ಸಮೀಪದ ಕುಂಬಳೂರಿನ ರಥಕ್ಕೆ ಎಂಸ್ಯಾಂಡ್ ಲೋಡ್ ಮಾಡಿದ್ದ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ರಥ ಮತ್ತು ಉಚ್ಚಾಯಕ್ಕೆ ಧಕ್ಕೆಯಾಗಿದ್ದು, ಭಾರೀ ಅನಾಹುತ ತಪ್ಪಿದಂತಾಗಿದೆ.
ಮಲೇಬೆನ್ನೂರು (ಮಾ.14): ಸಮೀಪದ ಕುಂಬಳೂರಿನ ರಥಕ್ಕೆ ಎಂಸ್ಯಾಂಡ್ ಲೋಡ್ ಮಾಡಿದ್ದ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ರಥ ಮತ್ತು ಉಚ್ಚಾಯಕ್ಕೆ ಧಕ್ಕೆಯಾಗಿದ್ದು, ಭಾರೀ ಅನಾಹುತ ತಪ್ಪಿದಂತಾಗಿದೆ.
ಮುಜರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಶ್ರೀಹನುಮಂತ ದೇವರ ರಥೋತ್ಸವ(Hanumanta devara rathotsav) ಕಳೆದ ಎರಡು ದಿನಗಳ ಹಿಂದ ಮುಗಿದಿದ್ದು, ಅಧಿಕೃತ ಸ್ಥಳದಲ್ಲಿ ರಥವನ್ನು ನಿಲ್ಲಿಸಲಾಗಿತ್ತು. ಭಾನುವಾರ ಸಂಜೆ ಉಚ್ಚಂಗಿದುರ್ಗ ಮಾರ್ಗದಿಂದ ಬಂದ ಎಂಸ್ಯಾಂಡ್ (M Sand)ಸಾಗಿಸುತ್ತಿದ್ದ ಲಾರಿ ಚಾಲಕ ಅಜಾಗರೂಕನಾಗಿ ಚಾಲನೆ ಮಾಡಿದ ಕಾರಣ ರಥಕ್ಕೆ ಢಿಕ್ಕಿ ಹೊಡೆದಿದ್ದಾನೆ. ಅಲ್ಲದೇ ಚಾಲಕನು ಮದ್ಯಪಾನ ಮಾಡಿದ್ದ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಗೂಡ್ಸ್‌ಶೆಡ್ ರಸ್ತೆ ಬುಲ್ಲಾರ್ಡ್ಸ್‌ಗೆ ಡಿಕ್ಕಿ ಹೊಡೆದು ಅಪ್ರಾಪ್ತ ಬಾಲಕ ಸಾವು: ಅತಿವೇಗದಿಂದ ಅಪಘಾತ
ಲಾರಿ ಢಿಕ್ಕಿ ಹೊಡೆದ ತಕ್ಷಣ ರಥ ಮುಂದಕ್ಕೆ ಚಲಿಸಿ ಅದರ ಪಕ್ಕದಲ್ಲಿ ನಿಲ್ಲಿಸಿದ್ದ ಉಚ್ಚಾಯಕ್ಕೆ ತಾಗಿ ವಿದ್ಯುತ್ ತಂತಿಗೆ ತಗುಲದೇ ಅನಾಹುತ ತಪ್ಪಿದಂತಾಗಿದೆ. ಘಟನೆ ಸಂಭವಿಸದ ತಕ್ಷಣವೇ ಗ್ರಾಮಸ್ಥರು, ಮಲೇಬೆನ್ನೂರು, ನಿಟ್ಟೂರು ಭಕ್ತರು ಸ್ಥಳಕ್ಕೆ ಧಾವಿಸಿದ್ದರು. ಲಾರಿ ಮಾಲೀಕರು ಆಗಮಿಸಿ ಗ್ರಾಮಸ್ಥರ ಜತೆ ಸಂಧಾನ ನಡೆಸಿದರು. ಪೊಲೀಸರೂ ಭಕ್ತರನ್ನು ನಿಯಂತ್ರಿಸಿ ಸಂಧಾನಕ್ಕೆ ಸಹಕರಿಸಿದರು. ರಥೋತ್ಸವದಲ್ಲಿಯೂ ಸಹ ಕೆಲ ಸಮಸ್ಯೆಗಳನ್ನು ಬಗೆಹರಿಸಲಾಗಿತ್ತು. ಆ ಕಾರಣಕ್ಕಾಗಿ ಫ್ಲೆಕ್ಸ್‌ಗಳನ್ನು ಹರಿದುಹಾಕಲಾಗಿತ್ತು. ರಥಕ್ಕೆ ಈ ಘಟನೆ ನಡೆದಿದ್ದು, ದೇವಾಲಯ ಬೇರೆ ಕೆಡವಿ ನೂತನ ದೇವಸ್ಥಾನವನ್ನು ನಿರ್ಮಿಲಾಗುತ್ತಿದೆ. ಮುಂದೆ ಏನು ಅನಾಹುತ ಆಗುವಹುದೋ ಎಂದು ಭಕ್ತರು ಭಯದಿಂದ ಮಾತಾಡುವಂತಾಯಿತು.
