ಟಿಬೇಟಿಯನ್ ವ್ಯಕ್ತಿ ಸೇರಿ, ಉತ್ತರ ಕನ್ನಡದಲ್ಲಿ 6 ಜನಕ್ಕೆ ಕೊರೋನಾ ಪಾಸಿಟಿವ್

By Kannadaprabha NewsFirst Published Jun 17, 2020, 10:38 AM IST
Highlights

ಟಿಬೇಟಿಯನ್ ವ್ಯಕ್ತಿ ಸೇರಿ ಯಲ್ಲಾಪುರದ ಮೂವರು, ಭಟ್ಕಳ, ಮುಂಡಗೋಡ ಹಾಗೂ ಹೊನ್ನಾವರದ ತಲಾ ಒಬ್ಬರಲ್ಲಿ ಕೋವಿಡ್‌ -19 ಸೋಂಕು ಖಚಿತಪಟ್ಟಿದೆ. ಯಲ್ಲಾಪುರದ ಇಬ್ಬರು ಪುರುಷರು ಹಾಗೂ ಒಬ್ಬ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ.

ಉತ್ತರ ಕನ್ನಡ(ಜೂ.17): ಮುಂಡಗೋಡದ ಟಿಬೇಟಿಯನ್‌ ಕಾಲನಿ ಹೋಂ ಕ್ವಾರಂಟೈನ್‌ನಲ್ಲಿದ್ದ 30 ವರ್ಷದ ಟಿಬೇಟಿಯನ್‌ ವ್ಯಕ್ತಿಗೆ ಕೋವಿಡ್‌-19 ಸೋಂಕು ಪಾಸಿಟಿವ್‌ ಬಂದಿದೆ.

ಜೂ. 7ರಂದು ದೆಹಲಿಯಿಂದ ಮುಂಡಗೋಡ ಟಿಬೇಟಿಯನ್‌ ಕಾಲನಿ ಕ್ಯಾಂಪ್‌ ನಂ. 4ಕ್ಕೆ ಆಗಮಿಸಿದ್ದ ಈತನನ್ನು ಕ್ವಾರಂಟೈನ್‌ ಮಾಡಿ ಗಂಟಲು ದ್ರವ ಮಾದರಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಮಂಗಳವಾರ ವರದಿ ಬಂದಿದ್ದು, ಈತನಿಗೆ ಕೋವಿಡ್‌-19 ಸೋಂಕು ಇರುವುದು ದೃಢವಾಗಿದೆ. ಸೋಂಕಿತನಾದ ಈತನನ್ನು ಚಿಕಿತ್ಸೆಗಾಗಿ ಕಾರವಾರ ಕೋವಿಡ್‌ ಆಸ್ಪತ್ರೆಗೆ ಕಳುಹಿಸಲಾಯಿತು.

58 ಲಕ್ಷ ವಿದ್ಯಾರ್ಥಿಗಳ ಬಳಿ ಸ್ಮಾರ್ಟ್‌ಫೋನ್‌!

ಯಲ್ಲಾಪುರದ ಮೂವರು, ಭಟ್ಕಳ, ಮುಂಡಗೋಡ ಹಾಗೂ ಹೊನ್ನಾವರದ ತಲಾ ಒಬ್ಬರಲ್ಲಿ ಕೋವಿಡ್‌ -19 ಸೋಂಕು ಖಚಿತಪಟ್ಟಿದೆ. ಯಲ್ಲಾಪುರದ ಇಬ್ಬರು ಪುರುಷರು ಹಾಗೂ ಒಬ್ಬ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ. ಯಲ್ಲಾಪುರದ ಮಹಿಳೆ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದವರಾಗಿದ್ದು, ಇವರು ಕೂಡ ತಿಂಗಳ ಹಿಂದೆ ಮುಂಬಯಿಂದ ಆಗಮಿಸಿದ್ದರು.

ಭಟ್ಕಳ ಹಾಗೂ ಹೊನ್ನಾವರದ ಸೋಂಕಿತರು ಪುರುಷರಾಗಿದ್ದು, ಇವರು ಮುಂಬಯಿಯಿಂದ ಮರಳಿದ್ದರು. ಮುಂಡಗೋಡದ ವ್ಯಕ್ತಿ ದೆಹಲಿಯಿಂದ ಮುಂಡಗೋಡ ಟಿಬೇಟಿಯನ್‌ ಕ್ಯಾಂಪ್‌ಗೆ ಆಗಮಿಸಿದ್ದರು. ಒಂದೆಡೆ ಉತ್ತರ ಕನ್ನಡದಲ್ಲಿ ಮಳೆ ಚುರುಕಾಗಿದೆ. ಸುರಿಯುವ ಮಳೆಯ ನಡುವೆ ಕೋವಿಡ್‌ -19 ಸೋಂಕು ಸಹ ಹೆಚ್ಚುತ್ತಿದೆ.

ಮುಂದಿನ 2 ತಿಂಗಳಲ್ಲಿ ಕಿಸಾನ್‌ ಕಾರ್ಡ್‌ ಹಣ ಖಾತೆಗೆ ಜಮಾ

ಇಷ್ಟುದಿನ ಭಟ್ಕಳ ಪುರಸಭೆ, ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿದ್ದ ಕೋವಿಡ್‌ -19 ಸೋಂಕು ಇದೀಗ ಗ್ರಾಮೀಣ ಭಾಗವಾದ ಕಾಯ್ಕಿಣಿಯ ತೆರ್ನಮಕ್ಕಿಯ ವ್ಯಕ್ತಿಯೊಬ್ಬರಿಗೆ ಕಾಣಿಸಿಕೊಂಡಿದ್ದು, ಅಲ್ಲಿನ ಜನತೆಯ ಆತಂಕಕ್ಕೆ ಕಾರಣವಾಗಿದೆ.

ಮುಂಬೈನಿಂದ ಬಂದಿದ್ದ ವ್ಯಕ್ತಿ ಸರ್ಕಾರಿ ಕ್ವಾರಂಟೈನ್‌ ಮುಗಿಸಿ ಹೋಂ ಕ್ವಾರಂಟೈನ್‌ನಲ್ಲಿದ್ದ ಸಂದರ್ಭದಲ್ಲಿ ಸೋಂಕು ಕಾಣಿಸಿಕೊಂಡಿದೆ ಎನ್ನಲಾಗಿದೆ. ಕಳೆದ ಕೆಲ ದಿನಗಳಿಂದ ಭಟ್ಕಳದಲ್ಲಿ ಕೋವಿಡ್‌ -19 ಸೋಂಕು ಇಲ್ಲವಾಗಿತ್ತು. ಇದೀಗ ಗ್ರಾಮೀಣ ಭಾಗದಲ್ಲಿ ಮುಂಬೈನಿಂದ ಬಂದ ವ್ಯಕ್ತಿಗೆ ಸೋಂಕು ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿರುವುದರ ಜತೆಗೆ ಜನರು ಮಹಾಮಾರಿ ಸೋಂಕಿನ ಬಗ್ಗೆ ಮತ್ತಷ್ಟುಜಾಗೃತಿ ವಹಿಸುವುದು ಅತೀ ಅವಶ್ಯಕವಾಗಿದೆ.

click me!