ಕೊಪ್ಪಳ: ಕ್ರೀಡಾ ಕೂಟದ ವೇಳೆ ಹೆಜ್ಜೇನು ದಾಳಿ, 8 ಮಕ್ಕಳಿಗೆ ಗಂಭಿರ ಗಾಯ..!

By Girish Goudar  |  First Published Aug 30, 2024, 8:05 PM IST

ಕಿತ್ತೂರು ಚನ್ನಮ್ಮ ವಸತಿ ಶಾಲೆಯ ಆವರಣದಲ್ಲಿ ಕ್ರೀಡಾಕೂಟ ನಡೆದಿತ್ತು. ಈ ವೇಳೆ ಹೆಜ್ಜೇನು ದಾಳಿ ಮಾಡಿವೆ. ಘಟನೆಯಲ್ಲಿ 8 ಮಕ್ಕಳಿಗೆ ಗಂಭಿರವಾಗಿ ಗಾಯಗೊಂಡಿದ್ದಾರೆ.  


ಕೊಪ್ಪಳ(ಆ.30):  ಶಾಲಾ ಮಕ್ಕಳ ಕ್ರೀಡಾ ಕೂಟದ ವೇಳೆ ಹೆಜ್ಜೇನು ದಾಳಿ ಮಾಡಿದ ಪರಿಣಾಮ 8 ಮಕ್ಕಳಿಗೆ ಗಂಭಿರವಾದ ಗಾಯಗಳಾದ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿ ಇಂದು(ಶುಕ್ರವಾರ) ನಡೆದಿದೆ. 

40 ಕ್ಕೂ ಹೆಚ್ಚು ಮಕ್ಕಳ ಮೇಲೆ ಹೆಜ್ಜೇನು ದಾಳಿ ನಡೆಸಿವೆ. ಪಟ್ಟಣ ಪಂಚಾಯ್ತಿ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾ ಕೂಟದ ವೇಳೆ ಘಟನೆ ನಡೆದಿದೆ.  ಕಿತ್ತೂರು ಚನ್ನಮ್ಮ ವಸತಿ ಶಾಲೆಯ ಆವರಣದಲ್ಲಿ ಕ್ರೀಡಾಕೂಟ ನಡೆದಿತ್ತು. ಈ ವೇಳೆ ಹೆಜ್ಜೇನು ದಾಳಿ ಮಾಡಿವೆ. ಘಟನೆಯಲ್ಲಿ 8 ಮಕ್ಕಳಿಗೆ ಗಂಭಿರವಾಗಿ ಗಾಯಗೊಂಡಿದ್ದಾರೆ.  

Tap to resize

Latest Videos

undefined

ಶವ ಸಂಸ್ಕಾರಕ್ಕೆ ತೆರಳಿದ್ದವರ ಮೇಲೆ ಹೆಜ್ಜೇನು ದಾಳಿ; 40ಕ್ಕೂ ಅಧಿಕ ಮಂದಿ ಗಾಯ!

ಗಾಯಗೊಂಡ ಮಕ್ಕಳನ್ನ ತಾವರಗೇರಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕ್ರೀಡಾಕೂಟ ನಡೆಯುವ ಮೈದಾನದ ಬೇವಿನ ಮರದಲ್ಲಿ ಹೆಜ್ಜೇನು ಕಟ್ಟಿತ್ತು. ತಾವರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

click me!