ಕದ್ದ ಲಾರಿ ಮಾಡಿ ಕೊಟ್ಯಂತರ ರು ಆಸ್ತಿ ಸಂಪಾದನೆ

By Kannadaprabha NewsFirst Published Sep 4, 2021, 9:11 AM IST
Highlights
  • ನಿಲ್ಲಿಸಿದ್ದ ಲಾರಿಗಳನ್ನು ಕದ್ದು  ಬೇರೆ ನಂಬರ್‌ ಪ್ಲೇಟ್ ಅಳವಡಿಸಿ ಮಾರುತ್ತಿದ್ದ ಗ್ಯಾಂಗ್
  • ಕಾಮಾಕ್ಷಿಪಾಳ್ಯ ಪೊಲೀಸರ ಬಲೆಗೆ ಬಿದ್ದಿದ್ದು ನಾಲ್ವರ ಬಂಧನ

ಬೆಂಗಳೂರು (ಸೆ.04): ನಿಲ್ಲಿಸಿದ್ದ ಲಾರಿಗಳನ್ನು ಕದ್ದು  ಬೇರೆ ನಂಬರ್‌ ಪ್ಲೇಟ್ ಅಳವಡಿಸಿ ಮಾರುತ್ತಿದ್ದ ಗ್ಯಾಂಗ್ ಒಂದು ಕಾಮಾಕ್ಷಿಪಾಳ್ಯ ಪೊಲೀಸರ ಬಲೆಗೆ ಬಿದ್ದಿದೆ. ಶಿವಮೊಗ್ಗ ಮೂಲದ ನಿಹಾಲ್ ಅಲಿಯಾಸ್ ಇರ್ಫಾನ್,  ಭಾಸ್ಕರ್, ಶಾಹಿದ್, ಹಿದಾಯತ್ ಬಂಧಿತರು.  ಆರೋಪಿಗಳಿಂದ 1.5 ಕೋಟಿ ಬೆಲೆ ಬಾಳುವ 9 ಲಾರಿ ಕಾರು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 

ಆರೋಪಿ ನಿಹಾಲ್ ಈ ದಂಧೆಯ ಕಿಂಗ್‌ ಪಿನ್ ಆಗಿದ್ದು ಕಳೆದ 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಅಂತರಾಜ್ಯ ವಾಹನ ಕಳ್ಳನಾಗಿರುವ ನಿಹಾಲ್ ಕದ್ದ ವಾಹನ ಮಾರಾಟ ಮಾಡಲೆಂದೆ ದೇಶದ ವಿವಿಧೆಡೆ ಹಲವು ಗ್ಯಾಂಗ್‌ ಕಟ್ಟಿಕೊಂಡಿದ್ದ. ರಸ್ತೆ ಅಪಘಾತವಾಗಿರುವ ಗುಜರಿಗೆ ಬಂದಿರುವ ವಾಹನಗಳ ನಂಬರ್‌ ಹಾಗು ಜಾಸಿಸ್ ನಂಬರ್ ತೆಗೆದು ಕದ್ದ ವಾಹನಗಳಿಗೆ ಅಳವಡಿಸಿ ಇನ್ಸೂರನ್ಸ್ ಕಂಪನಿ ಜೊತೆ ಸೇರಿ ವಾಹನಗಳಿಗೆ ನೈಜ ದಾಖಲೆ ಮಾಡಿ ಮಾರುತ್ತಿದ್ದ.  ಕಡಿಮೆ ಬೆಲೆಗೆ ಸೂಕ್ತ ದಾಖಲೆ ಹೊಂದಿರುವ ವಾಹನಗಳು ಸಿಗುತ್ತಿದ್ದ ಹಿನ್ನೆಲೆ ಹಲವಾರು ಮಂದಿ ನಿಹಾಲ್‌ನಿಂದ ವಾಹನ ಖರೀದಿಸಿದ್ದರು. 

ಸಬ್ಜಿ ತಡ ಮಾಡಿದ್ದಕ್ಕೆ ಹೋಟೆಲ್ ಮಾಲೀಕನಿಗೆ ಸ್ವಿಗ್ಗಿ ಬಾಯ್ ಗುಂಡಿಕ್ಕಿದ!

ಈ ದಂಧೆಯಲ್ಲಿ ನಿಹಾಲ್ ಕೊಟ್ಯಂತರ ಅಕ್ರಮ ಹಣ ಸಂಪಾದಿಸಿದ್ದ. ಹಲವೆಡೆ ಕೊಟ್ಯಂತರ ರು ಆಸ್ತಿ ಹೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

2010ರಲ್ಲಿ ನಿಹಾಲ್‌ನಿಂದ ಸಿಸಿಬಿ ಪೊಲೀಸರು 40 ವಾಹನ ಜಪ್ತಿ ಮಾಡಿದ್ದರು.  ಕೃತ್ಯಕ್ಕೆ ಈತನ ಸಹೋದರ ಅಕ್ರಮ್ ಅಲಿಯಾಸ್ ವಿಕ್ರಮ್ ಸಹ ಸಾತ್ ಕೊಟ್ಟಿದ್ದ. ಸಹೋದರರ ಬಗ್ಗೆ ಪೊಲೀಸರಿಗೆ ಮಾಹಿತಿ ಕೊಟ್ಟ ವ್ಯಕ್ತಿಯನ್ನು 2011ರಲ್ಲಿ ಅಕ್ರಮ ಹತ್ಯೆ ಮಾಡಿದ್ದ. ಈ ಪ್ರಕರಣಕ್ಕೆ ಸಿಸಿಬಿ ಪೊಲೀಸರು ಅಕ್ರಮ್‌ನನ್ನು ಎನ್‌ಕೌಂಟರ್ ಮಾಡಿದ್ದರು. ಇದಾದ ಬಳಿಕ ನಿಹಾಲ್ ಯಾರ ಕೈಗೂ ಸಿಕ್ಕಿರಲಿಲ್ಲ.  ಇದೀಗ ಈತನ ಕೃತ್ಯ ಬೆಳಕಿಗೆ ಬಂದಿದೆ.

click me!