Asianet Suvarna News Asianet Suvarna News

ಕಮದಾಳ ಗ್ರಾಮದಲಿ ಚಿರತೆ ಹತ್ಯೆ ಪ್ರಕರಣ; ತನಿಖೆಗೆ ಆದೇಶಿಸಿದ ರಾಜ್ಯ ಸರ್ಕಾರ

ದೇವದುರ್ಗ ತಾಲೂಕಿನ ಕಮದಾಳು ಗ್ರಾಮದಲ್ಲಿ ಅರಣ್ಯ ಸಿಬ್ಬಂದಿ ಸಮ್ಮುಖದಲ್ಲೇ  ಗ್ರಾಮಸ್ಥರು ಚಿರತೆಯನ್ನ ಹತ್ಯೆ ಮಾಡಿದ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ತನಿಖೆಗೆ ಆದೇಶ ಮಾಡಿದೆ.

Leopard killing by kamdal villagers case karnataka government ordered an investigation rav
Author
First Published Jul 7, 2024, 10:40 PM IST | Last Updated Jul 8, 2024, 10:38 AM IST

ಬೆಂಗಳೂರು (ಜು.7): ದೇವದುರ್ಗ ತಾಲೂಕಿನ ಕಮದಾಳು ಗ್ರಾಮದಲ್ಲಿ ಅರಣ್ಯ ಸಿಬ್ಬಂದಿ ಸಮ್ಮುಖದಲ್ಲೇ  ಗ್ರಾಮಸ್ಥರು ಚಿರತೆಯನ್ನ ಹತ್ಯೆ ಮಾಡಿದ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ತನಿಖೆಗೆ ಆದೇಶ ಮಾಡಿದೆ. 

ಈ ಪ್ರಕರಣದಲ್ಲಿ ಗ್ರಾಮಸ್ಥರಿಗೆ ಚಿರತೆ ತೊಂದರೆ ಕೊಡುತ್ತಿದ್ದರೂ ಚಿರತೆ ಸೆರೆಹಿಡಿಯಲು ವಿಫಲವಾಗಿರುವುದು ಹಾಗೂ ಚಿರತೆ ಹತ್ಯೆ ತಡೆಯುವಲ್ಲಿ ವಿಫಲವಾಗಿದೆ. ಅರಣ್ಯ ಸಿಬ್ಬಂದಿ ನಿರ್ಲಕ್ಷ್ಯ ಆರೋಪ ಕೇಳಿಬಂದ ಹಿನ್ನೆಲೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ತನಿಖೆ ಆದೇಶಿಸಿದ್ದಾರೆ.

ಮೂವರ ಮೇಲೆ ದಾಳಿ ನಡೆಸಿದ್ದ ಚಿರತೆ; ಕಂಡ ಕ್ಷಣವೇ ಅಟ್ಟಾಡಿಸಿ ಕೊಚ್ಚಿ ಕೊಂದ ಗ್ರಾಮಸ್ಥರು!

ಘಟನೆ ಹಿನ್ನೆಲೆ

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕಮದಾಳ ಗ್ರಾಮದ ಬೆಟ್ಟದಲ್ಲಿ ಕಾಣಿಸಿಕೊಂಡ ಚಿರತೆ. ಚಿರತೆ ಪ್ರತ್ಯಕ್ಷವಾದ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದ ಗ್ರಾಮಸ್ಥರು. ಆದರೆ ಚಿರತೆ ಸೆರೆಹಿಡಿಯುವಲ್ಲಿ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮೂವರು ರೈತರ ಮೇಲೆ ಚಿರತೆ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದೆ. ಇದರಿಂದ ಕಮದಾಳ ಗ್ರಾಮಸ್ಥರು ಸುತ್ತಮುತ್ತಲಿನ ಹಳ್ಳಿಗಳಿಂದ ಸಾವಿರಾರು ಜನರು ಚಿರತೆ ಹಿಡಿಯಲು ಬೆಟ್ಟ ಹತ್ತಿದ್ದಾರೆ.

ಬೆಟ್ಟದಲ್ಲಿ ಚಿರತೆ ಕಾಣಿಸುತ್ತಿದ್ದಂತೆ ಅಕ್ರೋಶಗೊಂಡು ಕಲ್ಲು ಬಡಿಗೆಗಳನ್ನು ಹಿಡಿದು ಏಕಕಾಲಕ್ಕೆ ಚಿರತೆಮೇಲೆ ಮುಗಿಬಿದ್ದ ಹಲ್ಲೆ ಮಾಡಿರುವ ಗ್ರಾಮಸ್ಥರು. ಅರಣ್ಯ ಸಿಬ್ಬಂದಿ, ಪೊಲೀಸರ ಮುಂದೆಯೇ ಚಿರತೆಮೇಲೆ ದಾಳಿ ನಡೆಸಿ ಹೊಡೆದು ಕೊಂದ ಗ್ರಾಮಸ್ಥರು ಬಳಿಕ ಅಂಬುಲೆನ್ಸ್‌ಗೆ ಎಸೆದಿದ್ದಾರೆ. ಘಟನೆಯ ವಿಡಿಯೋ ವೈರಲ್ ಆಗಿದ್ದ ಪ್ರಾಣಿ್ಪ್ರಿಯರು ಆಕ್ರೋ ವ್ಯಕ್ತಪಡಿಸಿದ್ದಾರೆ.

Latest Videos
Follow Us:
Download App:
  • android
  • ios