ತಬ್ಲಿಘ್ ಜಮಾತ್‌ಗೆ ಹೋಗಿದ್ದ 9 ಜನ ಗ್ರೀನ್ ಝೋನ್ ಶಿವಮೊಗ್ಗಕ್ಕೆ ವಾಪಾಸ್

By Suvarna News  |  First Published May 9, 2020, 4:00 PM IST

ರಾಜ್ಯ ಮತ್ತು ದೇಶಾದ್ಯಂತ ತಬ್ಲಿಘಿಗಳು ತಂದಿಟ್ಟ ಆತಂಕ ಎಲ್ಲರಿಗೂ ತಿಳಿದೇ ಇದೆ. ಇನ್ನೂ ತಬ್ಲಿಘಿ ಸೋಂಕು ಪರಿಣಾಮ ಮುಗಿದಿಲ್ಲ. ಈ ನಡುವೆಯೇ ತಬ್ಲಿಘಿ ಜಮಾತ್‌ನಲ್ಲಿ ಭಾಗಿಯಾಗಿದ್ದ 9 ಜನರು ಶಿವಮೊಗ್ಗಕ್ಕೆ ಮರಳಿದ್ದಾರೆ.


ಶಿವಮೊಗ್ಗ(ಮೇ 09): ರಾಜ್ಯ ಮತ್ತು ದೇಶಾದ್ಯಂತ ತಬ್ಲಿಘಿಗಳು ತಂದಿಟ್ಟ ಆತಂಕ ಎಲ್ಲರಿಗೂ ತಿಳಿದೇ ಇದೆ. ಇನ್ನೂ ತಬ್ಲಿಘಿ ಸೋಂಕು ಪರಿಣಾಮ ಮುಗಿದಿಲ್ಲ. ಈ ನಡುವೆಯೇ ತಬ್ಲಿಘಿ ಜಮಾತ್‌ನಲ್ಲಿ ಭಾಗಿಯಾಗಿದ್ದ 9 ಜನರು ಶಿವಮೊಗ್ಗಕ್ಕೆ ಮರಳಿದ್ದಾರೆ.

ತಬ್ಲಿಘಿ ಜಮಾತ್‌ಗೆ ಹೋಗಿದ್ದ 9 ಜನರು ಇಂದು ಶಿವಮೊಗ್ಗಕ್ಕೆ ವಾಪಾಸ್ ಆಗಿದ್ದಾರೆ.  ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಸ್ಟೇಡಿಯಂನಲ್ಲಿ ವೈದ್ಯಕೀಯ ತಪಾಸಣೆ ನಡೆಸಲು ವ್ಯವಸ್ಥೆ ಮಾಡಲಾಗಿದೆ.

Tap to resize

Latest Videos

ರಂಝಾನ್ ರೋಝಾ ಮಾಡೋಕೆ ಬಿಡಿ ಎಂದ ಸೋಂಕಿತರು..!

ಗುಜರಾತ್‌ನ ಅಹಮದಾಬಾದ್‌ಗೆ ತೆರಳಿದ್ದ ಜಿಲ್ಲೆಯ 9 ಜನರನ್ನು ನಗರದ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಪೊಲೀಸರು ತಡೆದು, ವೈದ್ಯಕೀಯ ತಪಾಸಣೆ ನಡೆಸಿದ್ದಾರೆ. ಮಾರ್ಚ್ 5 ರಂದು ದಾವಣಗೆರೆಯಿಂದ ರೈಲಿನ ಮೂಲಕ ಅಹಮದಾಬಾದ್‌ನ ಗುಜರಾತ್‌ಗೆ ತೆರಳಿದ್ದರು.

ಜಮಾತ್‌ನಲ್ಲಿ ಭಾಗವಹಿಸಿದ ಬಳಿಕ ಮಸೀದಿಯಲ್ಲಿ ಆಶ್ರಯ ಪಡೆದಿದ್ದ 9 ಜನರನ್ನು ಲಾಕ್ಕ್‌ಡೌನ್  ಹಿನ್ನೆಲೆ ಗುಜರಾತ್ ಸರ್ಕಾರ ಕ್ವಾರಂಟೈನ್‌ನಲ್ಲಿ ಇರಿಸಿತ್ತು. ಗುಜರಾತ್ ಸರ್ಕಾರದ ಅನುಮತಿ ಮೇರೆಗೆ ಇವರನ್ನು ಶಿವಮೊಗ್ಗಕ್ಕೆ ವಾಪಾಸ್ ಕಳುಹಿಸಲಾಗಿದೆ.

ತುಮಕೂರಿನ ಪಾವಗಡದಲ್ಲೂ ತಬ್ಲೀಘಿ ಟೆನ್ಷನ್; ಕ್ವಾರಂಟೈನ್‌ಗೆ ಸ್ಥಳೀಯರ ವಿರೋಧ..!

ಅಹಮದಾಬಾದ್-ಮುಂಬೈ ಬೆಳಗಾವಿ ಗಡಿಯ ಮೂಲಕ ಶಿವಮೊಗ್ಗ ನಗರಕ್ಕೆ ತಲುಪಿರುವ ಇವರುಗಳಿಗೆ ಸ್ಕ್ರೀನಿಂಗ್ ನಡೆಸಿ ವೈದ್ಯಕೀಯ ಪರೀಕ್ಷೆಯನ್ನ ಜಿಲ್ಲಾಡಳಿತ ನಡೆಸುತ್ತಿದೆ. 9 ಜನರಲ್ಲಿ ಶಿಕಾರಿಪುರ ತಾಲೂಕಿನವರೇ ಹೆಚ್ಚಿನ ಜನರಿದ್ದಾರೆ ಎನ್ನಲಾಗಿದೆ.

click me!