ಬೆಂಗಳೂರು: ವಿದ್ಯುತ್‌ ಬಿಲ್‌ ಬಾಕಿ: ಬಿಡ್ಲ್ಯೂಎಸ್‌ಎಸ್‌ಬಿ ಬಿಡಿಎ, ಬಿಬಿಎಂಪಿಗೆ ಬೆಸ್ಕಾಂ ನೋಟಿಸ್‌

Published : Nov 16, 2022, 09:02 PM IST
ಬೆಂಗಳೂರು: ವಿದ್ಯುತ್‌ ಬಿಲ್‌ ಬಾಕಿ: ಬಿಡ್ಲ್ಯೂಎಸ್‌ಎಸ್‌ಬಿ ಬಿಡಿಎ, ಬಿಬಿಎಂಪಿಗೆ ಬೆಸ್ಕಾಂ ನೋಟಿಸ್‌

ಸಾರಾಂಶ

ವಿದ್ಯುತ್‌ ಬಾಕಿ ಸೆಪ್ಟೆಂಬರ್‌ ಅಂತ್ಯಕ್ಕೆ 131.18 ಕೋಟಿ ರೂ. ಆಗಿದ್ದು, ಬಾಕಿ ಪಾವತಿಸಲು  ನೋಟಿಸ್‌ ಜಾರಿಗೊಳಿಸಿದ ಹೆಬ್ಬಾಳ ಕಾರ್ಯನಿರ್ವಾಹಕ ಇಂಜಿನಿಯರ್‌

ವರದಿ-ನಂದೀಶ್ ಮಲ್ಲೇನಹಳ್ಳಿ, ಏಷ್ಯಾನೆಟ್ ಸುವರ್ಣ ‌ನ್ಯೂಸ್, ಬೆಂಗಳೂರು

ಬೆಂಗಳೂರು(ನ.16): ಕೋಟ್ಯಂತರ ರೂಪಾಯಿ ವಿದ್ಯುತ್‌ ಶುಲ್ಕ ಬಾಕಿ ಇರಿಸಿಕೊಂಡಿರುವ ಬಿಡ್ಬ್ಲೂಎಸ್‌ಎಸ್‌ಬಿ, ಬಿಬಿಎಂಪಿ, ತೋಟಗಾರಿಕೆ ಇಲಾಖೆ, ಬಿಡಿಎ, ನಗರ ಸಭೆ ಮತ್ತು ಗ್ರಾಮಸಭೆಗಳಿಗೆ ಬೆಸ್ಕಾಂನ ಹೆಬ್ಬಾಳ ಮತ್ತು ಜಾಲಹಳ್ಳಿ ವಿಭಾಗಗಳ ಕಾರ್ಯನಿರ್ವಾಹಕ ಇಂಜಿನಿಯರ್‌ಗಳು ಪ್ರತ್ಯೇಕ ನೋಟಿಸ್‌ ಜಾರಿಗೊಳಿಸಿದ್ದಾರೆ.

ಬೆಸ್ಕಾಂನ ಹೆಬ್ಬಾಳ ವಿಭಾಗದ ವ್ಯಾಪ್ತಿಗೆ ಬರುವ ಉಪ ವಿಭಾಗಗಳಾದ ಗಂಗಾನಗರ (ಸಿ-4), ಕಾವಲಬೈರಸಂದ್ರ (ಸಿ-5), ಯಲಹಂಕ (ಸಿ-7) ಮತ್ತು ಸಹಕಾರನಗರ (ಸಿ -8) ಉಪ ವಿಭಾಗಗಳಿಗೆ ಬಿಡ್ಲ್ಯೂ ಎಸ್‌ ಎಸ್‌ ಬಿ, ಬಿಡಿಎ, ಬಿಬಿಎಂಪಿ, ತೋಟಗಾರಿಕೆ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ನೀರು ಸರಬರಾಜು ಮತ್ತು ಬೀದಿ ದೀಪ ಸ್ಥಾವರಗಳ ವಿದ್ಯುತ್‌ ಬಾಕಿ ಸೆಪ್ಟೆಂಬರ್‌ ಅಂತ್ಯಕ್ಕೆ 131.18 ಕೋಟಿ ರೂಪಾಯಿ ಆಗಿದ್ದು, ಬಾಕಿ ಪಾವತಿಸಲು ಹೆಬ್ಬಾಳ ಕಾರ್ಯನಿರ್ವಾಹಕ ಇಂಜಿನಿಯರ್‌ ನೋಟಿಸ್‌ ಜಾರಿಗೊಳಿಸಿದ್ದಾರೆ. 

