Latest Videos

Kodagu: ಮಂಜಿನ ನಗರಿಯಲ್ಲಿ ಸಂಗ್ರಹವಾಗುವ ಕೊಳೆತ ಕಸದಿಂದ ಉತ್ಪತ್ತಿಯಾಗುತ್ತೆ ಸಾವಯವ ಗೊಬ್ಬರ!

By Govindaraj SFirst Published Jun 29, 2024, 9:35 PM IST
Highlights

ರಾಜ್ಯದಲ್ಲಿ ಅದರಲ್ಲೂ ಮಹಾನಗರಗಳಲ್ಲಿ ಕಸ ವಿಲೇವಾರಿ ಮಾಡುವುದೇ ದೊಡ್ಡ ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ಮಡಿಕೇರಿ ನಗರಸಭೆ ಕಸಕ್ಕೊಂದು ದೊಡ್ಡ ಪರಿಹಾರ ಕಂಡುಕೊಂಡಿದೆ. ಅದು ಹೇಗಪ್ಪ ಎನ್ನುವುದನ್ನು ನೀವು ನೋಡಲೇ ಬೇಕು. 

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಜೂ.29): ರಾಜ್ಯದಲ್ಲಿ ಅದರಲ್ಲೂ ಮಹಾನಗರಗಳಲ್ಲಿ ಕಸ ವಿಲೇವಾರಿ ಮಾಡುವುದೇ ದೊಡ್ಡ ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ಮಡಿಕೇರಿ ನಗರಸಭೆ ಕಸಕ್ಕೊಂದು ದೊಡ್ಡ ಪರಿಹಾರ ಕಂಡುಕೊಂಡಿದೆ. ಅದು ಹೇಗಪ್ಪ ಎನ್ನುವುದನ್ನು ನೀವು ನೋಡಲೇ ಬೇಕು. ಹೌದು ಸುಂದರವಾಗಿರುವ ಕೊಡಗು ಜಿಲ್ಲೆಯನ್ನು ನೋಡುವುದಕ್ಕೆ ಜಿಲ್ಲೆ, ಹೊರ ಜಿಲ್ಲೆಗಳಿಂದ ಅಪಾರ ಸಂಖ್ಯೆಯ ಪ್ರವಾಸಿಗರು ಬರುತ್ತಾರೆ. ಹೀಗಾಗಿ ಕೊಡಗಿನಲ್ಲಿ ಅತೀ ಹೆಚ್ಚು ಕಸದ ಉತ್ಪಾದನೆಯಾಗುತ್ತದೆ. ಅದರಲ್ಲೂ ಮಂಜಿನ ನಗರಿ ಮಡಿಕೇರಿ ಒಂದರಲ್ಲೇ ದಿನಕ್ಕೆ ಬರೋಬ್ಬರಿ 20 ಟನ್ ಹಸಿ ಕಸ ಉತ್ಪಾದನೆಯಾಗುತ್ತದೆ. 

ಇಷ್ಟು ದೊಡ್ಡ ಪ್ರಮಾಣದಲ್ಲಿ ಸಂಗ್ರಹವಾಗುವ ಹಸಿ ಕಸವನ್ನು ಉಪಯುಕ್ತ ಸಾವಯವ ಗೊಬ್ಬರವಾಗಿ ಪರಿವರ್ತನೆ ಮಾಡಲಾಗುತ್ತಿದೆ. ಹೌದು ನಿತ್ಯ ಮಡಿಕೇರಿ ನಗರದ ಪ್ರತೀ ಮನೆಗಳಿಗೆ ಹೋಗಿ ಕಸ ಸಂಗ್ರಹಿಸುವ ನಗರಸಭೆ ಸಿಬ್ಬಂದಿ ಕಸ ವಿಲೇವಾರಿ ಸ್ಥಳದಲ್ಲಿ ಅದನ್ನು ಮತ್ತೆ ವಿಂಗಡಣೆ ಮಾಡಲಾಗುತ್ತದೆ. ಹೀಗೆ ವಿಂಗಡಣೆ ಮಾಡಿದ ಕಸವನ್ನು ಸಿಮೆಂಟ್ ತೊಟ್ಟಿಗಳಿಗೆ ತುಂಬಲಾಗುತ್ತದೆ. ಹೀಗೆ ತುಂಬಿದ ಕಸವನ್ನು ಹಾಗಿಂದಾಗ್ಗೆ ಮೇಲಿಂದ ಕೆಳಕ್ಕೆ ಮಾಡಿ ಮಗುಚಿ ಹಾಕಲಾಗುತ್ತಿದೆ. ಹೀಗೆ ಎರಡರಿಂದ ಎರಡುವರೆ ತಿಂಗಳು ಕಳೆದಲ್ಲಿ ಮಡಿಕೇರಿ ನಗರದಲ್ಲಿ ಉತ್ಪಾದನೆಯಾಗುವ ಹಸಿ ಕಸ ಉತ್ಯುತ್ತಮ ಸಾವಯವ ಗೊಬ್ಬರವಾಗಿ ಪರಿವರ್ತನೆ ಆಗುತ್ತಿದೆ. 

