ಈ ಬಾರಿ ಬಿಸಿಲ ಬೇಗೆ ಜನರನ್ನು ಮಾತ್ರವಲ್ಲ ಪ್ರಾಣಿಗಳಿಗೂ ಸಂಕಷ್ಟವನ್ನು ತಂದೊಡ್ಡಿದೆ. ಅದರಲ್ಲೂ ಮೃಗಾಲಯದ ಪ್ರಾಣಿಗಳು ಬಿಸಿಲ ಬೇಗೆಯಿಂದ ಬಳಲಿ ಬೆಂಡಾಗಿದ್ದವು. ಇದೀಗ ಈ ಪ್ರಾಣಿಗಳ ಸಂಕಷ್ಟ ಪರಿಹರಿಸಲು ಮೃಗಾಲಯದ ಅಧಿಕಾರಿಗಳು ಸ್ಪ್ರಿಂಕ್ಲರ್‌ಗಳ ಮೊರೆ ಹೋಗಿದ್ದಾರೆ.
ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್ ಮೈಸೂರು.
ಮೈಸೂರು (ಏ.04): ಈ ಬಾರಿ ಬಿಸಿಲ ಬೇಗೆ (Summer) ಜನರನ್ನು ಮಾತ್ರವಲ್ಲ ಪ್ರಾಣಿಗಳಿಗೂ ಸಂಕಷ್ಟವನ್ನು ತಂದೊಡ್ಡಿದೆ. ಅದರಲ್ಲೂ ಮೃಗಾಲಯದ (Zoo) ಪ್ರಾಣಿಗಳು (Animals) ಬಿಸಿಲ ಬೇಗೆಯಿಂದ ಬಳಲಿ ಬೆಂಡಾಗಿದ್ದವು. ಇದೀಗ ಈ ಪ್ರಾಣಿಗಳ ಸಂಕಷ್ಟ ಪರಿಹರಿಸಲು ಮೃಗಾಲಯದ ಅಧಿಕಾರಿಗಳು ಸ್ಪ್ರಿಂಕ್ಲರ್‌ಗಳ ಮೊರೆ ಹೋಗಿದ್ದಾರೆ. ಆನೆಗಳಿಗೆ ಶವರ್ ಬಾತ್, ಜಿರಾಫೆಗೆ ನೀರಿನ ಸಿಂಚನ, ಸಿಂಹಕ್ಕೆ ಕೃತಕ ಮಳೆ ಹನಿಗಳ ತಂಪು, ನೀರಿನಲ್ಲಿ ಆಟ ಆಡಿ ಗಮನ ಸೆಳೆಯುತ್ತಿರುವ ಗೊರಿಲ್ಲಾಗಳು. ಇದು ಮೈಸೂರು ಮೃಗಾಲಯದ (Mysuru Zoo) ಪ್ರಾಣಿಗಳು ತಂಪಾಗಿರಿಸಲು ಮೈಸೂರು ಮೃಗಾಲಯದ ಅಧಿಕಾರಿಗಳು ಮಾಡಿರುವ ವ್ಯವಸ್ಥೆ.
