ಕಾಂಗ್ರೆಸ್ ಹಿರಿಯ ಶಾಸಕ ಹೆಚ್ ಕೆ ಪಾಟೀಲರಿಗೆ ಮಾತೃವಿಯೋಗ

By Govindaraj S  |  First Published Apr 4, 2022, 8:22 PM IST

ಕಾಂಗ್ರೆಸ್ ಹಿರಿಯ ನಾಯಕ, ಮಹಾರಾಷ್ಟ್ರ ಉಸ್ತುವಾರಿ ಹೆಚ್ ಕೆ ಪಾಟೀಲರ ತಾಯಿ ಪದ್ಮಾವತಿ ಪಾಟೀಲ ಅವರು ನಿಧನ ಹೊಂದಿದ್ದಾರೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಪದ್ಮಾವತಿ ಕೃಷ್ಣಗೌಡ ಪಾಟೀಲ (90) ಅವರನ್ನ ಕಳೆದ ಕೆಲ ದಿನಗಳ ಹಿಂದೆ ಹುಲಕೋಟೆಯ ಆರ್ಎಮ್ ಎಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.


ಗದಗ (ಏ.04): ಕಾಂಗ್ರೆಸ್ (Congress) ಹಿರಿಯ ನಾಯಕ, ಮಹಾರಾಷ್ಟ್ರ ಉಸ್ತುವಾರಿ ಹೆಚ್ ಕೆ ಪಾಟೀಲರ (HK Patil) ತಾಯಿ ಪದ್ಮಾವತಿ ಪಾಟೀಲ (Padmavati Patil) ಅವರು ನಿಧನ ಹೊಂದಿದ್ದಾರೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಪದ್ಮಾವತಿ ಕೃಷ್ಣಗೌಡ ಪಾಟೀಲ (90) ಅವರನ್ನ ಕಳೆದ ಕೆಲ ದಿನಗಳ ಹಿಂದೆ ಹುಲಕೋಟೆಯ ಆರ್ಎಮ್ ಎಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. 

ಹೆಚ್ಚಿನ ಚಿಕಿತ್ಸೆಗೆ ಹಾಗೂ ಸ್ಕ್ಯಾನಿಂಗ್ ಗಾಗಿ ಹುಬ್ಬಳ್ಳಿಗೆ ಕರೆತರಲಾಗಿತ್ತು. ಆದರೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲೇ ಹೃದಯಾಘಾತದಿಂದ ಪದ್ಮಾವತಿ ಪಾಟೀಲರು ಮೃತ ಪಟ್ಟಿದ್ದಾರೆಂದು ಪಾಟೀಲ ಕುಟುಂಬದ ಆಪ್ತರು ತಿಳಿಸಿದ್ದಾರೆ. ಮಾಜಿ ಸಚಿವ, ದಿವಂಗತ ಕೆ ಹೆಚ್ ಪಾಟೀಲ ಅವರ ಧರ್ಮ ಪತ್ನಿಯಾಗಿದ್ದ ಅವರು ರಾಜಕೀಯ ಚಟುವಟಿಕೆಯಿಂದ ದೂರವೇ ಇದ್ದರು. 

Latest Videos

ಪದ್ಮಾವತಿಯವರಿಗೆ ಮಹಾರಾಷ್ಟ್ರ ಉಸ್ತುವಾರಿ ಕಾಂಗ್ರೆಸ್ ಹಿರಿಯ ನಾಯಕ ಹೆಚ್ ಕೆ ಪಾಟೀಲ ಹಾಗೂ ಕಿರಿಯ ಮಗ ಪ್ರಹ್ಲಾದ್ ಗೌಡ ಪಾಟೀಲ ಇಬ್ಬರು ಮಕ್ಕಳು. ಕೆ ಹೆಚ್ ಪಾಟೀಲ ಹಾಗೂ ಪುತ್ರ ಹೆಚ್ ಕೆ ಪಾಟೀಲ ರಾಜಕೀಯವಾಗಿ ಉತ್ತುಂಗದಲ್ಲಿದ್ದಾಗಲೂ ರಾಜಕೀಯ ಹಸ್ತಕ್ಷೇಪ ಮಾಡಿಲ್ಲ. ಕೃಷಿಯನ್ನೇ ಪ್ರೀತಿಸಿ ಬದುಕಿದ ಜೀವ ಪದ್ಮಾವತಿಯವರದ್ದು. ಧಾರ್ಮಿಕ ವಿಧಿವಿಧಾನದಂತೆ ನಾಳೆ ಹುಲಕೋಟಿ ಗ್ರಾಮದ ರುದ್ರ ಭೂಮಿಯಲ್ಲಿ ಮಧ್ಯಾಹ್ನ 2 ಗಂಟೆಗೆ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ ಎಂದು ಹೆಚ್ ಕೆ ಪಾಟೀಲರ ಆಪ್ತರು ತಿಳಿಸಿದ್ದಾರೆ.

click me!