ಬೇತೂರು ಬಳಿ ಬಸ್ಸು ಪಲ್ಟಿ, 20ಕ್ಕೂ ಹೆಚ್ಚು ಜನಕ್ಕೆ ಗಾಯ
ದಾವಣಗೆರೆ :ಚಾಲಕನ ಅತಿವೇಗ, ಅಜಾಗರೂಕತೆಯ ಚಾಲನೆಯಿಂದ ನಿಯಂತ್ರಣ ತಪ್ಪಿದ ಖಾಸಗಿ ಬಸ್ ಪಲ್ಟಿಯಾದ ಪರಿಣಾಮ ಮಕ್ಕಳು, ವಯೋವೃದ್ಧರು ಸೇರಿದಂತೆ 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡ ಘಟನೆ ನಗರದ ಹೊರ ವಲಯದ ಬೇತೂರು ಗ್ರಾಮದ ಬಳಿ ಸೋಮವಾರ ಬೆಳಿಗ್ಗೆ ಸಂಭವಿಸಿದೆ.
ನಗರದಿಂದ ಜಗಳೂರು ಕಡೆಗೆ ಸಾಗುತ್ತಿದ್ದ ಶ್ರೀಲಕ್ಷ್ಮಿ ಎಕ್ಸಪ್ರೆಸ್(shri lakshmi express bus) ಹೆಸರಿನ ಖಾಸಗಿ ಬಸ್ಸು ಬೇತೂರು ಬಳಿ ಹಳ್ಳದ ಸೇತುವೆಯನ್ನು ದಾಟುವ ವೇಳೆ ಚಾಲಕನ ಅತಿ ವೇಗ, ಅಜಾ ಗರೂಕತೆಯ ಚಾಲನೆಯಿಂದಾಗಿ ಸೇತುವೆಗೆ ಡಿಕ್ಕಿ ಹೊಡೆದು, ಪಲ್ಪಿಯಾಗಿದೆ. ಅದೃಷ್ಟವಶಾತ್ ಪುಟ್ಟಸೇತುವೆಗೆ ಬಸ್ಸು ಪಲ್ಟಿಯಾಗಿ ನಿಂತಿದ್ದು, ಸಮೀಪದಲ್ಲೇ ಇದ್ದ ವಿದ್ಯುತ್ ಮಾರ್ಗಕ್ಕೆ ತಗುಲಿದ್ದರೆ ದೊಡ್ಡ ಮಟ್ಟದ ಅನಾಹುತ, ಸಾವು, ನೋವು ಸಂಭವಿಸುವ ಸಾಧ್ಯತೆ ಇತ್ತು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಕಾರಿಗೆ ಡಿಕ್ಕಿ ಹೊಡೆದು ಕಾಂಪೌಂಡ್‌ಗೆ ಗುದ್ದಿದ್ದ ಕೇರಳ ಸಾರಿಗೆ ಬಸ್: ಭಯಾನಕ ದೃಶ್ಯ ಕ್ಯಾಮರಾದಲ್ಲಿ ಸೆರೆ
ಬಸ್ಸು ಬಲ್ಟಿಯಾಗುತ್ತಿದ್ದಂತೆ ಒಳಗಿದ್ದ ಚಾಲಕರು, ನಿರ್ವಾಹಕರು, ಮಕ್ಕಳು, ಮಹಿಳೆಯರು, ವಯೋವೃದ್ಧರು ತಮ್ಮ ಜೀವವೇ ಹೋದಂತಾಗಿ, ಜೋರಾಗಿ ಕೂಗಿಕೊಂಡಿದ್ದಾರೆ. ದಾರಿ ಹೋಕ ವಾಹನಗಳು, ಬೇತೂರು ಗ್ರಾಮಸ್ಥರು ತಕ್ಷಣವೇ ಸ್ಥಳಕ್ಕೆ ಧಾವಿಸಿ, ಗಾಯಾಳುಗಳನ್ನು ರಕ್ಷಿಸಿ, ಆಸ್ಪತ್ರೆಗೆ ಕಳಿಸುವ ವ್ಯವಸ್ಥೆ ಮಾಡಿದ್ದಾರೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಕೆಲವರಿಗೆ ತೀವ್ರ ಪೆಟ್ಟುಗಳಾಗಿದ್ದು, ಮತ್ತಷ್ಟುಜನರಿಗೆ ರಕ್ತಗಾಯವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮುಂದಿನ ಕ್ರಮ ಕೈಗೊಂಡಿದ್ದಾರೆ.