undefined
ಹೌದು! ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ಮೈಸೂರು ಮೃಗಾಲಯದ ಪ್ರಾಣಿಗಳೀಗ ತಂಪು ತಂಪು ಕೂಲ್ ಕೂಲ್ ಆಗಿವೆ. ಇದಕ್ಕೆ ಕಾರಣ ಮೈಸೂರು ಮೃಗಾಲಯದಲ್ಲಿ ಅಳವಡಿಸಿರುವ ನೀರು ಸಿಂಪಡಿಸುವ ಯಂತ್ರಗಳು ಹಾಗೂ ಆನೆಗಳಿಗಾಗಿಯೇ ವಿಶೇಷವಾಗಿ ಸಿದ್ಧಪಡಿಸಿರುವ ಶವರ್. ಈ ರೀತಿಯಾದ ನೀರಿನ ಸ್ಪ್ರಿಂಕ್ಲರ್‌ಗಳನ್ನು ಪ್ರತಿಯೊಂದು ಪ್ರಾಣಿಗಳ ವಾಸಸ್ಥಾನದಲ್ಲೂ ಅಳವಡಿಸಲಾಗಿದೆ. ಪ್ರತಿ ಮೂರು ಗಂಟೆಗೊಮ್ಮೆ ಈ ಸ್ಪ್ರಿಂಕರ್‌ಗಳನ್ನು ಹಾಕಲಾಗುತ್ತದೆ. ಈ ಸ್ಪ್ರಿಂಕರ್‌ಗಳಿಂದ ಚಿಮ್ಮುವ ನೀರಿನಲ್ಲಿ ಮೃಗಾಲಯದ ಪ್ರಾಣಿಗಳು ಸಖತ್ ಎಂಜಾಯ್ ಮಾಡ್ತಾ ಇವೆ. ಇನ್ನು ಇದರ ಜೊತೆಗೆ ಪ್ರಾಣಿಗಳ ಆಹಾರ ಪದ್ಧತಿಯಲ್ಲಿಯೂ ಬದಲಾವಣೆ ಮಾಡಲಾಗಿದೆ.
Pariksha Pe Charcha: ಭಯ ಬಿಟ್ಟು ಪರೀಕ್ಷೆ ಎದುರಿಸಿ: ದೇಶದ ವಿದ್ಯಾರ್ಥಿಗಳಿಗೆ ಪ್ರಧಾನಿಗಳ ಧೈರ್ಯದ ಮಾತು
ಸಸ್ಯಹಾರಿ ಪ್ರಾಣಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹಣ್ಣು ಪದಾರ್ಥಗಳನ್ನು ನೀಡಲಾಗುತ್ತಿದೆ. ಮೊಸರು ಸೇರಿದಂತೆ ದ್ರವರೂಪದ ಪದಾರ್ಥಗಳನ್ನು ನೀಡಲಾಗುತ್ತಿದೆ. ಇನ್ನು ಮಾಂಸಹಾರಿ ಪ್ರಾಣಿಗಳಿಗೆ ತಣ್ಣನೆಯ ಮಾಂಸವನ್ನು ನೀಡಲಾಗುತ್ತಿದೆ. ಪ್ರಾಣಿಗಳ ಆರೋಗ್ಯದ ದೃಷ್ಟಿಯಿಂದ ಮೃಗಾಲಯ ಆಡಳಿತ ಮಂಡಳಿ ಕೈಗೊಂಡಿರುವ ಕ್ರಮಕ್ಕೆ ಪ್ರಾಣಿಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೇಸಿಗೆ ಮುಗಿಯುವ ವರೆಗೂ ಇದೇ ವ್ಯವಸ್ಥೆ ಮುಂದುವರಿಸಲು ನಿರ್ಧರಿಸಲಾಗಿದೆ. ಪ್ರಾಣಿಗಳಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಇದು ಪ್ರಾಣಿಗಳಿಗೂ ಸಖತ್ ಖುಷಿ ನೀಡಿದೆ. ಒಟ್ಟಾರೆ ಈ ಮೂಲಕ ಮೈಸೂರು ಮೃಗಾಲಯದಲ್ಲಿ ಪ್ರಾಣಿಗಳು ಕೂಲ್ ಕೂಲ್ ಆಗಿವೆ.
