ಬಳ್ಳಾರಿ: ಒಂದೇ ದಿನ 30 ಕೊರೋನಾ ಪಾಸಿಟಿವ್‌ ಕೇಸ್‌, ಜಿಂದಾಲ್‌ ಕಾರ್ಖಾನೆ ಸೀಲ್‌ಡೌನ್‌

By Kannadaprabha News  |  First Published Jun 17, 2020, 10:15 AM IST

ಮಂಗಳವಾರ ಒಂದೇ ದಿನ 30 ಕೊರೋನಾ ವೈರಸ್‌ ಪ್ರಕರಣ| ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 250ಕ್ಕೇರಿಕೆ| 194 ಸೋಂಕಿತರು ಚಿಕಿತ್ಸೆ, ಹೊಸಪೇಟೆ 2, ಸಂಡೂರು 10, ಬಳ್ಳಾರಿ 10, ಕೂಡ್ಲಿಗಿ 1, ಹಗರಿಬೊಮ್ಮನಹಳ್ಳಿ 5 ಹಾಗೂ ಸಿರುಗುಪ್ಪದ 2 ಪ್ರಕರಣಗಳು|


ಬಳ್ಳಾರಿ(ಜೂ.15): ಜಿಂದಾಲ್‌ (ಜೆಎಸ್‌ಡಬ್ಲ್ಯು) ಕಾರ್ಖಾನೆಯ ಕಾರ್ಮಿಕರಿಗೆ ಕೊರೋನಾ ವೈರಸ್‌ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಜೂ.18 ರಿಂದ 30ರ ವರೆಗೆ ಜಿಂದಾಲ್‌ ಸೀಲ್‌ಡೌನ್‌ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ. 
ಮಂಗಳವಾರ ಮಾತನಾಡಿದ ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಕೆ. ಬಾಬಾ, ಯಾವುದೇ ನೌಕರರು ಗ್ರಾಮಗಳಿಂದ ಅಥವಾ ಬೇರೆ ಕಡೆಯಿಂದ ಓಡಾಡಬಾರದು. ಆರೋಗ್ಯ ಸಂಬಂಧಿ ಸೇರಿದಂತೆ ತುರ್ತು ಅಗತ್ಯ ಸೇವೆಗಳು ಹಾಗೂ ಗೂಡ್ಸ್‌ಗಳು ಹೊರತುಪಡಿಸಿದರೆ ಯಾವುದೇ ಕಾರಣಕ್ಕೂ ಜಿಂದಾಲ್‌ ಸಿಬ್ಬಂದಿ ಹೊರಗಡೆ ಬರುವಂತಿಲ್ಲ. ಎಲ್ಲ ಕಡೆ ಬ್ಯಾರಿಕೇಡ್‌ ನಿರ್ಮಿಸಲಾಗುವುದು ಎಂದರು.

ಈ ವರೆಗೆ 146 ಜನರಿಗೆ ಸೋಂಕಿರುವುದು ದೃಢಪಟ್ಟಿದೆ. ಈ ಕಂಪನಿಯ 633 ಜನರು ಕ್ವಾರಂಟೈನ್‌ನಲ್ಲಿದ್ದಾರೆ. ಇವರು ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರಾಗಿದ್ದಾರೆ. ನಾನಾ ಕಾಯಿಲೆಗಳಿಂದ ಚಿಕಿತ್ಸೆ ಪಡೆಯುತ್ತಿರುವ ಒಟ್ಟು 838 ಜನ ಜಿಂದಾಲ್‌ ಸಿಬ್ಬಂದಿಗೆ ಸಂಬಳಸಹಿತ ರಜೆ ನೀಡುವುದಾಗಿ ಜಿಂದಾಲ್‌ ಕಂಪನಿ ಒಪ್ಪಿಕೊಂಡಿದೆ ಎಂದು ಹೇಳಿದರು.

Tap to resize

Latest Videos

ಬಳ್ಳಾರಿ: ಜಿಂದಾಲ್‌ ಉದ್ಯೋಗಿ ಮಹಾಮಾರಿ ಕೊರೋನಾಗೆ ಬಲಿ

ಬಳ್ಳಾರಿ ಜಿಲ್ಲೆಯಲ್ಲಿ ಒಂದೇ ದಿನ 30 ಪಾಸಿಟಿವ್‌ ಪ್ರಕರಣ

ಜಿಲ್ಲೆಯಲ್ಲಿ ಮಂಗಳವಾರ ಒಂದೇ ದಿನ 30 ಕೊರೋನಾ ವೈರಸ್‌ ಪ್ರಕರಣ ಬೆಳಕಿಗೆ ಬಂದಿವೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 250ಕ್ಕೇರಿದೆ. 194 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳವಾರ ದೃಢಗೊಂಡಿರುವ ಪ್ರಕರಣಗಳ ಪೈಕಿ ಹೊಸಪೇಟೆ 2, ಸಂಡೂರು 10, ಬಳ್ಳಾರಿ 10, ಕೂಡ್ಲಿಗಿ 1, ಹಗರಿಬೊಮ್ಮನಹಳ್ಳಿ 5 ಹಾಗೂ ಸಿರುಗುಪ್ಪದ 2 ಪ್ರಕರಣಗಳು ಬೆಳಕಿಗೆ ಬಂದಿವೆ. ಮಂಗಳವಾರ ಖಚಿತವಾದ ಪ್ರಕರಣಗಳು ಮುಂಬೈ ಟ್ರಾವೆಲ್‌ ಹಿಸ್ಟರಿ ಇರುವುದು ಸೇರಿದಂತೆ ಐಎಲ್‌ಐ ಹಾಗೂ ಜಿಂದಾಲ್‌ನ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರು ಇದ್ದಾರೆ. ಇಂದು ಒಂದೇ ದಿನ ಜಿಂದಾಲ್‌ನಲ್ಲಿ ಎಷ್ಟು ಪ್ರಕರಣಗಳು ಎಂಬುದನ್ನು ಗೊತ್ತಾಗಿಲ್ಲ. ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
 

click me!