ಬ್ರಾಹ್ಮಣರ ಟೀಕಿಸೋದು ಕೆಲವರಿಗೆ ಚಟವಾಗಿದೆ: ಬ್ರಾಹ್ಮಣ ಸಂಘಟನೆ ಆಕ್ರೋಶ

By Kannadaprabha News  |  First Published Nov 19, 2022, 2:58 PM IST
  • ಬ್ರಾಹ್ಮಣರ ಟೀಕಿಸೋದು ಕೆಲವರಿಗೆ ಚಟವಾಗಿದೆ
  • ಕಲಬುರಗಿಯಲ್ಲಿ ಬ್ರಾಹ್ಮಣ ಸಂಘಟನೆ ಆಕ್ರೋಶ
  • ಮಲ್ಲೇಶ ವಿರುದ್ಧ ಜಾತಿ ನಿಂದನೆ ಕೇಸ್‌ ದಾಖಲಿಸಲು ಆಗ್ರಹ

ಕಲಬುರಗಿ (ನ.19) : ಬ್ರಾಹ್ಮಣರು ಮತ್ತು ಬ್ರಾಹÜ್ಮಣಿಕೆ ಬಗ್ಗೆ ಸಾರ್ವಜನಿಕವಾಗಿ ಆಕ್ಷೇಪಾರ್ಹ ಮತ್ತು ಅಶ್ಲೀಲ ಹೇಳಿಕೆ ನೀಡಿರುವ ಸಿದ್ದರಾಮಯ್ಯನವರ ಆಪ್ತ, ಸಮಾಜವಾದಿ ಪ.ಮಲ್ಲೇಶ್‌ ವಿರುದ್ಧ ಜಾತಿ ನಂದನೆ ಪ್ರಕರಣ ದಾಖಲಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಆಗ್ರಹಿಸಿ ಕಲಬುರಗಿಯಲ್ಲಿ ಶುಕ್ರವಾರ ಬ್ರಾಹ್ಮಣ ಸಮಾಜ ಸಂಘಟನೆಗಳ ಒಕ್ಕೂಟದಡಿಯಲ್ಲಿ ಭಾರಿ ಪ್ರತಿಭಟನೆ ನಡೆಸಲಾಯ್ತು.

ನೂರಾರು ಸಂಖ್ಯೆಯಲ್ಲಿ ಸೇರಿದ್ದ ವಿವಿಧ ಸಂಘಟನೆಗಳ ಮುಖಂಡರು, ಬ್ರಾಹ್ಮಣರು ಕನ್ನಡ ಭವನಲ್ಲಿ ಸೇರಿ ಅಲ್ಲಿಂದ ಮುಖ್ಯ ಬೀದಿಯಲ್ಲಿ ಪ್ರತಿಭಟನಾ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿವರೆಗೂ ರಾರ‍ಯಲಿ ನಡೆಸಿದರು. ಮಲ್ಲೇಶ್‌ ಸೇರಿದಂತೆ ಜಾತಿ ನಿಂದನೆ ಮಾಡವವರ ವಿರುದ್ಧ ಘೋಷಣೆ ಹಾಕಿದರು.

Latest Videos

undefined

ASSEMBLY ELECTION:'ಕೈ' ಹಿಡಿಯಲಿದ್ದಾರಾ ಮಾಜಿ ಸಚಿವ ಮಾಲಕರೆಡ್ಡಿ? ಕುತೂಹಲ ಮೂಡಿಸಿದ ಡಿ.ಕೆ.ಶಿವಕುಮಾರ್ ಭೇಟಿ

ಮಲ್ಲೇಶ ಉದ್ಧಟತನದ ಮಾತು ಸಹಿಸಲಾಗದು:

