ಬಳ್ಳಾರಿಯಿಂದ ಆಂಧ್ರಪ್ರದೇಶದ ಗುಂತಕಲ್, ಗುತ್ತಿ, ಅನಂತಪುರ, ವಿಜಯವಾಡ, ಕರ್ನೂಲ್ ಜಿಲ್ಲೆಗಳಿಗೆ ಬಸ್ ಸಂಚಾರ| ಈ ಸಂಚಾರದಲ್ಲಿ ಪಾಯಿಂಟ್ ಟು ಪಾಯಿಂಟ್‌ಗೆ ಮಾತ್ರ ಕಾರ್ಯಾಚರಣೆ ವ್ಯವಸ್ಥೆ| ಮಾರ್ಗ ಮಧ್ಯದಲ್ಲಿ ಪ್ರಯಾಣಿಕರು ಇಳಿಯಲು ಅಥವಾ ಹತ್ತಲು ಅವಕಾಶವಿಲ್ಲ| ಬಳ್ಳಾರಿಯಿಂದ ಪ್ರಯಾಣಿಸುವ ಪ್ರಯಾಣಿಕರಿಗೆ ಕೇವಲ ಬಳ್ಳಾರಿ ಕೇಂದ್ರಿಯ ಬಸ್ ನಿಲ್ದಾಣದಲ್ಲಿ ಮಾತ್ರ ಹತ್ತಲು ಅವಕಾಶ|
ಬಳ್ಳಾರಿ(ಜೂ.15): ಬಳ್ಳಾರಿ ವಿಭಾಗದ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯಿಂದ ಇಂದಿನಿಂದ(ಜೂ. 17) ಬಳ್ಳಾರಿಯಿಂದ ಆಂಧ್ರಪ್ರದೇಶದ ಗುಂತಕಲ್, ಗುತ್ತಿ, ಅನಂತಪುರ, ವಿಜಯವಾಡ, ಕರ್ನೂಲ್ ಜಿಲ್ಲೆಗಳಿಗೆ ಬಸ್ ಕಾರ್ಯಾಚರಣೆ ಆರಂಭಿಸಲಿವೆ ಎಂದು ಬಳ್ಳಾರಿ ವಿಭಾಗದ ಈಕರಸಾ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂಚಾರದಲ್ಲಿ ಪಾಯಿಂಟ್ ಟು ಪಾಯಿಂಟ್‌ಗೆ ಮಾತ್ರ ಕಾರ್ಯಾಚರಣೆ ವ್ಯವಸ್ಥೆ ಇರುತ್ತದೆ. ಮಾರ್ಗ ಮಧ್ಯದಲ್ಲಿ ಪ್ರಯಾಣಿಕರು ಇಳಿಯಲು ಅಥವಾ ಹತ್ತಲು ಅವಕಾಶವಿಲ್ಲ. ಬಳ್ಳಾರಿಯಿಂದ ಪ್ರಯಾಣಿಸುವ ಪ್ರಯಾಣಿಕರಿಗೆ ಕೇವಲ ಬಳ್ಳಾರಿ ಕೇಂದ್ರಿಯ ಬಸ್ ನಿಲ್ದಾಣದಲ್ಲಿ ಮಾತ್ರ ಹತ್ತಲು ಅವಕಾಶವಿದೆ. ಪ್ರಯಾಣಿಕರು ಬಸ್ ಹೊರಡುವ ಮುನ್ನ ಬಸ್ ನಿಲ್ದಾಣದಲ್ಲಿ ಥರ್ಮಲ್ ಸ್ಕ್ರೀನಿಂಗ್ ತಪಾಸಣೆ ನಡೆಯಲಿದೆ.
ಬಳ್ಳಾರಿ: ಒಂದೇ ದಿನ 30 ಕೊರೋನಾ ಪಾಸಿಟಿವ್ ಕೇಸ್, ಜಿಂದಾಲ್ ಕಾರ್ಖಾನೆ ಸೀಲ್‌ಡೌನ್
ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ನಿಗದಿತ ಸ್ಥಳಗಳಿಗೆ ಬಸ್‌ನಲ್ಲಿ ಪ್ರಯಾಣಿಸಲು ಸುರಕ್ಷಿತ ಸಾರಿಗೆ ವ್ಯವಸ್ಥೆ ಒದಗಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.