Bagalkot: ಅಕ್ರಮವಾಗಿ ಪಡಿತರ ಚೀಟಿ ಪಡೆದ ಸರ್ಕಾರಿ ನೌಕರರು: 54 ಲಕ್ಷ ದಂಡ ವಸೂಲಿ

By Govindaraj S  |  First Published Apr 4, 2022, 9:48 PM IST

ರಾಜ್ಯದಲ್ಲಿ ಸರ್ಕಾರ ಬಡ ಕುಟುಂಬಗಳನ್ನ ಗುರುತಿಸಿ ಅವರಿಗೆ ಪಡಿತರ ನೀಡೋಕೆ ಅಂತ  ಪಡಿತರ ಚೀಟಿ ನೀಡುತ್ತೇ, ಈ ಪಡಿತರ ಚೀಟಿ ಪಡೆಯೋಕೆ ಬಡ ಜನರು ಹರಸಾಹಸ ಪಡುತ್ತಾರೆ.


ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್​ ಸುವರ್ಣನ್ಯೂಸ್​, ಬಾಗಲಕೋಟೆ.

ಬಾಗಲಕೋಟೆ (ಏ.04): ರಾಜ್ಯದಲ್ಲಿ (Karnataka) ಸರ್ಕಾರ ಬಡ ಕುಟುಂಬಗಳನ್ನ ಗುರುತಿಸಿ ಅವರಿಗೆ ಪಡಿತರ ನೀಡೋಕೆ ಅಂತ  ಪಡಿತರ ಚೀಟಿ ನೀಡುತ್ತೇ, ಈ ಪಡಿತರ ಚೀಟಿ (Ration Card) ಪಡೆಯೋಕೆ ಬಡ ಜನರು ಹರಸಾಹಸ ಪಡುತ್ತಾರೆ ಆದರೆ  ಈ ಜಿಲ್ಲೆಯಲ್ಲಿ ಮಾತ್ರ ಪಡಿತರ ಚೀಟಿ ಬಡವರ್ಗದ ಕುಟುಂಬಗಳಿಗೆ ಸಮರ್ಪಕವಾಗಿ ತಲುಪಿದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಸರ್ಕಾರಿ ನೌಕರರಿಗಂತೂ (Government Employees) ತಲುಪಿದೆ ಅಂದ್ರೆ ನಂಬಲೇಬೇಕು. ಯಾಕಂದರೆ ಬಾಗಲಕೋಟೆ (Bagalkot) ಜಿಲ್ಲೆಯಾದ್ಯಂತ  ಬರೋಬ್ಬರಿ 800ಕ್ಕೂಅಧಿಕ ಜನ ಸರ್ಕಾರಿ ನೌಕರರ ಹೆಸರು ಇದೀಗ ಅಕ್ರಮ ಪಡಿತರ ಚೀಟಿಯಲ್ಲಿ ಪತ್ತೆಯಾಗಿವೆ. ಈ ಕುರಿತ ವರದಿ ಇಲ್ಲಿದೆ.

Tap to resize

Latest Videos

ಸರ್ಕಾರಿ ನೌಕರರ ಹೆಸರುಗಳೇ ಸರ್ಕಾರದ ಪಡಿತರ ಚೀಟಿಯಲ್ಲಿ ಪತ್ತೆಯಾಗುವ ಮೂಲಕ ಅಚ್ಚರಿ ಮೂಡಿಸಿರೋ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯಲ್ಲಿ ಸರ್ಕಾರದ ಆದೇಶದಂತೆ ಜಿಲ್ಲಾಧಿಕಾರಿ ಕ್ಯಾ. ರಾಜೇಂದ್ರ ಅವರ ಸೂಚನೆಯಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ  ಅನರ್ಹ ಕಾರ್ಡ್‌ಗಳ ಪತ್ತೆ ಹಚ್ಚುವ ಕಾರ್ಯ ನಡೆದಿದ್ದು, ಇದರಲ್ಲಿ ಕಳೆದ ಎರಡು ವರ್ಷಗಳಲ್ಲಿ 10 ಸಾವಿರಕ್ಕೂ ಅಧಿಕ ಪ್ರಮಾಣದ ಅನರ್ಹ ಕಾರ್ಡಗಳು ಪತ್ತೆಯಾಗಿವೆ. ಇವುಗಳ ಮಧ್ಯೆ ಅಚ್ಚರಿಯ ವಿಷಯ ಅಂದ್ರೆ 824 ಸರ್ಕಾರಿ ನೌಕರರ ಹೆಸರು ಪಡಿತರ ಚೀಟಿಯಲ್ಲಿ ಪತ್ತೆಯಾಗಿರೋದು. 

