ಕೊರೋನ ಕೇಕೆ ನಡುವೆ ಸರ್ಕಾರಕ್ಕೆ ಶಾಕ್: 550 ಗುತ್ತಿಗೆ ವೈದ್ಯರ ರಾಜೀನಾಮೆ..?

By Kannadaprabha NewsFirst Published May 21, 2020, 11:15 AM IST
Highlights

ರಾಜ್ಯದಲ್ಲಿ ಕೊರೋನಾ ಅಬ್ಬರ ದಿನೇ ದಿನೇ ಹೆಚ್ಚುತ್ತಿರುವ ಸಂದರ್ಭದಲ್ಲಿಯೇ ಸರ್ಕಾರಕ್ಕೆ ಇನ್ನೊಂದು ಶಾಕ್ ಎದುರಾಗಿದೆ. ಸುಮಾರು 550ರಷ್ಟು ಗುತ್ತಿಗೆ ವೈದ್ಯರು ರಾಜೀನಾಮೆ ನೀಡಲು ಮುಂದಾಗಿದ್ದಾರೆ.

ಹಾಸನ(ಮೇ 21): ರಾಜ್ಯದಲ್ಲಿ ಕೊರೋನಾ ಅಬ್ಬರ ದಿನೇ ದಿನೇ ಹೆಚ್ಚುತ್ತಿರುವ ಸಂದರ್ಭದಲ್ಲಿಯೇ ಸರ್ಕಾರಕ್ಕೆ ಇನ್ನೊಂದು ಶಾಕ್ ಎದುರಾಗಿದೆ. ಸುಮಾರು 550ರಷ್ಟು ಗುತ್ತಿಗೆ ವೈದ್ಯರು ರಾಜೀನಾಮೆ ನೀಡಲು ಮುಂದಾಗಿದ್ದಾರೆ.

ಕೊರೋನಾ ಕೇಕೆ ನಡುವೆ ಸರ್ಕಾರಕ್ಕೆ ಗುತ್ತಿಗೆ ವೈದ್ಯರು ಶಾಕ್ ನೀಡಿದ್ದು, ರಾಜ್ಯದ 550 ಗುತ್ತಿಗೆ ಆಧಾರದ ವೈದ್ಯರು ರಾಜಿನಾಮೆಗೆ ಮುಂದಾಗಿದ್ದಾರೆ. ಕಳೆದ ಮೂರ್ನಾಲ್ಕು ವರ್ಷದಿಂದ ಸೇವೆಯಲ್ಲಿದ್ದರೂ ಖಾಯಂ ಮಾಡದ್ದಕ್ಕೆ ವೈದ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಲ್ಫ್‌ನಿಂದ 2ನೇ ಬಾರಿ ಕನ್ನ​ಡಿ​ಗ​ರನ್ನು ಹೊತ್ತು ತಂಡ ಕನ್ನಡಿಗ ಪೈಲಟ್‌!

ಸೇವೆ ಖಾಯಂ, ವೇತನ ಹೆಚ್ಚಳ, ಸೇರಿ ಸೇವಾ ಭದ್ರತೆಗೆ ಆಗ್ರಹಿಸಿ ರಾಜಿನಾಮೆ ನೀಡಲು ಮುಂದಾಗಿದ್ದಾರೆ. ವೈದ್ಯ ಸಮೂಹ ಸಾಮೂಹಿಕ ರಾಜಿನಾಮೆ ಮೂಲಕ ಒತ್ತಡ ಹೇರಲು ಮುಂದಾಗಿದೆ.

ಹಾಸನದ 35 ವೈದ್ಯರು ಸೇರಿ ರಾಜ್ಯದ 550 ವೈದ್ಯರಿಂದ ರಾಜೀನಾಮೆ ಹೋರಾಟ ಮಾಡುತ್ತಿದ್ದು, ಕೂಡಲೇ ತಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜೀನಾಮೆ ನಿರ್ಧಾರ ಮಾಡಿದ್ದಾರೆ. ತಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸದಿರುವುದರಿಂದ ಮನನೊಂದು ರಾಜೀನಾಮೆ ನೀಡೋದಾಗಿ ಉಲ್ಲೇಖಿಸಿದ್ದಾರೆ.

ಆಪರೇಷನ್‌ ಏರ್‌ಲಿಫ್ಟ್‌ನಲ್ಲಿ ಕನ್ನಡಿಗ ಪೈಲಟ್‌: ಭಾರತೀಯರ ಕರೆತಂದ ತುಳುನಾಡ ಕುವರ!

ವೈದ್ಯರು ತಮ್ಮ ನೋವು ಹೇಳಿಕೊಂಡು ರಾಜೀನಾಮೆ ಪತ್ರ ಬರೆದಿದ್ದಾರೆ. ಗುತ್ತಿಗೆ ವೈದ್ಯರ ಸಂಘದ ಪ್ರಮುಖರು ಇಂದು  ಬೆಳಿಗ್ಗೆ 9 ಗಂಟೆಗೆ ಸಿಎಂ ಭೇಟಿಯಾಗಲು ನಿರ್ಧರಿಸಿದ್ದರು.

ಕೋವಿಡ್ ಕಂಟಕದ ವೇಳೆ ಜೀವದ ಹಂಗು ತೊರೆದು ಕೆಲಸ ಮಾಡಿದ್ದೇವೆ. ರಾಜ್ಯದ ಎಲ್ಲಾ ವೈದ್ಯರು ಖಾಯಂ ವೈದ್ಯರಷ್ಟೇ ಶ್ರದ್ದೆಯಿಂದ ಕೆಲಸ ಮಾಡಿದ್ದೇವೆ. ಆದ್ರೂ ತಮ್ಮನ್ನ ಕಡೆಗಣಿಸಲಾಗಿದೆ ಎಂದು ಗುತ್ತಿಗೆ ವೈದ್ಯರ ಅಳಲು ತೋಡಿಕೊಂಡಿದ್ದಾರೆ. ಈ ಹಿಂದೆ ಮೂರು ವರ್ಷ ಸೇವೆ ಮಾಡಿದ ಗುತ್ತಿಗೆ ವೈದ್ಯರನ್ನು ಖಾಯಂ ಮಾಡಲಾಗುತ್ತಿತ್ತು. ಅದೇ ನಿಯಮ ಅನುಸರಿಸಿ ಸೇವೆ ಖಾಯಂ ಮಾಡಲು ಗುತ್ತಿಗೆ ವೈದ್ಯರ ಆಗ್ರಹಿಸಿದ್ದಾರೆ.

click me!