ಮುಚ್ಚಿದ ಇಂದಿರಾ ಕ್ಯಾಂಟೀನ್‌ ಮುಂದೆ ಉಪ್ಪಿಟ್ಟು ಹಂಚಿದ ಕಾಂಗ್ರೆಸ್‌

By Kannadaprabha News  |  First Published Mar 14, 2023, 6:14 AM IST

ಹನುಮಂತನಗರ ಇಂದಿರಾ ಕ್ಯಾಂಟೀನ್‌ ಬಳಿ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ವಿಧಾನ ಪರಿಷತ್‌ ಸದಸ್ಯ ಯು.ಬಿ.ವೆಂಕಟೇಶ್‌, ಮುಖಂಡ ಶಂಕರ್‌ ಗುಹಾ ಸೇರಿದಂತೆ ಹಲವು ಕಾರ್ಯಕರ್ತರು ಇಂದಿರಾ ಕ್ಯಾಂಟೀನ್‌ ಮುಚ್ಚಿರುವ ಬಗ್ಗೆ ಪ್ರತಿಭಟನೆ ನಡೆಸಿದರು.


ಬೆಂಗಳೂರು(ಮಾ.14):  ಬಸವನಗುಡಿ ಕ್ಷೇತ್ರದ ಹನುಮಂತನಗರದ ಇಂದಿರಾ ಕ್ಯಾಂಟೀನ್‌ ಮುಚ್ಚಿರುವ ಸರ್ಕಾರದ ನಿರ್ಧಾರ ಖಂಡಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಉಚಿತವಾಗಿ ಆಹಾರ ವಿತರಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದ್ದು, ಕ್ಯಾಂಟೀನ್‌ ಪುನರ್‌ ಆರಂಭ ಮಾಡದಿದ್ದರೆ ಕಾಂಗ್ರೆಸ್‌ ಪಕ್ಷದಿಂದಲೇ ಉಚಿತ ಆಹಾರ ವಿತರಿಸುವುದಾಗಿ ಘೋಷಿಸಿದ್ದಾರೆ.

ಹನುಮಂತನಗರ ಇಂದಿರಾ ಕ್ಯಾಂಟೀನ್‌ ಬಳಿ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ವಿಧಾನ ಪರಿಷತ್‌ ಸದಸ್ಯ ಯು.ಬಿ.ವೆಂಕಟೇಶ್‌, ಮುಖಂಡ ಶಂಕರ್‌ ಗುಹಾ ಸೇರಿದಂತೆ ಹಲವು ಕಾರ್ಯಕರ್ತರು ಇಂದಿರಾ ಕ್ಯಾಂಟೀನ್‌ ಮುಚ್ಚಿರುವ ಬಗ್ಗೆ ಪ್ರತಿಭಟನೆ ನಡೆಸಿದರು.

Tap to resize

Latest Videos

ಕಾಂಗ್ರೆಸ್‌ ತಂದ ಯೋಜನೆ ಬಿಜೆಪಿ ಬಂದ್‌ ಮಾಡುತ್ತಿದೆ: ಯು.ಟಿ.ಖಾದರ್‌

ಇದೇ ವೇಳೆ ಕ್ಯಾಂಟೀನನ್ನು ಅವಲಂಬಿಸಿರುವ ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಸ್ವತಃ ಆಹಾರವನ್ನು ಉಚಿತವಾಗಿ ನೀಡಿದರು. ತನ್ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ರಾಮಲಿಂಗಾರೆಡ್ಡಿ, ಕಾಂಗ್ರೆಸ್‌ ಪಕ್ಷ ಬಡವರಿಗಾಗಿ ಇಂದಿರಾ ಕ್ಯಾಂಟೀನ್‌ ಮಾಡಿತ್ತು. ಶ್ರಮಿಕರು, ದುರ್ಬಲ ವರ್ಗದವರಿಗೆ ಇದು ಅತ್ಯುತ್ತಮ ಆಸರೆಯಾಗಿದೆ. ಕೊರೋನಾ ಕಾಲದಲ್ಲಿ ತುತ್ತು ಅನ್ನಕ್ಕಾಗಿ ಪರದಾಡಬೇಕಾಗಿ ಬಂದಾಗ ಇದು ಹೊಟ್ಟೆತುಂಬಿಸಿದೆ. ಇಂತಹ ಇಂದಿರಾ ಕ್ಯಾಂಟೀನ್‌ಗಳನ್ನು ಮುಚ್ಚುವ ಮೂಲಕ ಬಡರ ಹೊಟ್ಟೆಮೇಲೆ ಹೊಡೆಯುತ್ತಿರುವ ಬಿಜೆಪಿಯವರು ಅಂತೂ ಸ್ವರ್ಗಕ್ಕೆ ಹೋಗುವುದಿಲ್ಲ ಎಂದು ಕಿಡಿ ಕಾರಿದರು.
ಬಿಜೆಪಿಯ ಅಧಿಕಾರಕ್ಕೆ ಬಂದ ಮೇಲೆ ಇಂದಿರಾ ಕ್ಯಾಂಟೀನ್‌ಗಳ ವಿದ್ಯುತ್‌, ಬಾಡಿಗೆ ಕಟ್ಟಿಲ್ಲ. 30ಕ್ಕೂ ಹೆಚ್ಚು ಕ್ಯಾಂಟೀನ್‌ಗಳನ್ನು ಉದ್ದೇಶಪೂರ್ವಕವಾಗಿ ಮುಚ್ಚಿವೆ. ಇದೀಗ ಕಳೆದ ಎರಡು ದಿನಗಳಿಂದ ಹನುಮಂತನಗರ ಕ್ಯಾಂಟೀನನ್ನು ಮುಚ್ಚಲಾಗಿದೆ. ಸರ್ಕಾರ ಪುನರ್‌ ಆರಂಭ ಮಾಡದಿದ್ದರೆ ನಮ್ಮ ಕಾರ್ಯಕರ್ತರೇ ಆಹಾರ ಹಂಚಿಕೆ ಮಾಡುತ್ತಾರೆ ಎಂದು ಹೇಳಿದರು.

click me!