ಸೋಂಕಿತ ವ್ಯಕ್ತಿ ಶಿರಾ ನಗರಕ್ಕೆ ಬಂದಿರುವುದು ನಮಗೆ ಮೇ 05 ರಂದು ಗೊತ್ತಾಗಿತ್ತು| ಆತನನ್ನ ಶಿರಾದ ಹಾಸ್ಟೆಲ್ ನಲ್ಲಿ ಐಸೋಲೇಟ್ ಮಾಡಲಾಗಿತ್ತು| ಆತನ ಸ್ವ್ಯಾಬ್ ಕಲೆಕ್ಟ್ ಮಾಡಿ ಲ್ಯಾಬ್‌ಗೆ ಕಳುಹಿಸಲಾಗಿತ್ತು| ಶಿರಾ ನಗರದಲ್ಲಿ ಕಂಟೈನ್ಮೆಂಟ್ ಜೋನ್ ಹೊರತು ಪಡಿಸಿ ಉಳಿದೆಲ್ಲೆಡೆ ಮಾಮೂಲಿನಿಂತೆ ಇರಲಿದೆ|
ತುಮಕೂರು(ಮೇ.09): P-764 ವ್ಯಕ್ತಿಗೆ ಇಂದು ಕೊರೋನಾ ಸೋಂಕು ದೃಢಪಟ್ಟಿದೆ. ಸೋಂಕಿತ ವ್ಯಕ್ತಿ ಬೆಂಗಳೂರಿನ ಪಾದರಾಯನಪುರದ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಸೋಂಕು ತಗುಲಿರಬಹುದು. ಇದರ ಬಗ್ಗೆ ಇನ್ನೂ ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಹೇಳಿದ್ದಾರೆ.
ಇಂದು(ಶನಿವಾರ) ಈ ಬಗ್ಗೆ ಮಾಹಿತಿ ನೀಡಿದ ಅವರು, ಸೋಂಕಿತ ವ್ಯಕ್ತಿ ಮೇ 4 ರ ಸಾಯಂಕಾಲ ಶಿರಾ ನಗರಕ್ಕೆ ಖಾಸಗಿ ವಾಹನದಲ್ಲಿ ಬಂದಿದ್ದಾನೆ. ಸೋಂಕಿತನ ಮಗ ಬೆಂಗಳೂರಿಗೆ ಹೋಗಿ ಕರೆದುಕೊಂಡು ಬಂದಿದ್ದಾನೆ. ಇವರು ಯಾವ ರೀತಿ ಹೋಗಿ ಕರೆದುಕೊಂಡು ಬಂದರು ಎಂಬುದರ ಎಸ್ಪಿ ಅವರು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ತುಮಕೂರಿನ ಪಾವಗಡದಲ್ಲೂ ತಬ್ಲೀಘಿ ಟೆನ್ಷನ್; ಕ್ವಾರಂಟೈನ್‌ಗೆ ಸ್ಥಳೀಯರ ವಿರೋಧ..!
ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಶಿರಾ ನಗರದಲ್ಲಿ 100 ಮೀ ಕಂಟೈನ್ಮೆಂಟ್ ಜೋನ್ ಮಾಡಲಾಗುತ್ತಿದೆ. ಸೋಂಕಿತ ವ್ಯಕ್ತಿ ಶಿರಾ ನಗರಕ್ಕೆ ಬಂದಿರುವುದು ನಮಗೆ ಮೇ 05 ರಂದು ಗೊತ್ತಾಗಿತ್ತು. ಬಳಿಕ ಆತನನ್ನ ಶಿರಾದ ಹಾಸ್ಟೆಲ್ ನಲ್ಲಿ ಐಸೋಲೇಟ್ ಮಾಡಲಾಗಿತ್ತು. ಆತನ ಸ್ವ್ಯಾಬ್ ಕಲೆಕ್ಟ್ ಮಾಡಿ ಲ್ಯಾಬ್‌ಗೆ ಕಳುಹಿಸಲಾಗಿತ್ತು. ಶಿರಾ ನಗರದಲ್ಲಿ ಕಂಟೈನ್ಮೆಂಟ್ ಜೋನ್ ಹೊರತು ಪಡಿಸಿ ಉಳಿದೆಲ್ಲೆಡೆ ಮಾಮೂಲಿನಿಂತೆ ಇರಲಿದೆ ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.