ಪ್ರತಿ ರಾತ್ರಿ ಬೆಳೆಗಳಿಗೆ ಸಂಗೀತ ಕೇಳಿಸುವ ಬಾಗಲಕೋಟೆ ತೇರದಾಳದ ರೈತ ಧರೆಪ್ಪ ಕಿತ್ತೂರ

ಹೌದು! ಸರ್ಕಾರಿ ನೌಕರಿ ಪಡೆದುಕೊಂಡಿರೋ ಬೇರೆ ಬೇರೆ ಇಲಾಖೆಯ ನೌಕರರು ಇದೀಗ ಪಡಿತರ ಚೀಟಿ ಹೊಂದಿರೋದು ಪತ್ತೆಯಾಗಿದೆ. ಪ್ರತಿಯೊಬ್ಬರ ಆಧಾರ ಮತ್ತು ಕೆಜಿಆರ್​ಡಿ ನಂಬರ್ ಮೂಲಕ ಪರಿಶೀಲಿಸಿದಾಗ ಅನರ್ಹ ಕಾರ್ಡ್‌ ಹೊಂದಿರುವುದು ಪತ್ತೆಯಾಗಿದೆ. ಇನ್ನು ಅನರ್ಹ ಪಡಿತರ ಚೀಟಿ ಪತ್ತೆ ಹಚ್ಚಿರೋ ಆಹಾರ ಇಲಾಖೆ ಅಧಿಕಾರಿಗಳು ಸರ್ಕಾರಿ ನೌಕರರ ಪಟ್ಟಿಯೊಂದನ್ನು ಸಿದ್ದಪಡಿಸಿ ಅವರಿಗೆ ಈಗಾಗಲೇ ದಂಡ ಹಾಕಿ,  ನೋಟಿಸ್​ ನೀಡಿದ್ದಾರೆ. ಇವುಗಳಲ್ಲಿ 824 ಜನ ನೌಕರರ ಪೈಕಿ 350 ಜನರಿಂದ ದಂಡ ವಸೂಲಿ ಮಾಡಿದ್ದು, ಸದ್ಯ ಅರ್ಧ ಕೋಟಿ ಅಂದ್ರೆ 54 ಲಕ್ಷ ರೂಪಾಯಿ ದಂಡದ ಹಣ ವಸೂಲಿಯಾಗಿದೆ. 

ಇನ್ನುಳಿದಂತೆ 474 ಜನ ದಂಡ ನೀಡದೇ ಇರುವುದರಿಂದ 2ನೇ ನೋಟಿಸ್​ ಜಾರಿ ಮಾಡಿದ್ದು, ಒಂದೊಮ್ಮೆ ಅದಕ್ಕೂ ಅವರು ಕಾರ್ಡ್‌ ಹಿಂತಿರುಗಿಸದೇ ಹೋದರೆ ನೇಮಕಾತಿ ಸಕ್ಷಮ ಪ್ರಾಧಿಕಾರಕ್ಕೆ ಪತ್ರ ಬರೆದು ಕೆಸಿಎಸ್​ಆರ್​ ನಿಯಮದ ಪ್ರಕಾರ ಶಿಸ್ತು ಕ್ರಮಕ್ಕೆ ಇಲಾಖೆ ಮುಂದಾಗಿದೆ ಎಂದು ಬಾಗಲಕೋಟೆ ಆಹಾರ ಇಲಾಖೆ ಜಂಟಿ ನಿರ್ದೆಶಕ ಶ್ರೀಶೈಲ ಕಂಕಣವಾಡಿ ತಿಳಿಸಿದ್ದಾರೆ. ಇನ್ನು ಪಡಿತರ ಚೀಟಿ ಪಡೆಯಲು ಬಡ ಜನರು ಹರಸಾಹಸ ಪಡುತ್ತಿದ್ದು, ಇಲ್ಲಿಯವರೆಗೂ ಕೆಲವರಿಗೆ ರೇಶನ್​ ಕಾರ್ಡ ಸಹ ಸಿಕ್ಕಿಲ್ಲ. ಇವುಗಳ ಮಧ್ಯೆ ಇಂದು ಸರ್ಕಾರದ ನೌಕರಿ ಪಡೆದು ಸರ್ಕಾರಿ ವೇತನ ಪಡೆಯುತ್ತಿದ್ದರೂ ಸಹ ಬಡಜನರಿಗಾಗಿ ಮೀಸಲಾಗಿರೋ ರೇಶನ್​ ಕಾರ್ಡ್‌ಗಳನ್ನ ಸರ್ಕಾರಿ ನೌಕರರು ಹೊಂದಿರೋದು ಬಹಳಷ್ಟು ಖೇದಕರ ಸಂಗತಿಯಾಗಿದೆ.

ರಂಗನಾಥ ಸ್ವಾಮಿಗೆ ಇಲ್ಲಿ ಸಾರಾಯಿ ನೈವೇದ್ಯ: ಮದ್ಯ ನೈವೇದ್ಯ ಸಲ್ಲಿಸಿ ಕೃತಾರ್ಥರಾಗ್ತಾರೆ ಭಕ್ತವೃಂದ

ಇಂತಹ ನೌಕರಸ್ಥರ ವಿರುದ್ದ ದಂಡ ವಸೂಲಿ ಸೇರಿದಂತೆ ಸೂಕ್ತ ಕ್ರಮ ಕೈಗೊಳ್ಳುವಂತಾಗಬೇಕು. ಇನ್ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಅದೇನೆ ಇರಲಿ ಒಟ್ಟಿನಲ್ಲಿ ಸರ್ಕಾರ ಬಡಜನರಿಗಾಗಿ ಅಂತ ಮಾಡಿರುವ ರೇಶನ್​ ಕಾರ್ಡ್​ಗಳಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ 824 ಜನ ಸರ್ಕಾರಿ ನೌಕರರ ಹೆಸರು ಪತ್ತೆಯಾಗಿರೋದು ಮಾತ್ರ ದುರದೃಷ್ಟಕರ ಸಂಗತಿಯಾಗಿದ್ದು, ಇನ್ಮುಂದೆಯಾದರೂ ಇಂತಹ ಪ್ರಕರಣಗಳು ನಡೆಯದಂತೆ ಸರ್ಕಾರ ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳಲಿ ಅನ್ನೋದೆ ಸಾರ್ವಜನಿಕರ ಆಶಯ.

click me!