Bescom Alert: ಬೆಂಗಳೂರಿಗರೇ.. ಈ ತಿಂಗಳ ಕರೆಂಟ್‌ ಬಿಲ್‌ ಆನ್‌ಲೈನ್‌ ಪೇಮೆಂಟ್‌ ಮಾಡ್ಬೇಡಿ..!

ನಾಲ್ಕೂ ಉಪ ವಿಭಾಗಗಳಿಗೆ ವಿದ್ಯುತ್‌ ಶುಲ್ಕ ಬಾಕಿ ಇರಿಸಿಕೊಂಡಿರುವ ಸರಕಾರಿ ಸಂಸ್ಥೆಗಳ ಪೈಕಿ ಬಿಡ್ಬ್ಲೂ ಎಸ್‌ ಎಸ್‌ ಬಿ  ಅತೀ ಹೆಚ್ಚು  65.09 ಕೋಟಿ ರೂ. ಬಾಕಿ ಇರಿಸಿಕೊಂಡಿದ್ದು,  ಬಿಬಿಎಂಪಿ ನೀರು ಸರಬರಾಜು ವಿಭಾಗ 54.53 ಕೋಟಿ ರೂ. ವಿದ್ಯುತ್‌ ಶುಲ್ಕ ಪಾವತಿಸಬೇಕಾಗಿದೆ. 

ಜಾಲಹಳ್ಳಿ ವಿಭಾಗ ಹಾಗೆಯೇ ಬೆಸ್ಕಾಂನ ಜಾಲಹಳ್ಳಿ ವಿಭಾಗ ವ್ಯಾಪ್ತಿಯ ಉಪ ವಿಭಾಗಗಳಾದ ಜಾಲಹಳ್ಳಿ (ಸಿ 3), ವಿದ್ಯಾರಣ್ಯಪುರ (ಸಿ-9),  ಮತ್ತು ಸೋಲದೇವನಹಳ್ಳಿ ( ಎನ್‌ -9) ಉಪ ವಿಭಾಗಗಳಿಗೆ ಬಿಡ್ಬ್ಲೂ ಎಸ್‌ ಎಸ್‌ ಬಿ, ಬಿಡಿಎ, ಬಿಬಿಎಂಪಿ, ತೋಟಗಾರಿಕೆ ಇಲಾಖೆ, ನಗರ ಸಭೆ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ನೀರು ಸರಬರಾಜು ಮತ್ತು ಬೀದಿ ದ್ವೀಪ ಸ್ಥಾವರಗಳ ವಿದ್ಯುತ್‌ ಬಾಕಿ ಅಕ್ವೋಬರ್‌ ಅಂತ್ಯಕ್ಕೆ 99.20 ಕೋಟಿ ರೂ. ಇದ್ದು, ಬಾಕಿ ಪಾವತಿಸಲು ಕೋರಿ ಜಾಲಹಳ್ಳಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್‌ ನವೆಂಬರ್‌ 16 ರಂದು ನೋಟಿಸ್‌ ಜಾರಿಗೊಳಿಸಿದ್ದಾರೆ. 

ವಿದ್ಯುತ್‌ ಬಿಲ್‌ ಬಾಕಿಯನ್ನು 7 ದಿನಗಳ ಒಳಗೆ ಬೆಸ್ಕಾಂಗೆ ಪಾವತಿಸಲು ಸೂಚಿಸಲಾಗಿದ್ದು, ತಪ್ಪಿದ್ದಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಎರಡೂ ವಿಭಾಗಗಳ ಕಾರ್ಯನಿರ್ವಾಹಕ ಇಂಜಿನಿಯರ್‌ ಗಳು ನೀಡಿರುವ ನೋಟಿಸ್‌ನಲ್ಲಿ ಎಚ್ಚರಿಸಲಾಗಿದೆ.
 

PREV
Read more Articles on
click me!

Recommended Stories

ಕೆನರಾ ಬ್ಯಾಂಕ್ ಗ್ರಾಹಕರಿಗೆ ₹3 ಕೋಟಿ ಪಂಗನಾಮ; ಗ್ರಾಹಕರ ಹೆಸರಲ್ಲಿ ಸಾಲ ಪಡೆದು ಮ್ಯಾನೇಜರ್ ಎಸ್ಕೇಪ್!
Bengaluru: ಹೊಸ ವರ್ಷದ ಪಾರ್ಟಿಗೆ KORA ಕಡೆ ಹೋಗೋ ಪ್ಲ್ಯಾನ್‌ ಇದ್ಯಾ, ಸಂಚಾರ ಬದಲಾವಣೆ ನೋಡಿಕೊಳ್ಳಿ..