ಆನೆ ದತ್ತು ಪಡೆದ ಸಚಿವ ಸೋಮಶೇಖರ್: ಶ್ರೀ ಚಾಮರಾಜೇಂದ್ರ ಮೃಗಾಲಯದಚಾಮುಂಡಿ ಆನೆಯನ್ನು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ (ST Somashekhar) ದತ್ತು ಸ್ವೀಕರಿಸಿದ್ದಾರೆ. 1.75 ಲಕ್ಷ ಪಾವತಿಸಿದ ಸಚಿವರು, ಒಂದು ವರ್ಷದ ಅವಧಿಗೆ ದತ್ತು ಸ್ವೀಕರಿಸಿದರು. ಬಳಿಕ ಮಲೇಷಿಯಾ ಮತ್ತು ಸಿಂಗಾಪುರದಿಂದ ತರಲಾದ ಒರಾಂಗೂಟಾನ್ ವೀಕ್ಷಿಸಿದರು. ಮೈಸೂರು ಮೃಗಾಲಯವು ಸುಮಾರು 50 ವರ್ಷಗಳ ಹಿಂದೆ ಒಂದು ಜೊತೆ ಒರಾಂಗೂಟಾನ್ ಹೊಂದಿತ್ತು. ಪ್ರವಾಸಿಗರಿಗೆ ಈ ಅಪರೂಪದ ಪ್ರಾಣಿಯನ್ನು ಮತ್ತೆ ನೋಡುವ ಅವಕಾಶ ಒದಗಿಸಲು ಮಲೇಶಿಯಾದಿಂದ ಒಂದು ಜೊತೆ ಹಾಗೂ ಸಿಂಗಾಪುರದಿಂದ ಒಂದು ಜೊತೆ ತರಿಸಿಕೊಳ್ಳಲಾಗಿದೆ.
ಚಿಕ್ಕಮಗಳೂರು: ಕಾಡಾನೆಗಳ ಹಾವಳಿಗೆ ಆಪರೇಷನ್ ಎಲಿಫೆಂಟ್
ಅಂತೆಯೇ ಅಳಿವಿನ ಹಂಚಿನಲ್ಲಿರುವ ಅಪರೂಪದ ಗೊರಿಲ್ಲಾವನ್ನು ವೀಕ್ಷಿಸಿದರು. ಮೃಗಾಲಯದಲ್ಲಿ ಪ್ರಾಣಿಗಳ ಅನುಕೂಲಕ್ಕಾಗಿ ಕೈಗೊಂಡಿರುವ ಕಾಮಗಾರಿಯನ್ನು ವೀಕ್ಷಿಸಿದರು. ಈ ವೇಳೆ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಅವರು ಸಚಿವರನ್ನು ಅಭಿನಂದಿಸಿದರು. ಬಳಿಕ ಮಾತನಾಡಿ ಸಚಿವರು, ಮಲೇಷಿಯಾ- ಸಿಂಗಾಪುರದಿಂದ ತರಿಸಲಾಗಿರುವ ಅಪರೂಪದ ಪ್ರಾಣಿಗಳನ್ನು ವೀಕ್ಷಿಸುತ್ತಿದ್ದೇನೆ. ಮೃಗಾಲಯಕ್ಕೆ ಬರುವ ಪ್ರವಾಸಿಗರಿಗೆ ಹೊಸ ಪ್ರಾಣಿಗಳನ್ನು ತೋರಿಸಬೇಕೆಂದು ಅಧಿಕಾರಿಗಳು ಶ್ರಮವಹಿಸಿದ್ದಾರೆ ಎಂದರು. ಗೊರಿಲ್ಲಾ ಮತ್ತು ಒರಾಂಗೂಟಾನ್ ಪ್ರಾಣಿಗಳ ಅನುಕೂಲಕ್ಕಾಗಿ ಉದಾರವಾಗಿ ನೆರವು ನೀಡಿರುವ ಇನ್ಪೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿ ಅವರು 3 ಕೋಟಿ, ರಿಸರ್ವ ಬ್ಯಾಂಕ್ ತನ್ನ ಸಿಎಸ್‌ಆರ್ ಅನುದಾನದಲ್ಲಿ ಅನುದಾನ ನೆರವು ನೀಡಿದೆ.