ಬ್ರಾಹ್ಮಣರು, ಬ್ರಾಹ್ಮಣಿಕೆ, ವೇದೋಪನಿಷತ್ತುಗಳು, ಮಠಾಧೀಶರ ಬಗ್ಗೆ ಕೆಟ್ಟದಾಗಿ ಮಲ್ಲೇಶ್‌ ಮಾತನಾಡಿದ್ದಾರೆ. ಅವರು ತಮ್ಮ ಮಾತುಗಳ ಮೂಲಕ ತಮ್ಮ ಚಿಂತನೆ ಹರಿಬಿಟ್ಟಿದ್ದಾರೆ. ಇದು ಖಂಡನೀಯ. ಜಾತಿ ನಿಂದನೆ ಮಾಡಿರುವ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಉತ್ತರಾದಿ ಮಠಾಧಿಕಾರಿ ರಾಮಾಚಾರ್ಯ ಘಂಟಿ, ಜಿಲ್ಲಾ ಬ್ರಾಹ್ಮಣ ಸಂಘದ ದತ್ತಾತ್ರೇಯ ಪೂಜಾರಿ, ಬ್ರಾಹ್ಮಣ ಅರ್ಗನೈಸೇಷನ್‌ ಆಫ್‌ ಇಂಡಿಯಾದ ರಾಜ್ಯ ಪ್ರ. ಕಾರ್ಯದರ್ಶಿ ವಿರೇಶ ಕುಲಕಣಿÜರ್‍ ಸೇರಿದಂತೆ ಅನೇಕರು ಮಲ್ಲೇಶ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲೇ ಪ ಮಲ್ಲೇಶ ಈ ರೀತಿ ಬ್ರಾಹ್ಮಣ ಸಮಾಜ ನಿಂದಿಸುವ ಉದ್ಧಟತನದ ಮಾತನ್ನಾಡಿದ್ದು ಸಹಿಸಲಾಗದು, ಆತನನ್ನು ಸರ್ಕಾರ ಶಿಕ್ಷಿಸಲೇಬೇಕು. ಜಾತಿ ನಿಂದನೆ ಕೇಸ್‌ ಹಾಕಿ ಕಾನೂನು ಕ್ರಮಕ್ಕೆ ಮುಂದಾಬೇಕು. ಇಲ್ಲದೆ ಹೋದಲ್ಲಿ ಇಂತಹ ಹೇಳಿಕೆಗಳನ್ನೇ ಕೊಡುವವರದ್ದೇ ಗುಂಪು ಹುಟ್ಟಿಕೊಳ್ಳುತ್ತದೆ. ಬ್ರಾಹ್ಮಣರು ತಾವು ಏನೆಂಬುದನ್ನು ಮುಂದಿನ ಚುನಾವಣೆಯಲ್ಲಿ ತೋರಿಸುತ್ತೇವೆ. ಬ್ರಾಹ್ಮಣರು, ಬ್ರಾಹÜ್ಮಣಿಕೆ ನಿಂದಿಸೋದು ಅಂದರೆ ಹಲವರಿಗೆ ಮಜಾ ಆಗಿದೆ. ಇಂತಹವರಿಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಾಗುತ್ತದೆ ಎಂದರು.

ಕಲಬುರಗಿ: ಡಿ.8ರಂದು ಅಫಜಲ್ಪುರದಲ್ಲಿ ಜೆಡಿಎಸ್‌ ಬೃಹತ್‌ ಸಮಾವೇಶ

ಕಲಬುರಗಿಯ ಆದರ್ಶ ಸಂಸ್ಕೃತ ವಿದ್ಯಾಪೀಠದ ಕುಲಪತಿ ಡಾ. ಗುರುಮಧ್ವಾಚಾರ್ಯ ನವಲಿ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಅವಿನಾಶ ಕುಲಕರ್ಣಿ, ಬಿಒಐ ಅಧ್ಯಕ್ಷ ರವೀಂದ್ರ ಕುಲಕರ್ಣಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಂಘದ ರಾಘವೇಂದ್ರ ಕೋಗನೂರ್‌, ವಿಶ್ವ ಮಧ್ವ ಮಹಾ ಪರಿಷತ್ತಿನ ರಾಮಾಚಾರ್ಯ ಮೋಗರೆ, ಸತ್ಯಾತ್ಮ ಸೇನೆಯ ಪರವಾಗಿ ರಘೋತ್ತಮ ಘಂಟಿ, ಜಯತೀರ್ಥ, ಭರತ ಚಿತ್ತಾಪುರಕರ್‌, ಬ್ರಾಹ್ಮಿನ್‌ ಅರ್ಗನೈಸೇಷನ್‌ ಆಫ್‌ ಇಂಡಿಯಾದ ವೆಂಕಟೇಶ ಕುಲಕರ್ಣಿ, ಅಭಾ ಬ್ರಾಹ್ಮಣ ಮಹಾ ಸಂಘದ ರವಿ ಲಾತೂರಕರ್‌, ಸತ್ಯಾತ್ಮ ಸೇನೆಯ ವಿನೂತ್‌ ಜೋಷಿ, ಕರ್ನಾಟಕ ಮಾಧ್ವ ಪರಿಷತ್‌ ರಾಯರ ಮಠದ ಭಕ್ತ ವೃಂದ ಸೇರಿದಂತೆ ನೂರಾರು ಜನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

click me!