ಮಂಡ್ಯ: ಸ್ಟೇರಿಂಗ್ ತುಂಡಾಗಿ ಹಳ್ಳಕ್ಕೆ ಉರುಳಿದ ಸಾರಿಗೆ ಬಸ್, 7 ಮಂದಿಗೆ ಗಾಯ

By Kannadaprabha News  |  First Published Jun 30, 2024, 5:15 AM IST

ಘಟನೆಯಲ್ಲಿ ಚಾಲಕ ಶೇಖರ್‌ನ ಕಾಲು ಮುರಿದಿದ್ದು, ನಿರ್ವಾಹಕ ರವಿಚಂದ್ರ, ದೀಪಕ್, ಭಾಸ್ಕರ್, ಅಭಿ, ಕುಶಾಲ್, ನಾಗರಾಜು ಸೇರಿ ಏಳು ಮಂದಿ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. 


ಮಂಡ್ಯ(ಜೂ.30):  ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನ ಸ್ಟೇರಿಂಗ್‌ ರಾಡ್‌ ತುಂಡಾಗಿ ಚಾಲಕನ ನಿಯಂತ್ರಣ ತಪ್ಪಿ ಬಸ್ಸು ಟೋಲ್ ಹೆದ್ದಾರಿಯಿಂದ ಸರ್ವೀಸ್ ರಸ್ತೆಗೆ ನುಗ್ಗಿ, ಹಳ್ಳಕ್ಕೆ ಬಿದ್ದು ಏಳುಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದ ಬಳಿ ನಡೆದಿದೆ. 

ಘಟನೆಯಲ್ಲಿ ಚಾಲಕ ಶೇಖರ್‌ನ ಕಾಲು ಮುರಿದಿದ್ದು, ನಿರ್ವಾಹಕ ರವಿಚಂದ್ರ, ದೀಪಕ್, ಭಾಸ್ಕರ್, ಅಭಿ, ಕುಶಾಲ್, ನಾಗರಾಜು ಸೇರಿ ಏಳು ಮಂದಿ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

Latest Videos

undefined

ಬ್ಯಾಡಗಿ ಅಪಘಾತ: ಅಂಧರ ಪುಟ್ಬಾಲ್ ಟೀಂ ನಾಯಕಿ ಬಲಿ..!

ಮಂಡ್ಯದಿಂದ ಮೈಸೂರಿನ ಕಡೆಗೆ ತೆರಳುತ್ತಿದ್ದ ಸಾರಿಗೆ ಬಸ್ ರಾಗಿಮುದ್ದನಹಳ್ಳಿ ಗ್ರಾಮದ ಟೋಲ್ ರಸ್ತೆಯಲ್ಲಿ ತೆರಳುವ ವೇಳೆ ಸ್ಟೇರಿಂಗ್ ರಾಡ್‌ ತುಂಡಾಗಿದೆ. ತಕ್ಷಣವೇ ಚಾಲಕ ಬಸ್ ನಿಯಂತ್ರಣ ತೆಗೆದುಕೊಳ್ಳಲು ಮುಂದಾಗಿದ್ದಾನೆ. ಬಸ್ ವೇಗದಲ್ಲಿದ್ದ ಕಾರಣ ಸರ್ವೀಸ್ ರಸ್ತೆಗೆ ಇಳಿದು ಹಳ್ಳಕ್ಕೆ ಬಿದ್ದಿದೆ. ಬಸ್ ನುಗ್ಗಿದ ರಭಸಕ್ಕೆ ಮುಂದೆ ಸಾಗುತ್ತಿದ್ದ ಕಾರು, ಮೂರು ಬೈಕ್‌ಗಳೂ ಜಖಂ ಆಗಿವೆ. ಈ ಘಟನೆ ಪಕ್ಕದಲ್ಲಿದ್ದ ಕಾರದ ಪುಡಿ ಕಾರ್ಖಾನೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

click me!