ಹೊಸಕೋಟೆ: ನಾಡಬಾಂಬ್ ಸುತ್ತುವಾಗ ಸ್ಫೋಟ, ಯುವಕನ ಸಾವು, ತಂದೆಗೆ ಗಾಯ..!

By Girish Goudar  |  First Published Aug 30, 2024, 6:58 PM IST

ಸ್ಫೋಟದ ತೀವ್ರತೆಗೆ ದೇಹ ಛಿದ್ರ ಛಿದ್ರವಾಗಿದೆ. ನಾಡ ಬಾಂಬ್‌ ಸುತ್ತುವಾಗ ಸ್ಫೋಟಗೊಂಡ ಪರಿಣಾಮ ಪವನ್  ಮೃತಪಟ್ಟಿದ್ದಾನೆ. ಸ್ಫೋಟದ ತೀವ್ರತೆಗೆ ಮನೆಯ ಛಾವಣಿಯಲ್ಲಿ ಛಿದ್ರವಾಗಿದೆ. ಮನೆಗೂ ತೀವ್ರ ಹಾನಿ ಸಂಭವಿಸಿದೆ. 


ಹೊಸಕೋಟೆ(ಆ.30):  ನಾಡಬಾಂಬ್ ಸುತ್ತುವಾಗ ಸ್ಫೋಟಗೊಂಡ ಪರಿಣಾಮ ಸ್ಥಳದಲ್ಲೇ ಮಗ ಸಾವನ್ನಪ್ಪಿದ್ದು, ತಂದೆಗೆ ಗಂಭೀರವಾದ ಗಾಯಗಳಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ದೊಡ್ಡನಲ್ಲಳಾ ಗ್ರಾಮದ ಬಳಿ ಇಂದು(ಶುಕ್ರವಾರ) ನಡೆದಿದೆ. 

ಸ್ಫೋಟದ ತೀವ್ರತೆಗೆ ದೇಹ ಛಿದ್ರ ಛಿದ್ರವಾಗಿದೆ. ನಾಡ ಬಾಂಬ್‌ ಸುತ್ತುವಾಗ ಸ್ಫೋಟಗೊಂಡ ಪರಿಣಾಮ ಪವನ್(18)  ಮೃತಪಟ್ಟಿದ್ದಾನೆ. ಸ್ಫೋಟದ ತೀವ್ರತೆಗೆ ಮನೆಯ ಛಾವಣಿಯಲ್ಲಿ ಛಿದ್ರವಾಗಿದೆ. ಮನೆಗೂ ತೀವ್ರ ಹಾನಿ ಸಂಭವಿಸಿದೆ. ಪವನ್ ತಂದೆ ನಾಗೇಶ್ ಗೆ ಗಂಭೀರವಾದ ಗಾಯ‌ವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. 

Tap to resize

Latest Videos

undefined

ಸಿದ್ದರಾಮಯ್ಯರಿಂದ ಮಾತ್ರ ದಲಿತರ ಅಭಿವೃದ್ಧಿ ಸಾಧ್ಯ: ಶಾಸಕ ಶರತ್ ಬಚ್ಚೇಗೌಡ

ಘಟನಾ ಸ್ಥಳಕ್ಕೆ ಹೊಸಕೋಟೆ ಪೊಲೀಸರು ಹಾಗೂ ಅಡಿಷನಲ್ ಎಸ್ಪಿ  ನಾಗರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡಿವೈಎಸ್ಪಿ ಶಂಕರ್ ಗೌಡ ಅಣ್ಣ ಸಾಹೇಬ್ ಪಾಟೀಲ್ ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಕಾಡುಹಂದಿ ಬೇಟೆಗೆ ಬಳಸಲ್ಪಡುವ ಸ್ಫೋಟಕನಾ? ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

click me!