ಮಾಜಿ ಸದಸ್ಯ ಶಿವರುದ್ರ ಭೀಣಿ, ವೀರನಗೌಡ ಪರಸರೆಡ್ಡಿ, ಜಗದೇವರೆಡ್ಡಿ ಪಾಟೀಲ್, ಸಿದ್ದುಗೌಡ ಅಫಜಲಪುರಕರ್, ಭಾಗನಗೌಡ ಸಂಕನೂರ, ಭೀಮಣ್ಣ ಸಾಲಿ, ಚಂದ್ರಶೇಖ ಅವಂಟಿ ಇತರರು ಇದ್ದರು.