ಕಲಬುರಗಿ: ಹಾವು ಕಡಿದು 6 ವರ್ಷದ ಬಾಲಕ ಸಾವು

Published : Nov 16, 2022, 09:34 PM IST
ಕಲಬುರಗಿ: ಹಾವು ಕಡಿದು 6 ವರ್ಷದ ಬಾಲಕ ಸಾವು

ಸಾರಾಂಶ

ಕಲಬುರಗಿ ಜಿಲ್ಲೆಯ ಶಹಾಬಾದ್ ತಾಲೂಕಿನ ಗೋಳಾ ಕೆ ಗ್ರಾಮದಲ್ಲಿ ನಡೆದ ಘಟನೆ 

ಕಲಬುರಗಿ(ನ.16): ಹಾವು ಕಡಿದ ಪರಿಣಾಮ 6 ವರ್ಷದ ಬಾಲಕ ಸಾವಿಗೀಡಾದ ಘಟನೆ ಕಲಬುರಗಿ ಜಿಲ್ಲೆಯ ಶಹಾಬಾದ್ ತಾಲೂಕಿನ ಗೋಳಾ ಕೆ ಗ್ರಾಮದಲ್ಲಿ ಇಂದು(ಬುಧವಾರ) ನಡೆದಿದೆ. ಗೋಳಾ ಕೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ಓದುತ್ತಿದ್ದ ನವೀನ್ ಎಂಬಾತನೇ ಹಾವು ಕಚ್ಚಿ ಮೃತಪಟ್ಟ ದುರ್ದೈವಿಯಾಗಿದ್ದಾನೆ. 

ಮಧ್ಯಾಹ್ನ ಶಾಲೆಯಿಂದ ಬೇಗ ಮನೆಗೆ ಬಂದಿದ್ದ ಬಾಲಕ ನವಿನ್, ಊಟ ಮಾಡಿ ಮನೆಯಲ್ಲಿಯೇ ಮಲಗಿಕೊಂಡಿದ್ದನು. ಈ ಸಂದರ್ಭದಲ್ಲಿ ಆತನ ಕಿವಿಗೆ ಎರಡು ಬಾರಿ ಹಾವು ಕಚ್ಚಿದೆ.ಆತ ಕಿರುಚಿಕೊಂಡಾಗ ಅಡುಗೆ ಮನೆಯಲ್ಲಿಯೇ ಇದ್ದ ತಾಯಿ ಓಡಿ ಬಂದು, ಆತನನ್ನು ಹೊರಗಡೆ ಎತ್ತಿಕೊಂಡು ಹೋಗಿದ್ದಾಳೆ. ಅಲ್ಲದೇ ಮೊದಲು ಆ ಬಾಲಕನಿಗೆ ನಾಟಿ ಔಷಧಿ ಕೊಡಿಸಲಾಗಿತ್ತು. ನಂತರ ಶಹಾಬಾದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಟ್ಟು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲು ಅಲ್ಲಿನ ವೈದ್ಯರು ಸೂಚಿಸಿದ್ದರು.

ಬಿಜೆಪಿ ಸೇರಿಕೊಳ್ಳಲಿದ್ದ ಜೆಡಿಎಸ್ ನಾಯಕನ ಬರ್ಬರ ಹತ್ಯೆ, ಕಲ್ಲಿನಿಂದ ಗುಪ್ತಾಂಗಕ್ಕೆ ಹೊಡೆದು ಕೊಲೆ!

ತೀವ್ರ ಸ್ವರೂಪದಲ್ಲಿ ವಿಷ ಬಾಲಕನ ಶರೀರದೊಳಗೆ ಸೇರ್ಪಡೆಯಾದ ಕಾರಣ ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ನವಿನ್ ಸಾವಿಗೀಡಾಗಿದ್ದಾನೆ. ಈ ಕುರಿತು ಶಹಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

PREV
Read more Articles on
click me!

Recommended Stories

ಸ್ಕೂಲ್ ಬಸ್ ಹರಿದು 8 ವರ್ಷದ ಬಾಲಕಿ ಸಾವು; ಚಾಲಕನ ನಿರ್ಲಕ್ಷ್ಯಕ್ಕೆ ಅಮಾಯಕ ಜೀವ ಬಲಿ
ಗೋವಾ ಮಾಲ್ ಸಮೇತ ಅರಣ್ಯದಲ್ಲಿ ಸಿಕ್ಕಿಬಿದ್ದ ವ್ಯಕ್ತಿ; ಗಾಡಿ ಹಿಡಿದ ಖಾಕಿ, ಆರೋಪಿ ಪರಾರಿ!