ಮರಳೇಕಾಯಿ ತಿಂದು 8 ಮಕ್ಕಳು ತೀವ್ರ ಅಸ್ವಸ್ಥ! ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲು!

By Ravi Janekal  |  First Published Jul 7, 2024, 11:08 PM IST

ಮರಳೇಕಾಯಿ ತಿಂದು 8ಕ್ಕೂ ಅಧಿಕ ಮಕ್ಕಳು ತೀವ್ರ ಅಸ್ವಸ್ಥಗೊಂಡ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಉಪ್ಪಾರದೊಡ್ಡಿ ಗ್ರಾಮದಲ್ಲಿ ನಡೆದಿದೆ. ಸೃಜನ್ (11), ಜ್ಞಾನವಿ (9) , ಸಿಂಚನ (5), ಆಷಿಕಾ (6), ಭುವನೇಶ್ವರಿ (7), ಚರಣ (9), ಧ್ರುವಚರಣ್ (9) , ಚಂದ್ರ (7) ಅಸ್ವಸ್ಥಗೊಂಡ ಮಕ್ಕಳು.


ಮಂಡ್ಯ (ಜು.7) ಮರಳೇಕಾಯಿ ತಿಂದು 8ಕ್ಕೂ ಅಧಿಕ ಮಕ್ಕಳು ತೀವ್ರ ಅಸ್ವಸ್ಥಗೊಂಡ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಉಪ್ಪಾರದೊಡ್ಡಿ ಗ್ರಾಮದಲ್ಲಿ ನಡೆದಿದೆ.

ಸೃಜನ್ (11), ಜ್ಞಾನವಿ (9) , ಸಿಂಚನ (5), ಆಷಿಕಾ (6), ಭುವನೇಶ್ವರಿ (7), ಚರಣ (9), ಧ್ರುವಚರಣ್ (9) , ಚಂದ್ರ (7) ಅಸ್ವಸ್ಥಗೊಂಡ ಮಕ್ಕಳು.

Latest Videos

undefined

ಇಂದು ಸಂಜೆ 5 ಗಂಟೆ ಸುಮಾರಿಗೆ ಮನೆ ಮುಂದೆ ಆಟವಾಡುತ್ತಿದ್ದ ಮಕ್ಕಳ. ಆಟವಾಡುವಾಗ ಮನೆಯೊಂದರ ಹಿಂದೆ ಹೋಗಿದ್ದಾರೆ. ಅಲ್ಲಿ ಕಾಣಿಸಿದ ಮರಳೇಕಾಯಿ ಗಿಡ ನೋಡಿದ ಮಕ್ಕಳು ಕಾಯಿ ತಿಂದಿದ್ದಾರೆ. ಕಾಯಿ ತಿಂದ ಕೂಡಲೇ ಸ್ಥಳದಲ್ಲಿ ವಾಂತಿ ಮಾಡಿಕೊಂಡು ಅಸ್ವಸ್ಥಗೊಂಡ ಮಕ್ಕಳು. ಕೂಡಲೇ ಮಕ್ಕಳನ್ನ ಮದ್ದೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದ ಪೋಷಕರು. ಪ್ರಾಥಮಿಕ ಚಿಕಿತ್ಸೆ ನೀಡಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನಿಸಿದ ವೈದ್ಯರು.

ಕಮದಾಳ ಗ್ರಾಮದಲಿ ಚಿರತೆ ಹತ್ಯೆ ಪ್ರಕರಣ; ತನಿಖೆಗೆ ಆದೇಶಿಸಿದ ರಾಜ್ಯ ಸರ್ಕಾರ

ಸದ್ಯ ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಮಕ್ಕಳಿಗೆ ಚಿಕಿತ್ಸೆ ಮುಂದುವರಿದಿದೆ. ಮಕ್ಕಳ ಆರೋಗ್ಯ ಯಥಾಸ್ಥಿತಿಯಲ್ಲಿದೆ ಚಿಕಿತ್ಸೆಗೆ ಸ್ಪಂದಿಸುತ್ತಿರುವುದಾಗ ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ.

click me!