ಸಿಎಂ ಬದಲಾವಣೆ ಸದ್ಯಕ್ಕಿಲ್ಲ, ಹಾದಿ ಬೀದಿಲಿ ಮಾತಾಡುವುದು ಸರಿಯಲ್ಲ: ಶಾಸಕ ದೇಶಪಾಂಡೆ

ಹಸಿಕಸವೆಲ್ಲಾ ಕರಗಿ ಕೊನೆಗೆ ಸಂಪೂರ್ಣ ಒಳಗಿದ ಗೊಬ್ಬರವಾಗಿ ಪರಿವರ್ತನೆಯಾದ ಮೇಲೆ ಅದನ್ನು ದೊಡ್ಡ ಜರಡಿಯ ಮೂಲಕ ಜರಡಿಯಾಡಿಸಿ ಉತ್ತಮ ಗೊಬ್ಬರವಾಗಿ ಸಂಗ್ರಹಿಸಲಾಗುತ್ತಿದೆ. ಕಸದೊಂದಿಗೆ ಬರುವ ಚೀಲಗಳನ್ನೇ ಬಳಸಿ ಈ ಗೊಬ್ಬರವನ್ನು ಶೇಕರಣೆ ಮಾಡಿಡಲಾಗುತ್ತಿದೆ. ಈ ಎಲ್ಲಾ ಕೆಲಸವನ್ನು ನಿಭಾಯಿಸುತ್ತಿರುವುದು ಮಡಿಕೇರಿ ನಗರಸಭೆ ಸಿಬ್ಬಂದಿ. ಒಟ್ಟಿನಲ್ಲಿ ಎರಡು ತಿಂಗಳಿಗೆ ಸಂಗ್ರಹವಾಗುವ ಐದು ಸಾವಿರ ಟನ್ನಷ್ಟು ಹಸಿಕಸ ಐನೂರು ಕೆ.ಜಿ. ಅತ್ಯುತ್ತಮ ಸಾವಯವಗೊಬ್ಬರವಾಗಿ ಪರಿವರ್ತನೆಯಾಗುತ್ತದೆ. 

ಇದನ್ನು ಕೆ.ಜಿ.ಗೆ 5 ರೂಪಾಯಿಯಂತೆ ಅಗತ್ಯ ಇರುವವರಿಗೆ ಸೇಲ್ ಮಾಡಲಾಗುತ್ತಿದೆ. ಸಾವಯವ ಗೊಬ್ಬರ ದೊರೆಯುವುದೇ ಕಷ್ಟ ಎನ್ನುವ ಈ ದಿನಗಳಲ್ಲಿ ಜನರ ಆಧುನಿಕ ಭರಾಟೆಯ ಬದುಕಿನಿಂದ ಉತ್ಪಾನೆಯಾಗುವ ಕಸವನ್ನು ವಿಲೇವಾರಿ ಮಾಡುವುದೇ ಕಷ್ಟ ಎನ್ನುವ ಸ್ಥಿತಿ ಇರುವಾಗ ಮಡಿಕೇರಿ ನಗರಸಭೆ ಈ ರೀತಿ ಕಸದಿಂದ ರಸ ಮಾಡುತ್ತಿರುವುದು ನಿಜಕ್ಕೂ ಉಪಯುಕ್ತವೇ ಸರಿ. ಆದರೆ ಈ ಕಸವನ್ನು ಸಂಗ್ರಹಿಸಿ, ಅದನ್ನು ವಿಂಗಡಣೆ ಮಾಡುವುದು ಮಾತ್ರ ದೊಡ್ಡ ಸವಾಲಿನ ಕೆಲಸ. ಜನರಿಗೆ ಎಷ್ಟೇ ಹೇಳಿದರೂ ಎಲ್ಲಾ ರೀತಿಯ ಕಸವನ್ನು ಕೆಲವೊಮ್ಮೆ ಮಿಶ್ರ ಮಾಡಿಯೇ ಕೊಡುತ್ತಾರೆ.

ನಾನೇನು ತಪ್ಪು ಮಾಡಿಲ್ಲ, ಆದರೂ ಈ ಸ್ಥಿತಿಯಲ್ಲಿದ್ದೇನೆ ಎಂದು ಶಾಕ್ ಆಗಿದ್ದಾರಂತೆ ಪವಿತ್ರಾ ಗೌಡ: ವಕೀಲ ನಾರಾಯಣಸ್ವಾಮಿ

ಹೀಗಾಗಿ ಇದನ್ನು ಪ್ರತ್ಯೇಕಗೊಳಿಸುವುದು ಕಷ್ಟ. ಆದ್ದರಿಂದ ಜನರು ದಯವಿಟ್ಟು ಕಸವನ್ನು ಪ್ರತ್ಯೇಕಗೊಳಿಸಿ ಕೊಡಿ ಎಂದು ಮನವಿ ಮಾಡುತ್ತಾರೆ. ಈ ಕುರಿತು ಮಾತನಾಡಿರುವ ನಗರಸಭೆ ಆರೋಗ್ಯ ಅಧಿಕಾರಿ ಸೌಮ್ಯ ಅವರು ನಗರದಲ್ಲಿ ಹಿಂದೆ ಕಸದ್ದೇ ದೊಡ್ಡ ಸಮಸ್ಯೆ ಇತ್ತು. ಈಗ ಗೊಬ್ಬರ ಉತ್ಪಾದನೆ ಮಾಡಲು ಆರಂಭಿಸಿದ ಬಳಿಕ ಸಮಸ್ಯೆ ಒಂದಿಷ್ಟು ನಿವಾರಣೆಯಾಗಿದ್ದು ಅದರ ಮೂಲಕ ಆದಾಯವು ಬರುತ್ತಿದೆ ಎನ್ನುತ್ತಾರೆ. ಏನೇ ಆಗಲಿ ಒಟ್ಟಿನಲ್ಲಿ ಮಡಿಕೇರಿ ನಗರಸಭೆ ಹಸಿ ಕಸದ ಸಮಸ್ಯೆಗೆ ಒಂದು ಒಳ್ಳೆಯ ಪರಿಹಾರ ಕಂಡುಕೊಂಡಿರುವುದಂತು ಸತ್ಯ.

click me!